ಆಸ್ಟ್ರೇಲಿಯಾದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಕನ್ನಡಿಗ ಬಂಧನ
ಮೆಲ್ಬರ್ನ್, ಜನವರಿ 22: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗನೊಬ್ಬ ಭವಿಷ್ಯ ಹೇಳುವ ಜ್ಯೋತಿಷಿಯ ಸೋಗಿನಲ್ಲಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.
ಅರ್ಜುನ್ ಮುನಿಯಪ್ಪ (31) ಎಂಬಾತ ಬಂಧಿತ ವ್ಯಕ್ತಿ. ಸೋಮವಾರ ರಾತ್ರಿ ಸಿಂಗಪುರಕ್ಕೆ ತೆರಳುವ ವಿಮಾನವೇರಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಸಿಡ್ನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ತಿಳಿಸಿದ್ದಾಗಿ ಮಾಧ್ಯಮ ವರದಿ ಮಾಡಿವೆ.
ಅರ್ಜುನ್ ಮುನಿಯಪ್ಪ, ಸಿಡ್ನಿಯ ಲಿವರ್‌ಪೂಲ್ ಪಟ್ಟಣದಲ್ಲಿ ಭಾನುವಾರ 14 ವರ್ಷದ ಬಾಲಕಿಗೆ ಉಚಿತವಾಗಿ ಭವಿಷ್ಯ ಹೇಳುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ.

ಸ್ವಯಂಘೋಷಿತ ಜ್ಯೋತಿಷಿಯಾಗಿರುವ ಆತ, ಲಿವರ್‌ಪೂಲ್‌ನಲ್ಲಿ ಜ್ಯೋತಿಷ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾನೆ.
ಆತನನ್ನು ಬಂಧಿಸಿ ಮಸ್ಕಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯನ್ನು ಲೈಂಗಿಕತೆ ಉದ್ದೇಶದಿಂದ ಸ್ಪರ್ಶಿಸಿದ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications