ಸ್ವಾಮಿ ಸಂದೀಪಾನಂದ ಆಶ್ರಮದ ಮೇಲೆ ದಾಳಿ: ಆರೆಸ್ಸೆಸ್ ಕೈವಾಡ?!
ತಿರುವನಂತಪುರಂ, ಅಕ್ಟೋಬರ್ 27: ಕೇರಳದ ಸ್ವಾಮಿ ಸಂದೀಪಾನಂದ ಗಿರಿ ಆಶ್ರಮದ ಮೇಲೆ ಶನಿವಾರ ಬೆಳಿಗ್ಗೆ ನಡೆದ ದಾಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಕೈವಾಡವಿರಬಹುದು ಎಂದು ಸ್ವಾಮಿ ಸಂದೀಪಾನಂದ ಗಿರಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
"ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಾನು ಸ್ವಾಗತಿಸಿದ್ದು ಮತ್ತು ತೀರ್ಪಿಗೆ ಬೆಂಬಲ ನೀಡಿದ್ದನ್ನು ಆರೆಸ್ಸೆಸ್ ವಿರೋಧಿಸಿತ್ತು. ಆದ್ದರಿಂದಲೇ ನನ್ನ ಮೇಲೆ ಅದೇ ದಾಳಿ ನಡೆಸಿರಬಹುದು" ಎಂದು ಅವರು ಹೇಳಿದ್ದಾರೆ.
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಕಳೆದ ಎಂಟು ನೂರು ವರ್ಷಗಳಿಂದ ಹೇರಿದ್ದ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು. 10 ರಿಂದ 50 ವರ್ಷ ವಯಸ್ಸಿನ ಮಹಿಳುಯರು ಋತುಮತಿಯಾಗುವ ಕಾರಣ ಅವರು ದೇವಾಲಯ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿತ್ತು.

ಆದರೆ ಸುಪ್ರೀಂ ಕೋರ್ಟ್ ಇದಕ್ಕೆ ವ್ಯತಿರಿಕ್ತವಾದ ತೀರ್ಪು ನೀಡಿದ್ದರಿಂದ ಸಂಪ್ರದಾಯವಾದಿಗಳು ಇದನ್ನು ವಿರೋಧಿಸಿದ್ದರು. ತೀರ್ಪನ್ನು ಸ್ವಾಗತಿಸಿದ್ದ ಸ್ವಾಮಿ ಸಂದೀಪಾನಂದ ಗಿರಿ ಅವರ ಆಶ್ರಮದ ಮೇಲೆ ದುಷ್ಕರ್ಮಿಗಳು ಇಂದು ಬೆಳಿಗ್ಗೆ ಸಾಳಿ ನಡೆಸಿದ್ದರು.












Click it and Unblock the Notifications