ಸಿದ್ದಗಂಗಾ ಮಠಕ್ಕೆ ಎಚ್‌ಡಿಕೆ, ಮಠದ ಸಿಬ್ಬಂದಿ ಜೊತೆ ತುರ್ತು ಸಭೆ
ತುಮಕೂರು, ಜನವರಿ 21: ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತುಮಕೂರಿಗೆ ತುರ್ತಾಗಿ ಆಗಮಿಸುತ್ತಿದ್ದಾರೆ.
ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಆಗಮಿಸಲಿರುವ ಕುಮಾರಸ್ವಾಮಿ ಅವರು, ತುರ್ತಾಗಿ ಮಠದ ಕಿರಿಯ ಸ್ವಾಮೀಜಿಗಳು, ಮಠದ ಆಡಳಿತ ಮಂಡಳಿ, ಜಿಲ್ಲಾ ಪೊಲೀಸ್ ವರಿಷ್ಠರು ಮತ್ತು ಮಠದ ಪ್ರಮುಖರ ಜೊತೆ ತುರ್ತು ಸಭೆ ನಡೆಸಲಿದ್ದಾರೆ.
ಶ್ರೀಗಳ ಆರೋಗ್ಯ ಸ್ಥಿತಿ ಬಗ್ಗೆ ಚಿಂತಿತರಾಗಿರುವ ಭಕ್ತಾದಿಗಳು ಈಗಾಗಲೇ ರಾಜ್ಯದ ಹಲವೆಡೆಯಿಂದ ಮಠದ ಕಡೆ ಆಗಮಿಸುತ್ತಿದ್ದು, ಭದ್ರತೆ ವ್ಯವಸ್ಥೆ ಮತ್ತಿತರೆ ವ್ಯವಸ್ಥೆಗಳ ಬಗ್ಗೆ ಸಿಎಂ ಅವರು ಮಾಹಿತಿ ಪಡೆಯಲಿದ್ದು, ಸೂಚನೆಗಳನ್ನು ಸಹ ನೀಡಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಸಹ ಮಠಕ್ಕೆ ಆಗಮಿಸುತ್ತಿದ್ದು, ಅವರೂ ಸಹ ಕಿರಿಯ ಸ್ವಾಮೀಜಿಗಳ ಜೊತೆ ಮಾತನಾಡಲಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿದ್ದ ಯಡಿಯೂರಪ್ಪ ಅವರು ಸಿದ್ದಗಂಗಾ ಮಠದೆಡೆಗೆ ಪ್ರಾಯಾಣ ಬೆಳೆಸಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಅಂತಿಮ ಯತ್ನಗಳನ್ನು ಮಾಡುತ್ತಿದ್ದಾರೆ.












Click it and Unblock the Notifications