'ಶಾಲೆಗಳಲ್ಲಿ ಹುಡುಗ ಹುಡುಗಿಯರು ಒಟ್ಟಿಗೆ ಕುಳಿತುಕೊಳ್ಳುವುದು ಅಪಾಯಕಾರಿ': ಕೇರಳದಲ್ಲಿ ವಿವಾದ
ತಿರುವನಂತಪುರಂ ಆಗಸ್ಟ್ 19: ಕೇರಳ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಂ ಅವರು ಶಾಲಾ ತರಗತಿಗಳಲ್ಲಿ ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ ಕುಳಿತುಕೊಳ್ಳುವುದು "ಅಪಾಯಕಾರಿ" ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.
"ಇದು ಅಪಾಯಕಾರಿ. ಹುಡುಗಿಯರು ಮತ್ತು ಹುಡುಗರು ತರಗತಿಯಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಅವಶ್ಯಕತೆ ಏನಿದೆ? ನೀವು ಅವರನ್ನು ಏಕೆ ಒತ್ತಾಯಿಸುತ್ತಿದ್ದೀರಿ ಅಥವಾ ಯಾಕೆ ಅಂತಹ ಅವಕಾಶಗಳನ್ನು ಸೃಷ್ಟಿಸುತ್ತಿದ್ದೀರಿ? ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದಿಂದ ವಿಮುಖರಾಗುತ್ತಾರೆ" ಎಂದು ಕೇರಳ ಸರ್ಕಾರದ ವಿರುದ್ಧ ಸಲಾಂ ಹೇಳಿದರು.
"ಲಿಂಗ ತಟಸ್ಥತೆಯು (Gender neutrality) ಧಾರ್ಮಿಕ ವಿಷಯವಲ್ಲ. ಆದರೆ, ನೈತಿಕ ಸಮಸ್ಯೆಯಾಗಿದೆ. ಸರ್ಕಾರವು ವಿದ್ಯಾರ್ಥಿಗಳ ಮೇಲೆ ಲಿಂಗ-ತಟಸ್ಥ ಸಮವಸ್ತ್ರವನ್ನು ಒತ್ತಾಯಿಸಲು ಪ್ರಯತ್ನಿಸುತ್ತಿದೆ. ಲಿಂಗ ತಟಸ್ಥತೆಯು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತದೆ. ಇದನ್ನು ಹಿಂಪಡೆಯಲು ನಾವು ಸರ್ಕಾರವನ್ನು ಕೇಳುತ್ತೇವೆ" ಎಂದು ಅವರು ಹೇಳಿದರು.

ಈ ಹಿಂದೆ, ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ 'ಲಿಂಗ-ತಟಸ್ಥ ಕಲ್ಪನೆಗಳನ್ನು ಹೇರುವ' ಕ್ರಮದಿಂದ ಹಿಂದೆ ಸರಿಯುವಂತೆ ಮುಸ್ಲಿಂ ಸಂಘಟನೆಗಳು ಸರ್ಕಾರವನ್ನು ಕೋರಿದ್ದವು. ಎಡ ನೇತೃತ್ವದ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಉದಾರವಾದಿ ಸಿದ್ಧಾಂತವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದರು.












Click it and Unblock the Notifications