ಅತ್ಯಾಚಾರದ ಆರೋಪ: ಕೇರಳದ ಕಾಂಗ್ರೆಸ್ ಶಾಸಕನ ಬಂಧನ
ಅತ್ಯಾಚಾರದ ಆರೋಪದ ಮೇರೆಗೆ ಕೇರಳ ಶಾಸಕನ ಬಂಧನ. ಕೇರಳದ ಕಾಂಗ್ರೆಸ್ ಶಾಸಕರಾದ ವಿನ್ಸೆಂಟ್ ಬಂಧನಕ್ಕೀಡಾದವರು. 51 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಅವರ ಮೇಲಿದೆ.
ತಿರುವನಂತಪುರಂ, ಜುಲೈ 22: ಮಹಿಳೆಯೊಬ್ಬರ ಮೇಲೆ ಅತ್ಯಾಚಾರದ ಆರೋಪ ಹೊತ್ತಿರುವ ಕೇರಳದ ಕಾಂಗ್ರೆಸ್ ಶಾಸಕ ಎಂ. ವಿನ್ಸೆಂಟ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ವಿನ್ಸೆಂಟ್ ಅವರು ಕೋವಲಂ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
51 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಷ್ಟರ ಮಟ್ಟಿಗೆ ಮಹಿಳೆಗೆ ಮಾನಸಿಕ ಕಿರುಕುಳ ನೀಡಿರುವುದಾಗಿ ವಿನ್ಸೆಂಟ್ ವಿರುದ್ಧ ಗುರುವಾರ (ಜುಲೈ 20) ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ, ವಿನ್ಸೆಂಟ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ತಮ್ಮ ಮೇಲಿನ ಆರೋಪವನ್ನು ತಿರಸ್ಕರಿಸಿರುವ ವಿನ್ಸೆಂಟ್, ಇದು ರಾಜಕೀಯ ಪಿತೂರಿ ಎಂದು ಬಣ್ಣಿಸಿದ್ದಾರೆ.












Click it and Unblock the Notifications