ಓಣಂ ಸೀಸನ್ ದಾಖಲೆ: ಮಲ್ಲುಗಳ ಮದ್ಯ ಸೇವನೆ ಚಟಕ್ಕೆ ಮಿತಿಯೇ ಇಲ್ಲ!
ತಿರುವನಂತಪುರಂ, ಸೆ.13: ಕೇರಳಿಗರ ಪ್ರಮುಖ ಹಬ್ಬ ಓಣಂ ಸಂದರ್ಭದಲ್ಲಿ ಮಲ್ಲುಗಳು ಸರಿ ಸುಮಾರು 487 ಕೋಟಿ ರುಗಳನ್ನು ಖರ್ಚು ಮಾಡಿದ್ದಾರೆ.
ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ನಡೆಸಿದ ಲೆಕ್ಕಾಚಾರದಿಂದ ಈ ಮೊತ್ತ ಸಿಕ್ಕಿದೆ. ಕೇರಳ ರಾಜ್ಯ ಅಬಕಾರಿ ನಿಗಮ(ಕೆಎಸ್ ಬಿಸಿ) ಯಿಂದ ಭಾರತೀಯರಿಂದ ತಯಾರಾದ ವಿದೇಶಿ ಮದ್ಯ(ಐಎಂ ಎಫ್ ಎಲ್) ಗಳನ್ನು ಮಾರಾಟ ಮಾಡಲಾಗುತ್ತದೆ. ಸೆಪ್ಟೆಂಬರ್ 3 ರಿಂದ 10ರ ಅವಧಿಯಲ್ಲಿ ಸುಮಾರು 487 ಕೋಟಿ ರು ಮೌಲ್ಯದ ಮದ್ಯ ಸೇವನೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 30 ಕೋಟಿ ರು ಅಧಿಕ ವ್ಯಾಪಾರ ನಡೆದಿದೆ.
ಸೆಪ್ಟೆಂಬರ್ 10ರಂದು ಉತ್ತರಾದಂ ಸಂದರ್ಭದಲ್ಲಿ ಮದ್ಯ ಮಳಿಗೆಗಳು ಸಾಮಾನ್ಯವಾಗಿ ಬಂದ್ ಆಗಿರುತ್ತವೆ, ಆದರೂ ಕದ್ದು ಮುಚ್ಚಿ ಕುಡಿಯುವವರಿಂದ ಆ ದಿನವೂ 90.32 ಕೋಟಿ ರು ಮೌಲ್ಯದ ಮದ್ಯ ಮಾರಾಟವಾಗಿದೆ.

ತ್ರಿಶೂರ್ ಜಿಲ್ಲೆಯ ಇರಿಂಜಲಕುಡದ ಮಳಿಗೆಯೊಂದರಲ್ಲಿ ಒಂದೇ ದಿನ 1.04 ಕೋಟಿ ರು ಮದ್ಯ ಮಾರಾಟವಾಗಿದ್ದು ದಾಖಲೆ ಬರೆದಿದೆ ಎಂದು ಕೆಎಸ್ ಬಿಸಿ ಹೇಳಿದೆ.
ಸೆ. 13ರಂದು 'ಡ್ರೈ ಡೇ' ಆಗಿದೆ. ಸಮಾಜ ಸುಧಾರಕ ನಾರಾಯಣ ಗುರು ಜಯಂತಿ ಅಂಗವಾಗಿ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಹೀಗಾಗಿ ಗುರುವಾರದಂದು ಮದ್ಯ ಮಳಿಗೆಗಳ ಮುಂದೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು.
ಭಾರತದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯಗಳ ಪೈಕಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ಕುಡುಕರ ರಾಜ್ಯ ಕೇರಳದಲ್ಲಿ 2014ರಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಉಮ್ಮನ್ ಚಾಂಡಿ ಸರ್ಕಾರ ಸುಮಾರು 700 ಬಾರ್ ಗಳನ್ನು ಬಂದ್ ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಲಿಕ್ಕರ್ ಲಾಬಿ ಜೋರಾಗಿ, ಆಡಳಿತ ಪಕ್ಷ ಬದಲಾಗಿ ಎಲ್ ಡಿ ಎಫ್ ಸರ್ಕಾರ ಬರುತ್ತಿದ್ದಂತೆ ಮದ್ಯ ಮಾರಾಟ ಮೇಲಿನ ನಿಷೇಧ ಹಿಂಪಡೆಯಲಾಗಿದೆ. ಮದ್ಯದ ಮೇಲೆ 200% ತೆರಿಗೆ ಹೇರಲಾಗಿದ್ದರೂ ಮಾರಾಟ ಕುಸಿದಿಲ್ಲ, ಕುಡುಕರ ಸಂಖ್ಯೆ ತಗ್ಗಿಲ್ಲ.
-
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು?












Click it and Unblock the Notifications