ಕಾಸರಗೋಡು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ:CPM ಮುಖಂಡ ಪೊಲೀಸ್ ವಶಕ್ಕೆ
ಕಾಸರಗೋಡು, ಫೆಬ್ರವರಿ 20: ಕೇರಳದ ಕಾಸರಗೋಡಿನಲ್ಲಿ ಭಾನುವಾರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಕೊಲೆಗೈದ ಘಟನೆಗೆ ಸಂಬಂಧಿಸಿದಂತೆ ಸಿಪಿಎಂ ಮುಖಂಡರೊಬ್ಬರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಸಿಪಿಎಂ ನ ಪೆರಿಯಾ ಸ್ಥಳೀಯ ಸಮಿತಿ ಸದಸ್ಯ ಎ ಪೀತಾಂಬರನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೃಪೇಶ್ ಮತ್ತು ಶರತ್ ಎಂಬ ಕಾಂಗ್ರೆಸ್ ನ ಇಬ್ಬರು ಕಾರ್ಯಕರ್ತರನ್ನು ಕಾರಸಗೋಡಿನ ಐತಿಹಾಸಿಕ ಬೇಕಲ್ ಕೋಟೆಯ ಬಳಿ ಪೆರಿಯ ಎಂಬಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿತ್ತು.

ಈ ಘಟನೆಯನ್ನು ಕಟು ಶಬ್ದಗಳಿಂದ ನಿಂದಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, 'ಹಂತಕರಿಗೆ ಶಿಕ್ಷೆ ಕೊಡಿಸುವವರೆಗೆ ನಮ್ಮ ಪಕ್ಷ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ, ಕಾಸರಗೋಡಿನಲ್ಲಿ ನಮ್ಮ ಯುವ ಕಾಂಗ್ರೆಸ್ ಕುಟುಂಬದ ಇಬ್ಬರು ಸದಸ್ಯರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಹತರಾದ ಯುವಕರ ಕುಟುಂಬಗಳಿಗೆ ಕಾಂಗ್ರೆಸ್ ನೈತಿಕ ಬೆಂಬಲ ನೀಡಲಿದೆ' ಎಂದಿದ್ದರು.












Click it and Unblock the Notifications