ಕೇರಳ: ವಿಚಿತ್ರ ಗಾತ್ರದಲ್ಲಿ ಮೊಟ್ಟೆ ಇಡುವ ಕೋಳಿ

ತಿರುವಂತಪುರಂ ಜನವರಿ 07: ನಾಟಿ ಕೋಳಿ ಮತ್ತು ಫಾರಮ್ ಕೋಳಿ ಇಡುವ ಮೊಟ್ಟೆಗಳನ್ನು ನಾವೆಲ್ಲರೂ ಸಾಮಾನ್ಯವಾಗಿ ನೋಡಿದ್ದೇವೆ. ಮೊಟ್ಟೆಯಲ್ಲಿ ಕೆಲವು ದೊಡ್ಡ ಗಾತ್ರದಲ್ಲಿರುತ್ತವೆ. ಇನ್ನೂ ಕೆಲವು ಸಣ್ಣ ಗಾತ್ರದಲ್ಲಿರುತ್ತವೆ. ಆದರೆ ಮೊಟ್ಟೆಯ ಗಾತ್ರ ಯಾವುದೇ ಆಗಿದ್ದರೂ ಆ ಮೊಟ್ಟೆಗಳನ್ನು ಇಡುವ ಕೋಳಿ ಮಾತ್ರ ಒಂದೇ ಆಗಿರುತ್ತದೆ. ಅಂದ್ರೆ ಕೋಳಿ ಮೊಟ್ಟೆ ಇಟ್ಟರೆ ಅವು ಎಲ್ಲವೂ ಕೊಂಚ ಚಿಕ್ಕ ಗಾತ್ರವನ್ನು ಹೊಂದಿರಬಹುದು. ಅಥವಾ ಕೊಂಚ ದೊಡ್ಡ ಗಾತ್ರವನ್ನೂ ಹೊಂದಿರಬಹುದು. ಆದರೆ ಕೇರಳದಲ್ಲಿ ಕೋಳಿಯೊಂದು ಹಲವಾರು ಗಾತ್ರದ ಮೊಟ್ಟೆಗಳನ್ನು ಇಡುವ ಮೂಲಕ ಸುದ್ದಿಯಾಗಿದೆ.

ಹೌದು... ಕೇರಳದ ಮಲಪ್ಪುರಂನಲ್ಲಿ ಈ ವಿಚಿತ್ರ ಘಟನೆ ಕಂಡುಬಂದಿದೆ. ಕೋಳಿ ಇಟ್ಟ ಹಲವಾರು ಗಾತ್ರದ ಮೊಟ್ಟೆಗಳನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ಮೊಟ್ಟೆಗಳು ಒಂದೊಂದು ಒಂದೊಂದು ಗಾತ್ರದಲ್ಲಿದೆ. ಐದು ವರ್ಷದ ಬಳಿಕ ಕೋಳಿ ಈ ರಿತಿ ಮೊಟ್ಟೆಗಳನ್ನು ಇಡಲು ಆರಂಭಿಸಿದೆ. ಅದಕ್ಕೂ ಮುನ್ನ ಕೋಳಿ ಸರಿಯಾಗಿ ಮೊಟ್ಟೆ ಇಡುತ್ತಿರಲಿಲ್ಲ, ಕೆಲ ದಿನಗಳಿಂದ ಚಿಕ್ಕ ಗಾತ್ರದಲ್ಲಿ ಮೊಟ್ಟೆ ಇಡುತ್ತಿತ್ತು ಎನ್ನುತ್ತಾರೆ ಕೋಳಿಯ ಮಾಲೀಕ ಸಮದ್. ಮನೆಯಲ್ಲಿ ಉಳಿದ ಕೋಳಿಗಳಿಗೆ ಯಾವ ರೀತಿಯ ಆಹಾರ ನೀಡುತ್ತೇವೆಯೋ ಅದೇ ಆಹಾರವನ್ನು ಈ ಕೋಳಿಗೂ ನೀಡುತ್ತಿದ್ದೇವೆ. ಆದರೆ, ವಿಚಿತ್ರ ಗಾತ್ರದಲ್ಲಿ ಇದುವರೆಗೆ 9 ಮೊಟ್ಟೆಗಳನ್ನು ಇಡಲಾಗಿದೆ. ಚಿಕ್ಕ ಮೊಟ್ಟೆಗಳ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಜನರು ಅವುಗಳನ್ನು ನೋಡಲು ಸಮದ್ ಅವರ ಮನೆಗೆ ಸೇರುತ್ತಿದ್ದಾರೆ.

ಈ ಕೋಳಿಯ ಮೊಟ್ಟೆಗಳ ಮತ್ತೊಂದು ವಿಶೇಷತೆ ಏನೆಂದರೆ ಮೊಟ್ಟೆಗಳಲ್ಲಿ ಬಿಳಿ ಭಾಗ ಮಾತ್ರ ಇದೆ ಹಳದಿ ಭಾಗವೇ ಇಲ್ಲ. ಕೋಳಿ ಮೊಟ್ಟೆ ಹಳದಿ ಭಂಡಾರ ಮತ್ತು ಬಿಳಿ ಲೋಳೆ ಎಂಬ ಎರಡು ಭಾಗಗಳನ್ನು ಒಳಗೊಂಡಿರುತ್ತದೆ. ಕೆಲವರು ಬಿಳಿ ಲೋಳೆಯನ್ನು ಮಾತ್ರ ತಿಂದರೆ, ಇನ್ನೂ ಕೆಲವರು ಬಿಳಿ ಹಾಗೂ ಹಳದಿ ಎರಡೂ ಭಾಗವನ್ನು ತಿನ್ನುತ್ತಾರೆ. ಇಲ್ಲಿ ನಾವು ಹೇಳ ಹೊರಟಿರುವುದು ಒಂದು ವಿಚಿತ್ರ ಕೋಳಿಯ ಬಗ್ಗೆ. ಈ ಕೋಳಿ ಇಡುವ ಮೊಟ್ಟೆಯಲ್ಲಿ ಕೇವಲ ಬಿಳಿ ಭಾಗ ಮಾತ್ರ ಇರುತ್ತದೆ. ಹಳದಿ ಭಾಗ ಇರುವುದಿಲ್ಲ.

Kerala: A hen that lays eggs of a strange size

Recommended Video

      ಖಾಸಗಿ ಆಸ್ಪತ್ರೆಗಳಲ್ಲಿ ಶೇ 50 ರಷ್ಟು ಬೆಡ್‌ಗಳ ಮೀಸಲಿಗೆ ಸೂಚನೆ-ಡಿಸಿ | Oneindia Kannada

      ಸಮದ್ ಮಲಪ್ಪುರಂನ ಎಆರ್ ನಗರ ಪ್ರದೇಶದವರಾಗಿದ್ದಾರೆ. ಇವರು ಹಲವಾರು ವರ್ಷಗಳಿಂದ ತಮ್ಮ ಮನೆಯಲ್ಲಿ ಕೋಳಿಗಳನ್ನು ಸಾಕುತ್ತಿದ್ದಾರೆ. ಅವುಗಳಲ್ಲಿ ಒಂದು ಕೋಳಿಯು ದ್ರಾಕ್ಷಿಹಣ್ಣಿನ ಗಾತ್ರದ ಮೊಟ್ಟೆಗಳನ್ನು ಇಡುತ್ತಿದೆ. ಇದರ ವಯಸ್ಸು ಐದು ವರ್ಷ. ಕಳೆದ ಕೆಲ ದಿನಗಳಿಂದ ದ್ರಾಕ್ಷಿ ಗಾತ್ರದ ಮೊಟ್ಟೆ ಇಡುತ್ತಿರುವುದರಿಂದ ಗ್ರಾಮಸ್ಥರು ಹಾಗೂ ಸಮದ್​​ ಬೆರಗಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+