Yuzvendra Chahl: ಭಾರತ vs ನ್ಯೂಜಿಲೆಂಡ್ ಫೈನಲ್ ವೇಳೆ ಯುಜ್ವೇಂದ್ರ ಚಹಾಲ್ ಜೊತೆ ಕಾಣಿಸಿಕೊಂಡ ಮಹಿಳೆ ಯಾರು?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದ ವೇಳೆ ಯುಜ್ವೇಂದ್ರ ಚಹಾಲ್ ಕಾಣಿಸಿಕೊಂಡಿದ್ದಾರೆ. ಚಹಾಲ್ ಒಬ್ಬರೇ ಪಂದ್ಯ ನೋಡಲು ಬಂದಿದ್ದರೆ ಅಷ್ಟಾಗಿ ಗಮನ ಸೆಳೆಯುತ್ತಿರಲಿಲ್ಲ, ಆದರೆ ಅವರು ಮಹಿಳೆ ಜೊತೆ ಕಾಣಿಸಿಕೊಂಡಿದ್ದರಿಂದ ಗಮನ ಸೆಳೆದಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಯುಜ್ವೇಂದ್ರ ಚಹಾಲ್ ಮಹಿಳೆಯೊಬ್ಬರ ಜೊತೆ ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಮಹಿಳೆ ಯಾರು ಎನ್ನುವ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಮಹಿಳೆಯನ್ನು ಪತ್ತೆ ಹಚ್ಚಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ, ಅವರು ಆರ್ ಜೆ ಮಹ್ವಾಶ್ ಎಂದು ಗುರುತಿಸಿದ್ದಾರೆ.

ಆರ್ ಜೆ ಮಹ್ವಾಶ್ ಜೊತೆ ಚಹಾಲ್ ಡೇಟಿಂಗ್?
ಯುಜ್ವೇಂದ್ರ ಚಹಾಲ್ ಜೊತೆ ಕಾಣಿಸಿಕೊಂಡ ಹುಡುಗಿಯನ್ನಯ ಆರ್ ಜೆ ಮಹ್ವಾಶ್ ಎಂದು ಕ್ರಿಕೆಟ್ ಅಭಿಮಾನಿಗಳು ಗುರುತಿಸಿದ್ದಾರೆ. ಇಬ್ಬರು ಆಗಾಗ್ಗೆ ಭೇಟಿಯಾಗುತ್ತಿರುವ ಹಲವು ಹಳೆಯ ಫೋಟೊಗಳು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಆರ್ ಜೆ ಮಹ್ವಾಶ್ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಭಾರತ - ನ್ಯೂಜಿಲೆಂಡ್ ಪಂದ್ಯದವನ್ನು ನೋಡುತ್ತಿರುವ ಬಗ್ಗೆ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಚಹಾಲ್ ಜೊತೆ ಇರುವುದು ಅವರೇ ಎನ್ನುವುದಕ್ಕೆ ಇದು ಸ್ಪಷ್ಟನೆ ಕೊಟ್ಟಿದೆ. ಇಬ್ಬರ ನಡುವೆ ಇರುವುದು ಬರೀ ಸ್ನೇಹವಾ ಅದಕ್ಕೂ ಮೀರಿದ ಬಾಂಧವ್ಯ ಇದೆಯಾ ಎನ್ನುವ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.
ಚಹಾಲ್ - ಧನಶ್ರೀ ವಿಚ್ಛೇದನ
ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ನಡುವಿನ ಸಂಬಂಧ ಹಳಸಿದ್ದು ಇಬ್ಬರು ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿಗಳು ಹಲವು ತಿಂಗಳಿನಿಂದ ಹರಿದಾಡುತ್ತಿದ್ದವೂ, ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದರು. ಚಹಾಲ್ ಧನಶ್ರೀ ಜೊತೆಗಿದ್ದ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ.
18 ತಿಂಗಳು ಬೇರೆ ಬೇರೆಯಾಗಿ ವಾಸಿಸುತ್ತಿದ್ದು ಕೌನ್ಸೆಲಿಂಗ್ ಬಳಿಕ ಚಹಾಲ್ ಮತ್ತು ಧನಶ್ರೀ ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ಬೇರ್ಪಡಲು ಬಯಸುತ್ತಿದ್ದಾರೆ ಎಂದು ನ್ಯಾಯಾಧೀಶರಿಗೆ ತಿಳಿಸಲಾಯಿತು, ಹೊಂದಾಣಿಕೆ ಸಮಸ್ಯೆಯಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಕೋರ್ಟ್ ದಂಪತಿಗೆ ವಿಚ್ಛೇದನ ನೀಡಿದೆ.
ಚಹಾಲ್‌ಗೆ ನೆಟ್ಟಿಗರ ಪ್ರಶ್ನೆ?
ಚಹಾಲ್ ಬೇರೆ ಮಹಿಳೆ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಬಗೆ ಬಗೆಯಾಗಿ ಚರ್ಚೆ ನಡೆಸಲಾಗುತ್ತಿದೆ. ಒಂದು ವೇಳೆ ಧನಶ್ರೀ ವರ್ಮಾ ಬೇರೆ ಹುಡುಗನ ಜೊತೆ ಕಾಣಿಸಿಕೊಂಡಿದ್ದರೆ ಆಕೆಯ ಬಗ್ಗೆ ಹೇಗೆಲ್ಲಾ ಮಾತನಾಡುತ್ತಿದ್ದರು ಎಂದು ಪ್ರಶ್ನೆ ಮಾಡಲಾಗುತ್ತಿದೆ. ಚಹಾಲ್ ಡಿಪ್ರೆಷನ್‌ನಲ್ಲಿದ್ದಾರೆ ಎಂದು ವರದಿಯಾಗಿತ್ತು ಆದರೆ ಚಹಾಲ್ ಬೇರೆ ಹುಡುಗಿ ಜೊತೆ ಆರಾಮಾಗಿ ಪಂದ್ಯ ವೀಕ್ಷಣೆ ಮಾಡುತ್ತಿದ್ದಾರೆ, ಸತ್ಯ ಗೊತ್ತಿಲ್ಲದೆ ಯಾರ ಪರವೂ ಮಾತನಾಡಬಾರದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications