WPL 2025 Auction: ಮಹಿಳಾ ಪ್ರೀಮಿಯರ್ ಲೀಗ್ ಹರಾಜಿಗೆ ಕ್ಷಣಗಣನೆ; ಸಮಯ, ನೇರಪ್ರಸಾರ ಮಾಹಿತಿ

ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಡಿಸೆಂಬರ್ 15, ಭಾನುವಾರ) ಮಧ್ಯಾಹ್ನ 3.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ಐದು ಫ್ರಾಂಚೈಸಿಗಳು ತಮ್ಮದೇ ಯೋಜನೆಯೊಂದಿಗೆ ಹರಾಜು ಟೇಬಲ್‌ಗೆ ಬರಲಿದ್ದು, ಪ್ರಮುಖ ಆಟಗಾರರು ಯಾವ ತಂಡಕ್ಕೆ ಹೋಗುತ್ತಾರೆ ಎನ್ನುವ ಕುತೂಹಲವಿದೆ.

ಆರ್ ಸಿಬಿ, ಗುಜರಾತ್ ಜೈಂಟ್ಸ್, ಯುಪಿ ವಾರಿಯರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ತಂಡದ ಬಲವನ್ನು ಹೆಚ್ಚಿಸಿಕೊಳ್ಳುವ ರಣತಂತ್ರದ ಜೊತೆ ಹರಾಜಿಗೆ ಬರಲಿವೆ. 120 ಆಟಗಾರರು ಹರಾಜಿಗೆ ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 29 ವಿದೇಶಿ ಆಟಗಾರರಿದ್ದು, 91 ಮಂದಿ ಭಾರತೀಯ ಆಟಗಾರರು ಸೇರಿದ್ದಾರೆ. ಇದರಲ್ಲಿ ಗರಿಷ್ಠ 19 ಆಟಗಾರರು ಮಾತ್ರ ವಿವಿಧ ತಂಡಗಳನ್ನು ಸೇರಲಿದ್ದಾರೆ.

WPL 2025 Auction will start soon timings live streaming details

ಕಳೆದ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್ ತಂಡದಲ್ಲಿದ್ದ ಇಂಗ್ಲೆಂಡ್‌ನ ಲಾರೆನ್ ಬೆಲ್‌ ಈ ಬಾರಿ ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ. ಸ್ನೇಹ ರಾಣಾ, ಕಮಲಿನಿ, ನಂದಿನಿ ಕಶ್ಯಪ್ ಸೇರಿದಂತೆ ಹಲವು ಭಾರತೀಯ ಆಟಗಾರರು ಕೂಡ ವಿವಿಧ ತಂಡಗಳನ್ನು ಸೇರುವ ನಿರೀಕ್ಷೆಯಲ್ಲಿದ್ದಾರೆ.

ವಿವಿಧ ತಂಡಗಳ ಪರ್ಸ್ ವಿವರ

ಮಿನಿ ಹರಾಜಾಗಿರುವ ಕಾರನ ತಂಡಗಳ ಬಳಿ ಕಡಿಮೆ ಪರ್ಸ್ ಉಳಿದಿದೆ. ಗುಜರಾತ್ ಜೈಂಟ್ಸ್ 4.4 ಕೋಟಿ ರೂಪಾಯಿ ಪರ್ಸ್ ಹೊಂದಿದ್ದು ಹೆಚ್ಚಿನ ಹಣದ ಜೊತೆ ಹರಾಜು ಟೇಬಲ್‌ಗೆ ಬರಲಿದೆ. ಯುಪಿ ವಾರಿಯರ್ಸ್ ₹3.9 ಕೋಟಿ, ಆರ್ ಸಿಬಿ ₹3.25 ಕೋಟಿ, ಮುಂಬೈ ಇಂಡಿಯನ್ಸ್ ₹2.65 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ ₹2.5 ಕೋಟಿ ಪರ್ಸ್ ಹೊಂದಿವೆ.

ಎಲ್ಲಾ ತಂಡಗಳು ಈಗಾಗಲೇ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದು ಕೆಲವೇ ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದ್ದವು. ಈಗ ಬೆಂಚ್‌ ಬಲವನ್ನು ಹೆಚ್ಚಿಸಲು ಪ್ರಮುಖ ಆಟಗಾರರನ್ನು ಖರೀದಿ ಮಾಡಲಿವೆ.

ಮಹಿಳಾ ಪ್ರೀಮಿಯರ್ ಲೀಗ್‌ ಹರಾಜು ಪ್ರಕ್ರಿಯೆಯನ್ನು ಆಸಕ್ತರು ನೇರಪ್ರಸಾರದಲ್ಲಿ ಕೂಡ ವೀಕ್ಷಿಸಬಹುದು. ಸ್ಪೋರ್ಟ್‌ 18 ವಾಹಿನಿ ನೇರಪ್ರಸಾರ ಮಾಡಲಿದ್ದು ಟಿವಿಯಲ್ಲಿ ನೋಡುವವರು ಈ ವಾಹಿನಿಯಲ್ಲಿ ವೀಕ್ಷಣೆ ಮಾಡಬಹುದು. ಮೊಬೈಲ್‌ನಲ್ಲಿ ನೋಡುವವರು ಜಿಯೋ ಸಿನಿಮಾದಲ್ಲಿ ಹರಾಜು ಪ್ರಕ್ರಿಯೆ ವೀಕ್ಷಿಸಬಹುದು.

ಮಿನಿ ಹರಾಜು ಆದರೂ ಹಲವು ಆಟಗಾರರು ಉತ್ತಮ ಮೊತ್ತ ಪಡೆಯುವ ಸಾಧ್ಯತೆ ಇದೆ. ಮುಖ್ಯವಾಗಿ ಕಳೆದ ಎರಡು ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಗುಜರಾತ್ ಟೈಟಾನ್ಸ್ ತಂಡದ ಬಲ ಹೆಚ್ಚಿಸಿಕೊಳ್ಳಲು ಪ್ರಮುಖ ಆಟಗಾರರಿಗೆ ಬಿಡ್ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+