ಈ ಶಾಸಕರ ನಿರ್ಧಾರಕ್ಕೆ ಬೆರಗಾದ ಜನರು 'ಉಘೇ' ಎಂದರು
ತಿರುವನಂತಪುರಂ, ನವೆಂಬರ್ 19: ಜನಪ್ರತಿನಿಧಿಗಳು ಸಮಾರಂಭಗಳಿಗೆ ಬಂದಾಗ ಅಥವಾ ಅವರನ್ನು ಭೇಟಿಯಾಗಲು ಬರುವ ಜನರು ಕೆ.ಜಿಗಟ್ಟಲೆ ತೂಕದ ಹೂವಿನ ಹಾರ ಹಾಕಿ ಸಂಭ್ರಮಿಸುತ್ತಾರೆ. ಇನ್ನು ಅನೇಕರು ಅಲಂಕೃತ ಬೊಕ್ಕೆಗಳನ್ನ ನೀಡುತ್ತಾರೆ. ಕೊನೆಗೆ ಅವು ಕಸದಬುಟ್ಟಿ ಸೇರುತ್ತವೆ. ಒಬ್ಬೊಬ್ಬ ಜನಪ್ರತಿನಿಧಿಯ ನಿವಾಸದಲ್ಲಿ ಹೂವಿನ ದೊಡ್ಡ ರಾಶಿಯೇ ಬಿದ್ದಿರುತ್ತದೆ. ಹಾಗೆಂದು ತಮಗೆ ಹೂವು ನೀಡುವುದು ಬೇಡ ಎಂದು ಒಬ್ಬ ಜನಪ್ರತಿನಿಧಿ ಕೂಡ ಹೇಳುವುದಿಲ್ಲ.
ಆದರೆ ಕೇರಳದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕ ವಿ.ಕೆ. ಪ್ರಶಾಂತ್, ಶ್ಲಾಘನೀಯ ಮತ್ತು ಮಾದರಿ ಹೆಜ್ಜೆ ಇರಿಸಿದ್ದಾರೆ.
ವಟ್ಟಿಯೂರ್ಕವು ಕ್ಷೇತ್ರದಲ್ಲಿ ಅಕ್ಟೋಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಯಗಳಿಸಿದ ಸಿಪಿಐ (ಎಂ) ಅಭ್ಯರ್ಥಿ ಪ್ರಶಾಂತ್ ತಮ್ಮ ಸ್ನೇಹಿತರು, ಹಿತೈಷಿಗಳು ಮತ್ತು ಬೆಂಬಲಿಗರಿಗೆ ಹೇಳಿರುವುದು, ತಮ್ಮನ್ನು ಭೇಟಿಯಾಗಲು ಅಥವಾ ಸ್ವಾಗತಿಸಲು ಬರುವಾಗ ಹೂವಿನ ಬದಲು ಪುಸ್ತಕಗಳನ್ನು ತನ್ನಿ ಎಂದು.
ಪ್ರಶಾಂತ್ ಅವರ ಮನವಿಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸ್ಪಂದಿಸಿದ್ದಾರೆ. ದಿನವೂ ಮೂಲೆಯಲ್ಲಿ ಬಿದ್ದು ವ್ಯರ್ಥವಾಗುವ ಹೂವಿಗಿಂತ ಜ್ಞಾನ ವೃದ್ಧಿಸುವ ಪುಸ್ತಕ ನೀಡಬೇಕೆಂಬ ಮನವಿಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿರುವುದು ಅವರಿಗೆ ಖುಷಿ ನೀಡಿದೆ.

ಹೂವಿನ ಬದಲು ಪುಸ್ತಕ ನೀಡಿ
ಚುನಾವಣೆಯಲ್ಲಿ ಗೆದ್ದ ಬಳಿಕ ಕ್ಷೇತ್ರದಲ್ಲಿ ಜನತೆಗೆ ಧನ್ಯವಾದ ಸಲ್ಲಿಸಲು ತೆರಳಿದ್ದ ಶಾಸಕ ಪ್ರಶಾಂತ್, ಜನರು ತಮಗೆ ಹೂವಿನ ಹಾರ ಹಾಕುವುದು ಮತ್ತು ಬೊಕ್ಕೆಗಳನ್ನು ನೀಡುವುದನ್ನು ಕಂಡು ದಂಗಾಗಿದ್ದರು. ಲೆಕ್ಕವಿಲ್ಲದಷ್ಟು ಹೂವು ವ್ಯರ್ಥವಾಗಿದ್ದು ಅವರಿಗೆ ಬೇಸರ ಮೂಡಿಸಿತ್ತು. ಈ ಬಗ್ಗೆ ಕಳೆದ ಗುರುವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪ್ರಶಾಂತ್, ತಮಗೆ ಹೂವಿನ ಬದಲು ಪುಸ್ತಕ ನೀಡಿ ಎಂದು ಮನವಿ ಮಾಡಿದ್ದರು.

3 ದಿನದಲ್ಲಿ 3 ಸಾವಿರ ಪುಸ್ತಕ
ಪ್ರಶಾಂತ್ ಅವರ ಮನವಿಗೆ ಬೆಂಬಲಿಗರಿಂದ ದೊರೆತ ಪ್ರತಿಕ್ರಿಯೆ ಅಭೂತಪೂರ್ವವಾಗಿತ್ತು. ಮರುದಿನ ಬೆಳಿಗ್ಗೆ ಅವರನ್ನು ಭೇಟಿಯಾಗಲು ಬಂದವರ ಕೈಯಲ್ಲಿ ಹೂವಿನ ಬದಲು ಪುಸ್ತಕಗಳಿದ್ದವು. ಹೀಗೆ ಕೇವಲ ಮೂರು ದಿನಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಪುಸ್ತಕಗಳು ತಮ್ಮ ಮನೆ ಸೇರಿದ್ದಾಗಿ ಪ್ರಶಾಂತ್ ಸಂತಸ ಹಂಚಿಕೊಂಡಿದ್ದಾರೆ.

ಶಾಲೆಗಳಲ್ಲಿ ಗ್ರಂಥಾಲಯ
ತಮ್ಮ ಕ್ಷೇತ್ರದ ಕೆಲವು ಶಾಲೆಗಳು ಮಾಡಿದ ಮನವಿಯಿಂದ ಈ ರೀತಿಯ ಆಲೋಚನೆ ಮಾಡಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. 'ತಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯಗಳನ್ನು ತೆರೆಯಲು ಏನಾದರೂ ಸಹಾಯ ಮಾಡಲು ಸಾಧ್ಯವೇ ಎಂದು ಕೆಲವು ಸರ್ಕಾರಿ ಶಾಲೆಗಳ ಶಿಕ್ಷಕರು ನನ್ನನ್ನು ಭೇಟಿ ಮಾಡಿ ಕೇಳಿದ್ದರು. ಈಗ ಇದುವರೆಗೆ ನನ್ನ ಬಳಿ ಸಂಗ್ರಹವಾಗಿರುವ ಪುಸ್ತಕಗಳಿಂದ ಮೂರು ಶಾಲೆಗಳಲ್ಲಿ ಗ್ರಂಥಾಲಯಗಳನ್ನು ತೆರೆಯಬಹುದು' ಎಂದು ಅವರು ಹೇಳಿದ್ದಾರೆ.

ಜನರ ಸ್ಪಂದನೆಗೆ ಅಚ್ಚರಿ
ತಮ್ಮ ಯೋಜನೆಗೆ ಇಷ್ಟೊಂದು ಸಂಖ್ಯೆಯಲ್ಲಿ ಸ್ಪಂದಿಸಿರುವುದು ಅವರಿಗೆ ಅಚ್ಚರಿ ಮೂಡಿಸಿದೆ. 'ಅಷ್ಟು ಅಲ್ಪಾವಧಿಯಲ್ಲಿ ನೂರಾರು ಜನರು ಮುಂದೆ ಬಂದು ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅವರಿಗೆ ಇನ್ನೂ ಮೊದಲೇ ಮಾಹಿತಿ ನೀಡಿದ್ದರೆ ಇನ್ನಷ್ಟು ಪುಸ್ತಕಗಳನ್ನು ನಾವು ಸಂಗ್ರಹಿಸಬಹುದಾಗಿತ್ತು' ಎಂದು ತಿಳಿಸಿದ್ದಾರೆ.

ಜನರ ನೆಚ್ಚಿನ 'ಮೇಯರ್ ಅಣ್ಣ'
2018ರಲ್ಲಿ ಕೇರಳ ಪ್ರವಾಹದ ವೇಳೆ ಪರಿಹಾರ ಕಾರ್ಯಕ್ಕಾಗಿ ಭಾರಿ ಮೊತ್ತದ ಹಣವನ್ನು ದೇಣಿಗೆ ನೀಡಿದ್ದ ಪ್ರಶಾಂತ್ ದೊಡ್ಡ ಸುದ್ದಿಯಾಗಿದ್ದರು. 34ನೇ ವಯಸ್ಸಿನಲ್ಲಿ ಅವರು ತಿರುವನಂತಪುರದ ಮೇಯರ್ ಆಗಿ ಆಯ್ಕೆಯಾಗಿದ್ದರು. ಅವರು ಅಲ್ಲಿ 'ಮೇಯರ್ ಅಣ್ಣ' ಎಂದೇ ಖ್ಯಾತಿ ಗಳಿಸಿದ್ದಾರೆ. 2019ರ ಅಕ್ಟೋಬರ್‌ನಲ್ಲಿ ವಟ್ಟಿಯೂರ್ಕವು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರು ಸುಮಾರು 14 ಸಾವಿರ ಮರಗಳಿಂದ ಗೆಲುವು ಸಾಧಿಸಿದ್ದರು.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications