ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತತ 19 ಬಾರಿ ಕೊರೊನಾ ಪರೀಕ್ಷೆ ಮಾಡಿದ್ರೂ ಫಲಿತಾಂಶ 'ಪಾಸಿಟಿವ್'

|
Google Oneindia Kannada News

ತಿರುವನಂತಪುರಂ, ಏಪ್ರಿಲ್ 21: ಕೊರೊನಾ ವೈರಸ್‌ಗೆ ಇದುವರೆಗೂ ಯಾರೂ ಚಿಕಿತ್ಸೆ ಕಂಡುಹಿಡಿದಿಲ್ಲ. ಮನುಷ್ಯನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಮತ್ತು ವೈದ್ಯರು ನೀಡುವ ಕೆಲವು ನಿರ್ದಿಷ್ಟ ಚಿಕಿತ್ಸೆಗಳು ಈ ವೈರಸ್‌ನಿಂದ ಪಾರಾಗಲು ನೆರವಾಗುತ್ತಿದೆ.

Recommended Video

ಪಾದರಾಯನಪುರದಲ್ಲಿ ಹಲ್ಲೆ‌ಮಾಡಿದ 54 ಮಂದಿ ಅರೆಸ್ಟ್.ಇವರೇ ಆ ಕಿಡಿಗೇಡಿಗಳು | Padrayanapura vandalism | Arrested

ಬೆಂಗಳೂರು: 35 ಹಾಟ್ ಸ್ಪಾಟ್ ವಾರ್ಡಿನ 18 ಕಂಟೇನ್ಮೆಂಟ್ ಏರಿಯಾಗಳ ಪಟ್ಟಿ ಬೆಂಗಳೂರು: 35 ಹಾಟ್ ಸ್ಪಾಟ್ ವಾರ್ಡಿನ 18 ಕಂಟೇನ್ಮೆಂಟ್ ಏರಿಯಾಗಳ ಪಟ್ಟಿ

ಈ ಸೋಂಕು ಕಾಣಿಸಿಕೊಂಡರೆ 14 ದಿನ ಕ್ವಾರೆಂಟೈನ್‌ ಮಾಡಲಾಗುತ್ತೆ. ಬಳಿಕ ಕೊರೊನಾ ಪರೀಕ್ಷೆ ಮಾಡಿ ಆಗ ನೆಗಿಟಿವ್ ಬಂದರೆ ಅವರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ ಎಂದು ನಿರ್ಧರಿಸಲಾಗುತ್ತೆ. ಕೆಲವರಿಗೆ 14 ದಿನ, ಇನ್ನು ಕೆಲವರಿಗೆ 28 ದಿನ ಆಗಬಹುದು. ಒಂದು ಸಲ ಪರೀಕ್ಷಿಸಬಹುದು, ಎರಡು ಸಲ ಪರೀಕ್ಷಿಸಬಹುದು ಅಥವಾ ಆ ಪರೀಕ್ಷೆ ಐದು ಆಗಬಹುದು, ಹತ್ತು ಆಗಬಹುದು.

ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಅಡ್ಡಿ ಕೊರೊನಾ ಸೋಂಕಿನಿಂದ ಮೃತಪಟ್ಟ ವೈದ್ಯರ ಅಂತ್ಯಕ್ರಿಯೆಗೂ ಅಡ್ಡಿ

ಕೇರಳದಲೊಬ್ಬ ಮಹಿಳೆಯನ್ನು ಇದುವರೆಗೂ 19 ಬಾರಿ ಕೊರೊನಾ ಪರೀಕ್ಷೆ ಒಳಪಡಿಸಲಾಗಿದೆ. 19 ಸಲವೂ ಆಕೆಗೆ ಪಾಸಿಟಿವ್ ಬಂದಿದೆ ಎನ್ನುವುದು ವಿಶೇಷ ಪ್ರಕರಣ ಎನಿಸಿಕೊಂಡಿದೆ. ಮುಂದೆ ಓದಿ....

42 ದಿನದಿಂದ ಆಸ್ಪತ್ರೆಯಲ್ಲಿದ್ದಾರೆ

42 ದಿನದಿಂದ ಆಸ್ಪತ್ರೆಯಲ್ಲಿದ್ದಾರೆ

ಕೇರಳದ ಪಥನಮತ್ತಿಟ್ಟದಲ್ಲಿ 62 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿತ್ತು. ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 42 ದಿನ ಕಳೆದರೂ ಆ ಮಹಿಳೆಯಲ್ಲಿ ಕೊರೊನಾ ಸೋಂಕು ಮಾಯವಾಗಿಲ್ಲ. ಇದು ಸಹಜವಾಗಿ ವೈದ್ಯರಿಗೆ ಸವಾಲು ಆಗಿದ್ದು, ಚಿಂತೆ ಹುಟ್ಟುಹಾಕಿದೆ.

ಲಕ್ಷಣ ಇಲ್ಲ, ಆದರೂ ಪಾಸಿಟಿವ್

ಲಕ್ಷಣ ಇಲ್ಲ, ಆದರೂ ಪಾಸಿಟಿವ್

''ಇಟಲಿಯಿಂದ ಭಾರತಕ್ಕೆ ಬಂದಿದ್ದ ಕುಟುಂಬದ ಜೊತೆ ಸಂಪರ್ಕದಲ್ಲಿದ್ದ ಕಾರಣ ಸೋಂಕಿಗೆ ತುತ್ತಾಗಿದ್ದಳು. ಇದುವರೆಗೂ 19 ಸಲ ಪರೀಕ್ಷೆ ಮಾಡಲಾಗಿದೆ. ಪಾಸಿಟಿವ್ ಬರ್ತಿದೆ. ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ. ನಾವು ಹಲವು ವಿಧದಲ್ಲಿ ಔಷಧಗಳನ್ನು ನೀಡುತ್ತಿದ್ದೇವೆ'' ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ.ಎನ್. ಶೀಜಾ ಹೇಳಿದ್ದಾರೆ.

ಮಾರ್ಚ್ 10ರಂದು ಆಸ್ಪತ್ರೆಗೆ ದಾಖಲು

ಮಾರ್ಚ್ 10ರಂದು ಆಸ್ಪತ್ರೆಗೆ ದಾಖಲು

'ಇಟಲಿ ಕುಟುಂಬದಿಂದ ಈ ಮಹಿಳೆಗೆ ಸೋಂಕು ತಗುಲಿದೆ. ಇಟಲಿಯ ಕುಟುಂಬದಲ್ಲಿ ಏಳು ಮಂದಿಗೆ ಕೊರೊನಾ ಪತ್ತೆಯಾಗಿದೆ. ಸದ್ಯಕ್ಕೆ ಆಕೆಯಲ್ಲಿ ರೋಗದ ಲಕ್ಷಣಗಳಿಲ್ಲ. ಆಕೆಯಿಂದ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ಪರೀಕ್ಷೆ ಬಳಿಕ ನೆಗಿಟಿವ್ ಬಂದರೆ ಮಾತ್ರ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗುವುದು' ಎಂದು ವೈದ್ಯರು ಮಾಹಿತಿ ನೀಡಿದ್ದಾರೆ

29 ದಿನಗಳ ಬಳಿಕ ನೆಗಿಟಿವ್ ಬಂದಿತ್ತು

29 ದಿನಗಳ ಬಳಿಕ ನೆಗಿಟಿವ್ ಬಂದಿತ್ತು

ಇದಕ್ಕೂ ಮುಂಚೆ ದುಬೈನಿಂದ ಬಂದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. 29 ದಿನಗಳ ಬಳಿಕ ಆತನಿಗೆ ಕೊವಿಡ್ ನೆಗಿಟಿವ್ ಬಂದಿತ್ತು. ಹಾಗಾಗಿ, ಕೊರೊನಾ ಎಂಬುದು ಇಷ್ಟೆ ದಿನದಲ್ಲಿ ಹೋಗುತ್ತೆ ಅಥವಾ ರೋಗಿ ಚೇತರಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ.

ಕ್ವಾರೆಂಟೈನ್ ಅವಧಿಯೂ ಹೆಚ್ಚು

ಕ್ವಾರೆಂಟೈನ್ ಅವಧಿಯೂ ಹೆಚ್ಚು

ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್‌ಗೆ ರೋಗಕ್ಕೆ 14 ದಿನಗಳ ಕಾಲಾವಧಿ ನಿಗದಿ ಮಾಡಿತ್ತು. ಆದರೆ, ಕೇರಳ ಸರ್ಕಾರ ಅದನ್ನು 28ನೇ ದಿನಕ್ಕೆ ವಿಸ್ತರಿಸಿಕೊಂಡಿದೆ ಎಂಬ ಮಾಹಿತಿ ಇದೆ. ಯಾಕಂದ್ರೆ, 14 ದಿನ ಮುಗಿದರೂ ಸೋಂಕು ಹೋಗುತ್ತಿಲ್ಲ ಎಂಬ ವರದಿ ಬಂದಿದೆ. ಹಾಗಾಗಿ, 28 ದಿನಗಳ ಬಳಿಕ ಪರೀಕ್ಷೆ ಮಾಡಿಸಿ, ನೆಗಿಟಿವ್ ಬಂದರೆ ಮಾತ್ರ ರೋಗಿಯನ್ನು ಕಳುಹಿಸಬಹುದು.

English summary
Kerala woman tests positive 19 times after 45 days in hospital. now she is in hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X