ರಾಹುಲ್ ಗಾಂಧಿ ಮಾನವೀಯ ನಡೆಗೆ ನೆಟ್ಟಿಗರು ಖುಷ್‌

ತಿರುವನಂತಪುರಂ, ಆಗಸ್ಟ್ 29: ರಾಹುಲ್ ಗಾಂಧಿ ಅವರ ಮಾನವೀಯ ನಡೆಗೆ ಅವರ ಅಭಿಮಾನಿಗಳು, ನೆಟ್ಟಿಗರು ಭಲೆ ಎಂದಿದ್ದಾರೆ.

ಎರಡು ದಿನಗಳ ಕೇರಳ ಭೇಟಿಗೆ ಬಂದಿದ್ದ ರಾಹುಲ್ ಗಾಂಧಿ ನಿನ್ನೆ, ಚೆಂಗನೂರು ಕ್ರಿಸ್ಟಿಯನ್ ಕಾಲೇಜಿನ ಬಳಿಯ ಹೆಲಿಪ್ಯಾಡ್‌ ನಲ್ಲಿ ಹೆಲಿಕಾಪ್ಟರ್‌ಗೆ ಹತ್ತಿದ್ದಾರೆ. ಅದೇ ವೇಳೆಗೆ ಆಂಬುಲೆನ್ಸ್‌ ಒಂದು ಹೆಲಿಪ್ಯಾಡ್‌ಗೆ ಬಂದಿದೆ.

ಇದನ್ನು ಗಮನಿಸಿದ ರಾಹುಲ್ ಗಾಂಧಿ ಆಂಬುಲೆನ್ಸ್‌ ಬಳಿ ತೆರಳಿ ಮಾಹಿತಿ ಪಡೆದಾಗ, ಆ ವ್ಯಕ್ತಿಯು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದು, ಕೂಡಲೇ ಆತನನ್ನು ಏರ್‌ ಆಂಬುಲೆನ್ಸ್‌ ಮೂಲಕ ಅಲಾಪುಜಾದ ಆಸ್ಪತ್ರೆಗೆ ಶೀಘ್ರವೇ ಕರೆದುಕೊಂಡು ಹೋಗಬೇಕಿರುವ ವಿಷಯ ತಿಳಿದಿದೆ.

Rahul Gandhi delays his Helicopter for Air Ambulance

ತಮ್ಮ ಎಸ್‌ಪಿಜಿ ಕಮಾಂಡೊಗಳಿಗೆ ಹೇಳಿ ಹೊರಡಲು ತಯಾರಾಗಿದ್ದ ತಮ್ಮ ಹೆಲಿಕಾಪ್ಟರ್‌ ಅನ್ನು ಕೂಡಲೇ ನಿಲ್ಲಿಸುವಂತೆ ಹೇಳಿ ಹೆಲಿ ಆಂಬುಲೆನ್ಸ್‌ ಬೇಗ ಹೊರಡಲು ಅನುವು ಮಾಡಿದಕ್ಕೊಟ್ಟಿದ್ದಾರೆ. ಹೆಲಿ ಆಂಬುಲೆನ್ಸ್ ಮೊದಲು ಹೊರಡು ಸುಮಾರು ಅರ್ಧಗಂಟೆ ಕಾದಿದ್ದು ಆನಂತರ ರಾಹುಲ್ ಗಾಂಧಿ ಅಲ್ಲಿಂದ ಹೊರಟಿದ್ದಾರೆ.

ರಾಹುಲ್ ಗಾಂಧಿ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+