ಭಾರತದ ಸ್ಟಾರ್ ಕ್ರಿಕೆಟಿಗನ ಬಾಳಲ್ಲಿ ಬಿರುಗಾಳಿ: ಲವ್‌, ದೋಖಾ ಸ್ಟೋರಿ ಬಯಲು- ಇನ್ನೊಬ್ಬ ಸ್ಟಾರ್‌ ಕ್ರಿಕೆಟಿಗನ ಜೊತೆ ಲವ್ವಿಡವ್ವಿ?

ಹುಡುಗಿ ಕೈಕೊಟ್ಟು ಹೋಗುವುದು, ಹುಡುಗ ಕುಡ್ಕೊಂಡು ಎಲ್ಲೆಂದರಲ್ಲಿ ಮಲಗೋದೆಲ್ಲಾ ಮಾಮೂಲಿ. ಹೀಗೆ, ಹೆಂಡತಿ ಕೈಕೊಟ್ಟು ಹೋಗುವುದು, ಗಂಡ ಕುಡಿದು ಬೀಳುವುದು ಕೂಡ ಒಂದು ಸ್ವಲ್ಪ ಮಾಮೂಲಿ ಅನ್ನಬಹುದು. ಆದರೆ ಒಂದು ಕಾಲದಲ್ಲಿ ಕ್ರಿಕೆಟ್ ಅಖಾಡದಲ್ಲಿ ದೊಡ್ಡ ಸದ್ದು ಮಾಡಿದ್ದ ಸ್ಟಾರ್ ಕ್ರಿಕೆಟ್ ಆಟಗಾರನಿಗೂ ಹೆಂಡತಿ ಕೈಕೊಟ್ಟು ಹೋಗಿದ್ದಾರಾ? ಯರ್ರಾಬಿರ್ರಿ ಕುಡಿದು ಸ್ಟಾರ್ ಕ್ರಿಕೆಟಿಗ ಮಾಡಿದ್ದೇನು?

ಹೌದು, ಆರ್ ಸಿಬಿ ಮಾಜಿ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಬಾಳಲ್ಲಿ ಇದೀಗ ಭಾರಿ ದೊಡ್ಡ ಬಿರುಗಾಳಿ ಎದ್ದಿದೆ. ಚಹಲ್ ಬಾಳಲ್ಲಿ ಈ ರೀತಿ ಬಿರುಗಾಳಿ ಏಳಲು ಅವರ ಹೆಂಡತಿ ಬಿಟ್ಟು ಹೋಗಿದ್ದೇ ಕಾರಣ ಎಂಬ ಸುದ್ದಿ ಹಬ್ಬಿದೆ. ಅದರಲ್ಲೂ ಯುಜ್ವೇಂದ್ರ ಚಹಾಲ್ ಅವರು ಫುಲ್ ಕುಡಿದು ಟೈಟ್ ಆಗಿ ನಡೆಯಲು ಆಗದೇ ತೂರಾಡಿಕೊಂಡು ಹೋಗಿ, ಕಾರ್ ಫ್ರಂಟ್ ಸೀಟ್ ಮೇಲೆ ಕೂತಿರುವ ವಿಡಿಯೋ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಇದರ ಜೊತೆಗೆ ಚಹಲ್ ಹೆಂಡತಿ ಧನಶ್ರೀ ವರ್ಮಾ....

Yuzvendra Chahal s Viral Video Is Fuels The Divorce Rumours With Dhanashree Verma

ಹೆಂಡತಿ ಕೈಕೊಟ್ಟಿದ್ದಕ್ಕೆ ಕುಡಿತದ ಚಟ?

ಆರ್‌ಸಿಬಿ ಬೆಂಗಳೂರು ತಂಡಕ್ಕೆ ಆಡುತ್ತಾ, ಇಡೀ ದೇಶದ ಗಮನ ಸೆಳೆದ ಯುಜ್ವೇಂದ್ರ ಚಹಾಲ್ ಜೀವನ ಇದೀಗ ಹಳಿ ತಪ್ಪಿದ ರೈಲಿನ ರೀತಿ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ, ಯುಜ್ವೇಂದ್ರ ಚಹಾಲ್ ಜೀವನ ಹಳಿ ತಪ್ಪಲು ಅವರ ಹೆಂಡತಿ ಕಾರಣ, ಅನ್ನೋ ಆರೋಪ ಮಾಡಲಾಗುತ್ತಿದೆ ಸೋಷಿಯಲ್ ಮೀಡಿಯಾದಲ್ಲಿ.

ಯುಜ್ವೇಂದ್ರ ಚಹಾಲ್ ಅವರ ಹೆಂಡತಿ ಇದೀಗ ಡಿವೋರ್ಸ್ ಬಯಸಿದ್ದು, ಚಹಾಲ್ ಅವರ ಮಾನಸಿಕ ಆಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿಕ್ಕಾಪಟ್ಟೆ ಕುಡಿತವನ್ನ ಕೂಡ ಕಲಿತಿರುವ ಯುಜ್ವೇಂದ್ರ ಚಹಾಲ್ ಅವರು, ಮನಸ್ಸಿಗೆ ಬಂದಂತೆ ಕುಡಿದು ನಿಲ್ಲೋಕೆ ಆಗದೆ ಪರದಾಡುತ್ತಾ ಹೋಗಿ ಕಾರ್ ಸೀಟ್ ಮೇಲೆ ಕೂತಿರುವ ವಿಡಿಯೋ ವೈರಲ್ ಆಗ್ತಿದೆ.

ದಿನೇಶ್ ಕಾರ್ತಿಕ್ ಹೆಂಡತಿಯ ಮೋಸ...

ಅಲ್ಲದೆ ಇದೇ ವೇಳೆ ದಿನೇಶ್ ಕಾರ್ತಿಕ್ ಅವರ ಜೀವನದ ರೀತಿಯಲ್ಲೇ, ಯುಜ್ವೇಂದ್ರ ಚಹಾಲ್ ಅವರ ಹೆಂಡತಿ ಕೂಡ ಕೈಕೊಟ್ಟು ಹೋಗಿದ್ದಾರಾ? ಅನ್ನೋ ಚರ್ಚೆಯನ್ನೂ ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗುತ್ತಿದೆ. ಹೀಗೆ ಚಹಾಲ್ ಅವರ ವಿಚಾರ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಫುಲ್ ವೈರಲ್ ಅಗುತ್ತಿದೆ. ಹಾಗಾದ್ರೆ ದಿನೇಶ್ ಕಾರ್ತಿಕ್ ಹೆಂಡತಿ ಮಾಡಿದ್ದ ಮೋಸ ಎಂತಹದ್ದು? ಮುಂದೆ ಓದಿ.

ಅಂದಹಾಗೆ 2007 ರಲ್ಲಿ ದಿನೇಶ್ ಕಾರ್ತಿಕ್ ಅವರು ತಮ್ಮ ಬಾಲ್ಯದ ಗೆಳತಿ ಜೊತೆಯಲ್ಲಿ ಮದುವೆ ಆಗಿದ್ದರು. ಆಗ ತಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ರು ದಿನೇಶ್ ಕಾರ್ತಿಕ್. ಹೀಗೆ ಡಿಕೆ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟ ನಂತರ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದರು. ಹೀಗಿದ್ದಾಗ ದಿನೇಶ್ ಕಾರ್ತಿಕ್ ಅವರ ಹೆಂಡತಿ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಮುರಳಿ ವಿಜಯ್, ಆಕೆಯ ಜೊತೆಗೆ ಹೋದರು ಎಂಬ ಆರೋಪ ಕೇಳಿಬಂತು. ಆ ನಂತರ ದಿನೇಶ್ ಕಾರ್ತಿಕ್ ಕ್ರಿಕೆಟ್ ಜೀವನ ಕೂಡ ಕುಗ್ಗಿ ಹೋಗಿತ್ತು ಈಗ ಯುಜ್ವೇಂದ್ರ ಚಹಾಲ್ ಜೀವನವನ್ನ ಕೂಡ ಅದೇ ರೀತಿ ಹೋಲಿಕೆ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+