Shame on MI: ಮುಂಬೈ ಇಂಡಿಯನ್ಸ್ ವಿರುದ್ಧ ತಿರುಗಿ ಬಿದ್ದ ಅಭಿಮಾನಿಗಳು
ಐಪಿಎಲ್ 2024ರ ಮಿನಿ ಹರಾಜಿಗೆ ಮುನ್ನವೇ ಮುಂಬೈ ಇಂಡಿಯನ್ಸ್ ದೊಡ್ಡ ಘೋಷಣೆಯೊಂದನ್ನು ಮಾಡಿದೆ. ರೋಹಿತ್ ಶರ್ಮಾ ಅವರ ಬದಲಾಗಿ ಹಾರ್ದಿಕ್ ಪಾಂಡ್ಯ 2024 ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದೆ.
10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಮುಂದಿನ ಐಪಿಎಲ್‌ನಲ್ಲಿ ಬರಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. 5 ಬಾರಿ ಐಪಿಎಲ್ ತಂಡವನ್ನು ಚಾಂಪಿಯನ್ ಮಾಡಿದ್ದ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವೀ ಫ್ರಾಂಚೈಸಿಯಾಗಿದೆ.

ಈಗ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಅಭಿಮಾನಿಗಳನ್ನು ಕೆಳಗಿಳಿಸಿದೆ. ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ಸೇರಿದ್ದರು, ಆದರೂ ರೋಹಿತ್ ಶರ್ಮಾ ನಿವೃತ್ತಿಯಾಗುವವರೆಗೆ ಅವರೇ ನಾಯಕರಾಗಿರಬೇಕಿತ್ತು ಎಂದು ಅಭಿಮಾನಿಗಳು ಬಯಸಿದ್ದರು.
ಶೇಮ್ ಆನ್ ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸುತ್ತಿದ್ದಂತೆ ಕೆರಳಿ ಕೆಂಡವಾಗಿರುವ ಅಭಿಮಾನಿಗಳು, ಶೇಮ್ ಆನ್ ಮುಂಬೈ ಇಂಡಿಯನ್ಸ್ ಎನ್ನುವ ಟ್ರೆಂಡಿಂಗ್ ಆರಂಭಿಸಿದ್ದಾರೆ. #shameonmi ಎನ್ನು ಹ್ಯಾಷ್‌ಟ್ಯಾಗ್ ಬಳಸಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
The Pain is real for MI and Rohit Fans🥹 #Rohit#DiyaKumari #RohitSharma #MumbaiIndians #AishwaryaRaiBachchan #DishaPatani #SachinTendulkar #HardikPandya #Ambani #ShameonMI #RohitSacked
— Raj Paladi (@IamRajPaladi) December 15, 2023
pic.twitter.com/vYLgPtU9om
ಈ ಫ್ರಾಂಚೈಸಿ ಕೀರನ್ ಪೊಲ್ಲಾರ್ಡ್ ಜೊತೆ ಕೂಡ ಹೀಗೆ ವರ್ತಿಸಿತ್ತು, ಈಗ ರೋಹಿತ್ ಶರ್ಮಾ ಜೊತೆ ಹೀಗೆ ಮಾಡಿದ್ದಾರೆ ಎಂದು ಅಭಿಮಾನಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಅವರಿಗೆ ದ್ರೋಹ ಬಗೆದಿದೆ ಎಂದು ಮತ್ತೊಬ್ಬ ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಹಾರ್ದಿಕ್ ಪಾಂಡ್ಯ ನಮ್ಮ ನಾಯಕನಲ್ಲ ಎಂದು ಹೇಳಿದ್ದಾರೆ.
The first mistake you made was by bringing Hardik back into the team! The second mistake was by removing Rohit from the captaincy. When you had people like Surya Bumrah, you still did this!#ShameOnMI
— Aakrosh Dwivedi (@KAakrosh) December 15, 2023
We love you Rohit Sharma!!
Captain leader legend!!#RohitSharma pic.twitter.com/303URjSZ8b
ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಎಲ್ಲವನ್ನೂ ಮಾಡಿದ್ದಾರೆ, ಆದರೆ ಅವರು ಹೃದಯವನ್ನು ಒಡೆದರು ಎಂದು ಮತ್ತೊಬ್ಬರು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಲವು ಅಭಿಮಾನಿಗಳು ನಾವು ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದು, ಮುಂಬೈ ಇಂಡಿಯನ್ಸ್ ಬಾವುಟ ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಕರೆತಂದದ್ದು ಮೊದಲ ತಪ್ಪು, ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಮತ್ತೊಂದು ತಪ್ಪು, ಅದರಲ್ಲೂ ಸೂರ್ಯ ಕುಮಾರ್, ಬುಮ್ರಾ ಅವರಂತಹ ಆಟಗಾರರು ಇರುವಾಗ ಅವರು ಈ ರೀತಿ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.












Click it and Unblock the Notifications