ಕೊರೊನಾ ಸೋಂಕು; ಪರೀಕ್ಷೆಗೆ ಹೊಸ ಹೆಜ್ಜೆ ಇಟ್ಟ ಕೇರಳ ಸರ್ಕಾರ

ತಿರುವನಂತಪುರಂ, ಏಪ್ರಿಲ್ 07: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಸೋಂಕಿತರ ಸ್ಯಾಂಪಲ್ ಸಂಗ್ರಹ ಮಾಡಲು ಸರ್ಕಾರ ಕೇಂದ್ರಗಳನ್ನು ತೆರೆದಿದೆ. ರಾಜ್ಯದಲ್ಲಿ ಸೋಂಕಿತ ಸಂಖ್ಯೆ 327.

Recommended Video

      ಕುಟುಂಬವನ್ನು ನೆನೆದು ಕಣ್ಣೀರು ಹಾಕಿದ ಮಹಿಳಾ ಡಾಕ್ಟರ್ | Oneindia Kannada

      ದಕ್ಷಿಣ ಕೋರಿಯಾ ಮಾದರಿಯಲ್ಲಿ ಕೊರೊನಾಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲಿ ಸ್ಯಾಂಪಲ್ ಸಂಗ್ರಹ ಕೇಂದ್ರ ಆರಂಭಿಸಲಾಗಿದೆ. ಪ್ರಾಯೋಗಿಕವಾಗಿ ಎರ್ನಾಕುಲಂ ವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರ ಆರಂಭವಾಗಿದ್ದು, ಜಿಲ್ಲೆಯಲ್ಲಿ ಇನ್ನೂ ಮೂರು ಕೇಂದ್ರ ಆರಂಭಿಸಲಾಗುತ್ತಿದೆ.

      ಗಾಜಿನಿಂದ ನಿರ್ಮಾಣವಾಗಿರುವ ಕೇಂದ್ರ ಇದಾಗಿದೆ. ಅದರಲ್ಲಿರುವ ಸಿಬ್ಬಂದಿ ಆಗಮಿಸಿದ ವ್ಯಕ್ತಿಯನ್ನು ಮುಟ್ಟದೇ ಕೇಂದ್ರದಿಂದಲೇ ಗಂಟಲು ದ್ರವವನ್ನು ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ಸೋಂಕು ತಗುಲಿದೆ ಎಂದು ಶಂಕೆ ಇರುವ ವ್ಯಕ್ತಿ ಕೇಂದ್ರಕ್ಕೆ ತೆರಳಿ ಸ್ಯಾಂಪಲ್‌ಗಳನ್ನು ನೀಡಬಹುದಾಗಿದೆ.

      Covid Sample Collection Kiosk At Kerala

      ಎರ್ನಾಕುಲಂ ಜಿಲ್ಲಾಧಿಕಾರಿ ಎಸ್. ಸುಹಾಸ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಸ್ಯಾಂಪಲ್ ಸಂಗ್ರಹ ಮಾಡುವ 4 ಕೇಂದ್ರಗಳನ್ನು ಕೋವಿಡ್ -19 ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಆರಂಭಿಸಲಾಗುತ್ತಿದೆ. ಇದು ಸ್ಯಾಂಪಲ್ ಸಂಗ್ರಹ ಮಾಡುವ ಸುರಕ್ಷಿತ ವಿಧಾನವೂ ಆಗಿದೆ" ಎಂದು ಹೇಳಿದ್ದಾರೆ.

      ಇಂತಹ ಕೇಂದ್ರಗಳಿಂದಾಗಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಗಂಟಲು ದ್ರವದ ಮಾದರಿ ಸಂಗ್ರಹ ಮಾಡಿದ ಬಳಿಕ ಪಿಪಿಇ ಕಿಟ್ ಬದಲಾವಣೆ ಮಾಡುವುದು ತಪ್ಪಲಿದೆ. ಈಗಾಗಲೇ ದೇಶದಲ್ಲಿ ಪಿಪಿಇ ಕಿಟ್‌ಗಳ ಕೊರತೆ ಇದೆ. ಈ ಪ್ರಯೋಗ ಯಶಸ್ವಿಯಾದರೆ ಕೇರಳದಲ್ಲಿ ಇನ್ನೂ ಹಲವು ಕೇಂದ್ರ ತೆರೆಯಲಾಗುತ್ತದೆ.

      ಒಂದು ಕೇಂದ್ರ ನಿರ್ಮಾಣ ಮಾಡಲು ಸುಮಾರು 40 ಸಾವಿರ ರೂ.ಗಳು ಬೇಕಾಗುತ್ತದೆ. ಒಂದು ಗಂಟೆಯಲ್ಲಿ 40 ರಿಂದ 50 ಸ್ಯಾಂಪಲ್‌ಗಳನ್ನು ಸಿಬ್ಬಂದಿ ಸಂಗ್ರಹ ಮಾಡಬಹುದಾಗಿದೆ. ಹೆಚ್ಚು ಕೊರೊನಾ ಪ್ರಕರಣ ದಾಖಲಾದ ಜಿಲ್ಲೆಗಳಲ್ಲಿ ಮೊದಲು ಸರ್ಕಾರ ಕೇಂದ್ರವನ್ನು ಆರಂಭಿಸಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+