ಶಿರಾ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಪೂಜೆ ಸಂದರ್ಭದಲ್ಲಿ ವಿಘ್ನ?
ಬೆಂಗಳೂರು, ನ. 03: ರಾಜಕಾರಣಿಗಳು ದೇವರು-ದೈವದ ಕುರಿತು ಬಹಳಷ್ಟು ನಂಬಿಕೆಯನ್ನು ಹೊಂದಿರುತ್ತಾರೆ. ಹೀಗಾಗಿ ಕೆಲ ಬಾರಿ ಚುನಾವಣೆ ಸಂದರ್ಭದಲ್ಲಿ ನಿಯಮಕ್ಕೆ ವಿರುದ್ಧವಾಗಿ ಮತ ಯಂತ್ರಗಳಿಗೆ ಪೂಜೆ ಸಲ್ಲಿಸಿರುವ ಉದಾಹರಣೆಗಳು ಸಾಕಷ್ಟು ಈ ಹಿಂದೆ ನಡೆದಿವೆ. ಶಿರಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ಶಿರಾ ತಾಲೂಕಿನ ಚಿರತನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಅದಕ್ಕೂ ಮೊದಲು ಆಂಜನೇಯ ಹಾಗೂ ಕರಿಯಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆದರೆ ಡಾ. ರಾಜೇಶ್ ಗೌಡ ಅವರು ಪೂಜೆ ಸಲ್ಲಿಸುವಾಗ ವಿಘ್ನವಾಗಿದೆ ಎಂದು ತಿಳಿದು ಬಂದಿದೆ. ಡಾ. ರಾಜೇಶ್ ಗೌಡ ಅವರು ಆಂಜನೇಯ ಸ್ವಾಮಿಜಿಗೆ ಪೂಜೆ ಸಲ್ಲಿಸುವ ವೇಳೆ ಅಪಶಕುನವಾಗಿದೆ. ದೇವರ ಆರತಿ ಮಾಡಿ ರಾಜೇಶ್ ಗೌಡ ಅವರು ಪೂಜೆ ನೆರವೇರಿಸಿ ದೇವರ ಆಶೀರ್ವಾದ ಪಡೆಯುವ ಮೊದಲು ನಂದಾದೀಪ ಆರಿದೆ. ಹೀಗಾಗಿ ಅರ್ಚಕರು ಮತ್ತೆ ದೀಪ ಹಚ್ಚಿ ಮಂಗಳಾರತಿ ಮಾಡಿದ್ದಾರೆ. ಮತದಾನಕ್ಕೂ ಮೊದಲು ಡಾ. ರಾಜೇಶ್ ಗೌಡ ಅವರ ಸ್ವಗ್ರಾಮ ಚಿರತಹಳ್ಳಿಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.

Live Updates; ಆರ್. ಆರ್. ನಗರ, ಶಿರಾ; ಚುರುಕಿನಿಂದ ಸಾಗಿದೆ ಮತದಾನ
ಇದೀಗ ಮತದಾನದ ದಿನವೇ ದೇವರ ದರ್ಶನ ಪಡೆಯುವಾಗ ಈ ಅಪಶುಕನ ನಡೆದಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ ಎನ್ನಲಾಗಿದೆ. ಇದೀಗ ಡಾ. ರಾಜೇಶ್ ಗೌಡ ಅವರು ಮತದಾನದ ಮಾಡಿದ್ದು ಗೆಲವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.













Click it and Unblock the Notifications