Yuzvendra Chahal: ಚಹಾಲ್ - ಧನಶ್ರೀ ವರ್ಮಾ ಡಿವೋರ್ಸ್? ದೇವರು ಕಾಪಾಡಿದ ಎಂದ ಯುಜ್ವೇಂದ್ರ ಚಹಾಲ್‌

ಭಾರತದ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಅಂತಿಮವಾಗಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಸಂಜೆ 4 ಗಂಟೆಗೆ ಇಬ್ಬರೂ ನ್ಯಾಯಾಲಯದ ಮುಂದೆ ಹಾಜರಾಗಬೇಕಿತ್ತು ಎಂದು ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ.

ವರದಿಯ ಪ್ರಕಾರ ಮುಂಬೈನ ಬಾಂದ್ರಾದಲ್ಲಿರುವ ಕೌಟುಂಬಿಕ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇಬ್ಬರೂ ಕೂಡ ನ್ಯಾಯಾಲದಲ್ಲಿ ಹಾಜರಾಗಿ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ. ಇಲ್ಲಾ ಪ್ರಕ್ರಿಯೆ ಬಳಿಕ ವಿಚ್ಛೇದನ ಪ್ರಮಾಣಪತ್ರ ಪಡೆಯಲಿದ್ದಾರೆ. ಪರಸ್ಪರ ಒಪ್ಪಿಗೆಯ ಮೂಲಕ ಬೇರೆಯಾಗುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

Yuzvendra chahal dhanashree verma divorce court appearance

ಕಳೆದ ಹಲವು ತಿಂಗಳಿನಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಬೇರೆ ಬೇರೆ ವಾಸಿಸುತ್ತಿದ್ದು ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು, ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದರಿಂದ ಅನುಮಾನ ಹೆಚ್ಚಾಗಿತ್ತು. ಈಗ ವಿಚ್ಛೇದನ ಆಗಿದೆ ಎನ್ನುವ ವರದಿ ಬಂದಿದೆ.

ಈ ಬಗ್ಗೆ ಯುಜ್ವೇಂದ್ರ ಚಹಾಲ್ ಆಗಲಿ ಧನಶ್ರೀ ವರ್ಮಾ ಆಗಲಿ ಅಧಿಕೃತವಾಗಿ ಖಚಿತಪಡಿಸಿಲ್ಲವಾದರೂ, ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಪೋಸ್ಟ್‌ಗಳು ವಿಚ್ಛೇದನ ಸುದ್ದಿಗೆ ಬಲ ತುಂಬಿವೆ.

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಹಾಲ್‌ "ದೇವರು ನಾನು ಅಂದುಕೊಂಡಿದ್ದಕ್ಕಿಂಗ ಹೆಚ್ಚು ಬಾರಿ ನನ್ನನ್ನು ರಕ್ಷಿಸಿದ್ದಾನೆ. ಹಾಗಾಗಿ ನನಗೆ ಗೊತ್ತಿಲ್ಲದ ಸಮಯಗಳನ್ನು ನಾನು ಊಹಿಸಿಕೊಳ್ಳಬಲ್ಲೆ. ನನಗೆ ಗೊತ್ತಿಲ್ಲದಿದ್ದರೂ ಯಾವಾಗಲೂ ನನ್ನ ಇರುವುದಕ್ಕೆ ದೇವರಿಗೆ ಧನ್ಯವಾದಗಳು. ಆಮೆನ್," ಎಂದು ಬರೆದುಕೊಂಡಿದ್ದಾರೆ.

ಧನಶ್ರೀ ಪೋಸ್ಟ್ ವೈರಲ್

ಧನಶ್ರೀ ವರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದು, "ಒತ್ತಡದಿಂದ ಬಿಡುಗಡೆ ಸಿಕ್ಕಿದೆ. ದೇವರು ನಮ್ಮ ಚಿಂತೆಗಳು ಮತ್ತು ಪ್ರಯೋಗಗಳನ್ನು ಆಶೀರ್ವಾದಗಳಾಗಿ ಹೇಗೆ ಪರಿವರ್ತಿಸಬಹುದು ಎನ್ನುವುದು ಅದ್ಭುತವಲ್ಲವೇ? ಇಂದು ನೀವು ಯಾವುದೋ ವಿಷಯದ ಬಗ್ಗೆ ಒತ್ತಡದಲ್ಲಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂದು ತಿಳಿಯಿರಿ. ನೀವು ಚಿಂತಿಸುತ್ತಲೇ ಇರಬಹುದು ಅಥವಾ ನೀವು ಎಲ್ಲವನ್ನೂ ದೇವರಿಗೆ ಒಪ್ಪಿಸಿ ಎಲ್ಲದರ ಬಗ್ಗೆಯೂ ಪ್ರಾರ್ಥಿಸಲು ಆಯ್ಕೆ ಮಾಡಬಹುದು. ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಒಟ್ಟಿಗೆ ಕೆಲಸ ಮಾಡಬಲ್ಲನೆಂಬ ನಂಬಿಕೆಯನ್ನು ಹೊಂದಿರುವುದು ಶಕ್ತಿ." ಎಂದಿದ್ದಾರೆ.

2023 ರಲ್ಲಿ ಕೆಟ್ಟ ಫಾರ್ಮ್‌ ಬಳಿಕ ಚಹಾಲ್‌ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಅವಕಾಶ ಪಡೆದಿಲ್ಲ. ಐಪಿಎಲ್‌ನಲ್ಲಿ ಮಾತ್ರ ಚಹಾಲ್ ಅವರಿಗೆ ಬೇಡಿಕೆ ಕಡಿಮೆಯಾಗಿಲ್ಲ. 2025ರ ಐಪಿಎಲ್‌ನಲ್ಲಿ ಚಹಾಲ್ ಬರೋಬ್ಬರಿ 18 ಕೋಟಿ ರೂಪಾಯಿಗೆ ಹರಾಜಾಗಿದ್ದು, ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಆಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+