ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಜೈಶ್ ಉಗ್ರರಿಗೆ ಹೆಡೆಮುರಿ
ಶ್ರೀನಗರ್, ನವೆಂಬರ್.22: ಭಾರತ ಮತ್ತು ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಉಗ್ರರ ನುಸುಳುವಿಕೆ ಕಸರತ್ತು ಮುಂದುವರಿದಿದೆ. ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ.
ನೆರೆಯ ಪಾಕಿಸ್ತಾನದಿಂದ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಮೂಲಕ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ನಾಲ್ವರು ಉಗ್ರರು ಗಡಿ ನುಸುಳಿದ್ದರು. ಉಗ್ರರ ಪತ್ತೆಗೆ ಜಮ್ಮು ಕಾಶ್ಮೀರದ ಸಾಂಬಾದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ನಾಲ್ವರೂ ಉಗ್ರರಿಗೆ ಹೆಡೆಮುರಿ ಕಟ್ಟಿದ್ದಾರೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
"ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆದಿರುವುದೇ ಸುಳ್ಳು"
ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರಿಂದ ಸಾಕಷ್ಟು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 11 ಎಕೆ ರೈಫಲ್ಸ್, 3 ಪಿಸ್ತೂಲ್, 29 ಗ್ರೆನೇಡ್, 6 ಯುಬಿಜಿಎಲ್ ಗ್ರೆನೇಡ್ ನ್ನು ಉಗ್ರರಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.

ಜಮ್ಮು-ಕಾಶ್ಮೀರ ಚುನಾವಣೆಯೇ ಟಾರ್ಗೆಟ್:
ಜಮ್ಮು ಕಾಶ್ಮೀರದಲ್ಲಿ ನವೆಂಬರ್.28ರಿಂದ ಎಂಟು ಹಂತಗಳಲ್ಲಿ ನಡೆಯಲಿರುವ ಜಿಲ್ಲಾ ಅಭಿವೃದ್ಧಿ ಮಂಡಳಿಯ ಚುನಾವಣೆಗೆ ಅಡ್ಡಿಪಡಿಸುವ ದೊಡ್ಡ ಯೋಜನೆಯನ್ನು ಉಗ್ರರು ಹಾಕಿಕೊಂಡಿದ್ದರು ಎಂದು ಪೊಲೀಸ್ ಮೂಲಗಳು ಹೇಳುತ್ತಿದೆ. ಭಾರತೀಯ ಸೇನಾ ಗುಂಡಿಗೆ ಬಲಿಯಾದ ಭಯೋತ್ಪಾದಕರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಸಾಂಬಾ ಜಿಲ್ಲೆಯ ಭೂಗತ ಸುರಂಗದ ಮೂಲಕ ಪಾಕಿಸ್ತಾನದಿಂದ ಭಯೋತ್ಪಾದಕರು ಈ ಭಾಗಕ್ಕೆ ನುಸುಳಿದ್ದಾರೆ ಎಂದು ಶಂಕಿಸಲಾಗಿದೆ. ಸಾಂಬಾ ಜಿಲ್ಲೆಯ ರೀಗಲ್ ಗ್ರಾಮದ ಬಳಿ ಸುರಂಗ ಇರುವಿಕೆಯನ್ನು ಶಂಕಿಸಲಾಗಿದೆ. ಬಿಎಸ್ಎಫ್ ಶುಕ್ರವಾರದಿಂದ ಬೃಹತ್ ಸುರಂಗ ವಿರೋಧಿ ಕಾರ್ಯಾಚರಣೆ ನಡೆಸಿತು.












Click it and Unblock the Notifications