Shreyanka Patil: ಟೀಂ ಇಂಡಿಯಾ ವೇಗಿ ಜೊತೆ ಶ್ರೇಯಾಂಕಾ ಪಾಟೀಲ್ ಡೇಟಿಂಗ್? ಅಸಲಿ ಸಂಗತಿ ಇಲ್ಲಿದೆ
ಮಹಿಳಾ ಪ್ರೀಮಿಯರ್ ಲೀಗ್ (WPL) 2025ರ ಆವೃತ್ತಿಯ ಆರಂಭದ ಕೆಲವು ಪಂದ್ಯಗಳು ವಡೋದರಾದಲ್ಲಿ ನಡೆದ ಬಳಿಕ ಬೆಂಗಳೂರಿಗೆ ಶಿಫ್ಟ್ ಆಗಿದೆ. ಶುಕ್ರವಾರ ಆತಿಥೇಯ ಆರ್ ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯವನ್ನಾಡಿತು. ರೋಚಕ ಪಂದ್ಯದಲ್ಲಿ ಆರ್ ಸಿಬಿ ಸೋಲು ಕಂಡಿತು. ಈ ಪಂದ್ಯ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ನೆಚ್ಚಿನ ಆಟಗಾರ್ತಿಯರನ್ನು ನೋಡಿ ಅಭಿಮಾನಿಗಳು ಸಂಭ್ರಮಪಟ್ಟರು.
ಆರ್ ಸಿಬಿ ಮುಂಬೈ ಇಂಡಿಯನ್ಸ್ ನಡುವೆ ಗಮನ ಸೆಳೆದ ಮತ್ತೊಂದು ವಿಚಾರ ಶ್ರೇಯಾಂಕಾ ಪಾಟೀಲ್, ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದಲೇ ಹೊರಗುಳಿದಿದ್ದು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಅವರು ಮೈದಾನದಲ್ಲಿ ಆರ್ ಸಿಬಿ ತಂಡಕ್ಕೆ ಉತ್ತೇಜನ ಕೊಟ್ಟರು.

ಶ್ರೇಯಾಂಕಾ ಪಾಟೀಲ್ ಜೊತೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗದ ಬೌಲರ್ ಮಯಾಂಕ್ ಯಾದವ್ ಕೂಡ ಕಾಣಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತು. ಇಬ್ಬರ ಫೋಟೊವನ್ನು ಸೊಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವದಂತಿ ಕೂಡ ಹಬ್ಬಿಸಲಾಗುತ್ತಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಫೋಟೊ ಬಗ್ಗೆ ಹಲವು ರೀತಿಯ ಕಾಮೆಂಟ್‌ಗಳನ್ನು ಮಾಡಿದರು. ಇದು ಕ್ರಿಕೆಟ್‌ನ ಭವಿಷ್ಯದ ಪವರ್ ಜೋಡಿ ಎಂದು ಕೂಡ ಹಲವರು ಹೇಳಿದ್ದಾರೆ. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅದಕ್ಕಾಗಿಯೇ ಮಯಾಂಕ್ ಯಾದವ್ ಬೆಂಗಳೂರಿಗೆ ಬಂದಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ.
ಡೇಟಿಂಗ್ ವರದಿ ಸುಳ್ಳು
ಅಷ್ಟಕ್ಕೂ ನಿಜ ಏನೂ ಎಂದರೆ ಶ್ರೇಯಾಂಕಾ ಪಾಟೀಲ್ ಮತ್ತು ಮಯಾಂಕ್ ಯಾದವ್ ಡೇಟಿಂಗ್ ಮಾಡುತ್ತಿಲ್ಲ. ಇಬ್ಬರೂ ಕೂಡ ಭಾರತ ತಂಡಕ್ಕಾಗಿ ಆಡಿದ್ದು ಸದ್ಯ ಗಾಯದಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿಗೆ ಒಳಗಾಗಿದ್ದಾರೆ. ಇಬ್ಬರು ಸದ್ಯ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿ ಆರ್ ಸಿಬಿ ಪಂದ್ಯವಿದ್ದ ಕಾರಣ ಒಟ್ಟಿಗೆ ಬಂದು ವೀಕ್ಷಿಸಿದ್ದಾರೆ.
ಭಾರತದ ಭವಿಷ್ಯದ ಮಾರಕ ವೇಗದ ಬೌಲರ್ ಎಂದೇ ಬಿಂಬಿಸಲಾಗುತ್ತಿರುವ ಮಯಾಂಕ್ ಯಾದವ್, ಬೆನ್ನು ನೋವಿನಿಂದ ಬಳಲುತ್ತಿದ್ದು ಅಕ್ಟೋಬರ್ 2024ರಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಆರ್ ಸಿಬಿ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು ಮಹಿಳಾ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದಾರೆ. 2024ರ ಆವೃತ್ತಿಯಲ್ಲಿ ಹೆಚ್ಚಿನ ವಿಕೆಟ್ ಪಡೆಯುವ ಮೂಲಕ ಆರ್ ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಮಯಾಂಕ್ ಯಾದವ್ ಮತ್ತು ಶ್ರೇಯಾಂಕಾ ಪಾಟೀಲ್ ತಮ್ಮ ಫಿಟ್‌ನೆಸ್ ಕಡೆ ಗಮನ ಹರಿಸಿದ್ದು, ಭಾರತಕ್ಕಾಗಿ ಆಡುವ ಯೋಜನೆಯಲ್ಲಿದ್ದಾರೆ. ಇಬ್ಬರ ನಡುವೆ ಪರಿಚಯವಿದೆ ಹೊರತು ಪ್ರಣಯವಲ್ಲ. ಇಬ್ಬರೂ ಕೂಡ ತಮ್ಮ ವೃತ್ತಿಜೀವನದ ಕಡೆ ಮಾತ್ರ ಗಮನ ಕೊಟ್ಟಿದ್ದು, ಎನ್‌ಸಿಎನಲ್ಲಿ ಪುನರ್ವಸತಿಯಲ್ಲಿದ್ದಾರೆ.












Click it and Unblock the Notifications