RCB: ಹ್ಯಾಟ್ರಿಕ್ ಶತಕದ ಅಬ್ಬರ; ಆರ್‌ಸಿಬಿ ಸೇರ್ತಾರ ಮಯಾಂಕ್ ಅಗರ್ವಾಲ್
ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿಕೊಂಡಿರುವ ಮಯಾಂಕ್ ಅಗರ್ವಾಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಸತತವಾಗಿ ಮೂರು ಪಂದ್ಯಗಳಲ್ಲಿ ಶತಕ ಸಿಡಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಮಂಗಳವಾರ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೂಡ ಮಯಾಂಕ್ 112 ಎಸೆತಗಳಲ್ಲಿ 15 ಬೌಂಡರಿ 2 ಸಿಕ್ಸರ್ ಸಹಿತ 124 ರನ್ ಗಳಿಸ ಮಿಂಚಿದರು. ಹೈದರಾಬಾದ್ ಪಂದ್ಯವನ್ನು ಗೆದ್ದರೂ ನಾಯಕನಾಗಿ ಮಯಾಂಕ್ ಅಗರ್ವಾಲ್ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದರು.

ವಿಜಯ್ ಹಜಾರೆ ಟ್ರೋಫಿ 2024-25ರ ಆವೃತ್ತಿಯಲ್ಲಿ 5 ಪಂದ್ಯಗಳಲ್ಲಿ 142.67 ಸರಾಸರಿಯಲ್ಲಿ ಬರೋಬ್ಬರಿ 428 ರನ್ ಗಳಿಸಿದ್ದಾರೆ. ಇದರಲ್ಲಿ 50 ಬೌಂಡರಿ ಮತ್ತು 13 ಸಿಕ್ಸರ್ ಕೂಡ ಸೇರಿವೆ. ಪಂದ್ಯಾವಳಿಯಲ್ಲಿ ಮೂರು ಶತಕ ಸಿಡಿಸಿದ್ದಾರೆ.
ಆರ್ ಸಿಬಿಗೆ ಬರ್ತಾರ ಮಯಾಂಕ್?
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್‌ಗೆ ಬಿಡ್ ಮಾಡಲು ಯಾವ ಫ್ರಾಂಚೈಸಿಗಳು ಕೂಡ ಆಸಕ್ತಿ ತೋರಿಸಲಿಲ್ಲ. ಇದೇ ಮೊದಲ ಬಾರಿಗೆ ಮಯಾಂಕ್ ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆಟಗಾರ ಎನಿಸಿಕೊಂಡರು. ಈಗ ಅವರು ನೀಡುತ್ತಿರುವ ಉತ್ತಮ ಪ್ರದರ್ಶನ ಅವರಿಗೆ ಐಪಿಎಲ್ ಕದ ತಟ್ಟಲು ಮತ್ತೊಂದು ಅವಕಾಶ ಸಿಕ್ಕಂತಾಗಿದೆ.
ಯಾವುದಾದರೂ ಆಟಗಾರ ಗಾಯಗೊಂಡರೆ ಪಂದ್ಯಾವಳಿಗೆ ಅಲಭ್ಯವಾದರೆ ಫ್ರಾಂಚೈಸಿಗಳು ಹರಾಜಿನಲ್ಲಿ ಅನ್‌ಸೋಲ್ಡ್ ಆಗಿರುವ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಆರ್ ಸಿಬಿ ತಂಡದಲ್ಲಿ ಯಾರಾದರೂ ಗಾಯಗೊಂಡು ಹೊರಗುಳಿದರೆ ಅವರ ಬದಲಾಗಿ ಮಯಾಂಕ್ ಅಗರ್ವಾಲ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಮಯಾಂಕ್ ಅಗರ್ವಾಲ್ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದು, ಯಾವುದೇ ಫ್ರಾಂಚೈಸಿಯಲ್ಲಿ ಬ್ಯಾಟರ್ ಗಾಯಗೊಂಡು ಹೊರಗುಳಿದರೂ ಮಯಾಂಕ್‌ರನ್ನು ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಹೆಚ್ಚಾಗಿದೆ.
ಸದ್ಯ ವಿಜಯ್ ಹಜಾರೆ ಟ್ರೋಫಿ ಸರಣಿಯಲ್ಲಿ ಕರ್ನಾಟಕ 5 ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದು 16 ಅಂಕಗಳೊಂದಿಗೆ ಸಿ ಗುಂಪಿನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಸೌರಾಷ್ಟ್ರ ಮತ್ತು ನಾಗಾಲ್ಯಾಂಡ್ ವಿರುದ್ಧ ಎರಡು ಪಂದ್ಯಗಳು ಬಾಕಿ ಇದ್ದು ಎರಡರಲ್ಲಿ ಒಂದು ಪಂದ್ಯ ಗೆದ್ದರೂ ಕರ್ನಾಟಕ 16ರ ಸುತ್ತಿಗೆ ಪ್ರವೇಶ ಪಡೆಯಲಿದೆ.
ಮಯಾಂಕ್ ಅಗರ್ವಾಲ್, ಅಭಿನವ್ ಮನೋಹರ್, ಆರ್ ಸ್ಮರಣ್ ಸೇರಿದಂತೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕರ್ನಾಟಕ ಇದೇ ರೀತಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆಲ್ಲಲಿ ಎಂದು ಕರ್ನಾಟಕ ಕ್ರಿಕೆಟ್ ಅಭಿಮಾನಿಗಳು ಮಯಾಂಕ್ ಪಡೆಗೆ ಶುಭ ಕೋರಿದ್ದಾರೆ.












Click it and Unblock the Notifications