ಜಮ್ಮು ಕಾಶ್ಮೀರದಲ್ಲಿ ಆಸ್ತಿ ಕೊಳ್ಳುವುದು ಹೇಗೆ? ಬೆಲೆ ಎಷ್ಟಿದೆ?

ಶ್ರೀನಗರ, ಆಗಸ್ಟ್ 16: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ರಾಜ್ಯ ಸ್ಥಾನ-ಮಾನವನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಿ. ಜಮ್ಮು, ಕಾಶ್ಮೀರ ಮತ್ತು ಲಡಾಕ್ ಅನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿಸಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಆರ್ಟಿಕಲ್ 370 ಮತ್ತು ಆರ್ಟಿಕಲ್ 35 (ಎ) ಅನ್ನು ರದ್ದು ಮಾಡಿದ ಬಳಿಕ, ಬೇರೆ ರಾಜ್ಯದ ಜನರು ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿ ಮಾಡಬಹುದಾಗಿದೆ. ಈ ಮುಂಚೆ ಬೇರೆ ರಾಜ್ಯದ ಜನ ಕಣಿವೆ ರಾಜ್ಯದಲ್ಲಿ ಆಸ್ತಿ ಖರೀದಿ ಮಾಡುವಂತಿರಲಿಲ್ಲ.

ಜಮ್ಮು- ಕಾಶ್ಮೀರದಲ್ಲಿ ರಿಯಲ್ ಎಸ್ಟೇಟ್; ಚದರಡಿಗೆ ಎಷ್ಟು ಎಂದು ಕೇಳುವ ಮುನ್ನ

ಆದರೆ ಆರ್ಟಿಕಲ್ 370 ರದ್ದಾದ ಬಳಿಕ ಹಲವರು ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿಗೆ ಆಸಕ್ತಿ ತೋರುತ್ತಿದ್ದು, ಸ್ಥಳೀಯರ ಪ್ರಕಾರ ಈಗಾಗಲೇ ಆಸ್ತಿಗೆ ಬೇಡಿಕೆ ಹೆಚ್ಚಾಗಿದೆಯಂತೆ. ಆದರೆ ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿ ಮಾಡುವುದು ಹೇಗೆ ಮತ್ತು ಅಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ.

ಜಮ್ಮು ಕಾಶ್ಮೀರದಲ್ಲಿ ರೇರಾ ಕಾಯ್ದೆ ಇಲ್ಲ

ಜಮ್ಮು ಕಾಶ್ಮೀರದಲ್ಲಿ ರೇರಾ ಕಾಯ್ದೆ ಇಲ್ಲ

ಪ್ರಸ್ತುತ ನಿಯಮಗಳ ಪ್ರಕಾರ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನ್ವಯವಾಗುವ ಕೇಂದ್ರ ಕಾನೂನು ಜಮ್ಮು ಕಾಶ್ಮೀರ ಮತ್ತು ಲಡಾಕ್‌ನಲ್ಲಿ ಅನ್ವಯವಾಗಲಿದ್ದು, ಕೇಂದ್ರ ಕಾನೂನಿನ ಅನ್ವಯ ಆಸ್ತಿ ಖರೀದಿಸಬಹುದಾಗಿದೆ. ಇತರ ರಾಜ್ಯಗಳಿಗೆ ಇರುವಂತೆ ರೇರಾ ಕಾಯ್ದೆ ಜಮ್ಮು ಕಾಶ್ಮೀರದಲ್ಲಿ ಪ್ರಸ್ತುತ ಇಲ್ಲ.

ಯಾವ ನಗರದಲ್ಲಿ ಜಮೀನು ಬೆಲೆ ಎಷ್ಟಿದೆ?

ಯಾವ ನಗರದಲ್ಲಿ ಜಮೀನು ಬೆಲೆ ಎಷ್ಟಿದೆ?

ಜಮ್ಮು ಕಾಶ್ಮೀರದ ಪ್ರಮುಖ ನಗರಗಳಲ್ಲಿ ಚದರ ಅಡಿಗೆ ಸರಾಸರಿ 3500 ರೂಪಾಯಿ ಬೆಲೆ ಇದೆ. ಶ್ರೀನಗರದಲ್ಲಿ ಚದರ ಅಡಿಗೆ 2500 ದಿಂದ 3200 ರವರೆಗೆ ಬೆಲೆ ಇದೆ. ಜಮ್ಮು ನಗರದಲ್ಲಿ 2400 ರಿಂದ 4000 ಬೆಲೆ ಇದೆ. ಬಾರಾಮುಲ್ಲಾ ನಲ್ಲಿ 2500 ರಿಂದ 3200 ರೂಪಾಯಿ ವರೆಗೆ ಬೆಲೆ ಇದೆ. ಸೊಪೋರ್‌ನಲ್ಲಿ 2200 ರಿಂದ 4000 ಬೆಲೆ ಇದೆ.

ಸಣ್ಣ ನಗರಗಳು, ಪಟ್ಟಣಗಳ ಮೇಲೆ ಕಣ್ಣು

ಸಣ್ಣ ನಗರಗಳು, ಪಟ್ಟಣಗಳ ಮೇಲೆ ಕಣ್ಣು

ಸಣ್ಣ ನಗರಗಳು, ಪಟ್ಟಣಗಳು ಹೂಡಿಕೆದಾರರ ಪ್ರಮುಖ ಗುರಿಗಳಾಗುತ್ತಿವೆ. ಅಲ್ಲಿಯೂ ಸಹ ಬೆಲೆ ಏರಿಕೆಯತ್ತ ಸಾಗಿವೆ. ಪ್ರವಾಸಿ ತಾಣಗಳ ಬಳಿಯ ಆಸ್ತಿಯ ಬೆಲೆಗಳು ಹಠಾತ್ತನೆ ಏರಿಕೆ ಆಗಿವೆ. ಜಮ್ಮು ಕಾಶ್ಮೀರದಾದ್ಯಂತ ರಿಯಲ್‌ ಎಸ್ಟೇಟ್‌ ಹಠಾತ್ತನೆ ಚಿಗುರಿಕೊಂಡಿದೆ.

ಹೂಡಿಕೆಗೆ ಆತುರ ಬೇಡ

ಹೂಡಿಕೆಗೆ ಆತುರ ಬೇಡ

ಆದರೆ ಈಗಲೇ ಬಂಡವಾಳ ಹೂಡಿಕೆ ಮಾಡುವುದು ಸರಿಯಲ್ಲವೆಂದು ಮಾರುಕಟ್ಟೆ ಅನುಭವಿಗಳು ಹೇಳುತ್ತಿದ್ದಾರೆ. ಕಾಶ್ಮೀರದ ಪರಿಸ್ಥಿತಿ ಇನ್ನೂ ಪೂರ್ಣವಾಗಿ ಸರಿಯಾಗಿಲ್ಲ. ಅಲ್ಲದೆ ರೇರಾ ಕಾಯ್ದೆ ರಚನೆ ಆಗಿಲ್ಲ. ಪರಿಸ್ಥಿತಿ ತಣ್ಣಗಾದ ನಂತರ ಜಮ್ಮು ಕಾಶ್ಮೀರವು ಹೂಡಿಕೆಗೆ ಒಳ್ಳೆಯ ಸ್ಥಳವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+