ಶ್ರೇಯಾಂಕಾ ಪಾಟೀಲ್ ಯಾರ ಮಗಳು? ಈ ಸಾಧಕಿಯ ಜೀವನ ಬದಲಾಗಿದ್ದು ಹೇಗೆ?
ಕ್ರಿಕೆಟ್ ಲೋಕದಲ್ಲಿ ಎಲ್ಲಿ ಕೇಳಿದರೂ ಬರೀ ಆರ್‌ಸಿಬಿ, ಆರ್‌ಸಿಬಿ ಪದವೇ ಪ್ರತಿಧ್ವನಿಸುತ್ತಿದೆ. ಹೀಗೆ ಬೆಂಗಳೂರು ತಂಡದ ಆಟಕ್ಕೆ ಕೋಟಿ ಕೋಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ರೀತಿ ಬೆಂಗಳೂರು ತಂಡ ಅಬ್ಬರಿಸಿ 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಿಸೋದಕ್ಕೆ ಒಬ್ಬ ಕನ್ನಡತಿ ಕಾರಣ. ಆ ಕನ್ನಡತಿ ಹೆಸರೇ ಶ್ರೇಯಾಂಕಾ ಪಾಟೀಲ್, ಹೀಗಾಗಿ ಶ್ರೇಯಾಂಕಾ ಪಾಟೀಲ್ ಈಗ ಹೊಸ ನ್ಯಾಷನಲ್ ಕ್ರಷ್ ಆಗಿದ್ದಾರೆ. ಆದ್ರೆ ಇವರು ಯಾರ ಮಗಳು ಗೊತ್ತಾ?
ಆರ್‌ಸಿಬಿ (RCB) ಬೆಂಗಳೂರು ತಂಡ ನಿನ್ನೆ ಕಪ್ ಗೆಲ್ಲುವಲ್ಲಿ, ಮಹತ್ವದ ಪಾತ್ರ ವಹಿಸಿದ್ದು ಇದೇ ಶ್ರೇಯಾಂಕಾ. ಶ್ರೇಯಾಂಕಾ ಪಾಟೀಲ್ ಒಟ್ಟು 3.3 ಓವರ್‌ನಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿ ದೆಹಲಿ ಕ್ಯಾಪಿಟಲ್ಸ್ ತಂಡದ ಹೆಡೆಮುರಿ ಕಟ್ಟಿದ್ದರು. ಈ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದ್ದರು. ಹಾಗಾದ್ರೆ ಶ್ರೇಯಾಂಕಾ ಪಾಟೀಲ್ ಯಾರು? ಶ್ರೇಯಾಂಕಾ ಹುಟ್ಟಿದ್ದು ಎಲ್ಲಿ? ಶ್ರೇಯಾಂಕ ಅವರ ತಂದೆ ಏನು ಮಾಡ್ತಿದ್ದಾರೆ? ಸಂಪೂರ್ಣ ಮಾಹಿತಿ ತಿಳಿಯೋದಕ್ಕೆ ಮುಂದೆ ಓದಿ.

ಬೆಂಗಳೂರಿನ ಹುಡುಗಿ ಶ್ರೇಯಾಂಕಾ!
ಶ್ರೇಯಾಂಕಾ ಪಾಟೀಲ್ ಹುಟ್ಟಿ ಬೆಳೆದಿದ್ದು ನಮ್ಮ ಬೆಂಗಳೂರಿನಲ್ಲಿ. ಹೀಗಾಗಿ ಶ್ರೇಯಾಂಕಾ ಪಾಟೀಲ್ ಮಾತು ಕೂಡ ಬೆಂಗಳೂರಿನ ರೀತಿಯಲ್ಲೇ ಇದೆ. ಹೀಗೆ ನಮ್ಮ ಬೆಂಗಳೂರು ಬೆಡಗಿ ಶ್ರೇಯಾಂಕಾ ಬಾಲ್ಯದಲ್ಲಿ ಕ್ರಿಕೆಟ್ ಆಟಗಾರ್ತಿ ಆಗ್ತೀನಿ ಅಂತಾ ಅಂದುಕೊಂಡೇ ಇರಲಿಲ್ಲವಂತೆ. ಆದರೆ ಶ್ರೇಯಾಂಕಾ ಅವರ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರನಾಗಿದ್ದರು. ಈ ಕಾರಣಕ್ಕೆ ರಾಜೇಶ್ ಪಾಟೀಲ್ ಅವರು ಮಗಳಿಗೂ ಬೆಂಬಲ ನೀಡಿ, ಅವರು ಕ್ರಿಕೆಟ್‌ನಲ್ಲಿ ಸಾಧನೆ ಮಾಡಲು ಎಲ್ಲಾ ರೀತಿ ಸಹಾಯ ಮಾಡಿದ್ದರಂತೆ. ಹಾಗಾದರೆ ಈಗ, ಶ್ರೇಯಾಂಕಾ ಅವರ ತಂದೆ ಏನು ಕೆಲಸ ಮಾಡುತ್ತಿದ್ದಾರೆ?
ಈಗಿರುವ ಮಾಹಿತಿ ಪ್ರಕಾರ ಶ್ರೇಯಾಂಕಾ ಪಾಟೀಲ್ ಅವರ ತಂದೆ ಕೂಡ ಕ್ರಿಕೆಟ್ ಆಟಗಾರ ಆಗಿದ್ದರಂತೆ. ಈ ಕಾರಣಕ್ಕೆ ತಮ್ಮ ಮನೆಯಲ್ಲೀಗ ಇಬ್ಬರು ಕ್ರಿಕೆಟರ್‌ಗಳನ್ನು ಶ್ರೇಯಾಂಕಾರ ತಂದೆ ರೂಪಿಸಿದ್ದಾರೆ. ಶ್ರೇಯಾಂಕಾ ಪಾಟೀಲ್ ಅವರ ಜೊತೆಗೆ ಶ್ರೇಯಾಂಕಾರ ತಮ್ಮ ಕೂಡ ಕ್ರಿಕೆಟ್ ಪ್ಲೇಯರ್ ಆಗಿದ್ದಾರೆ. ಹಾಗೇ ಶ್ರೇಯಾಂಕಾ ತಮ್ಮ ಈಗ ಪಾಂಡಿಚೇರಿ ತಂಡಕ್ಕೋಸ್ಕರ ಆಡುತ್ತಿದ್ದಾರೆ. ಇನ್ನು ಶ್ರೇಯಾಂಕಾ ಅವರ ತಂದೆ ಸ್ವಂತ ಉದ್ಯೋಗ ನಡೆಸುತ್ತಿದ್ದು, ಅವರ ಕಡೆಯಿಂದ ಮಗಳಿಗೆ ಸಂಪೂರ್ಣ ಬೆಂಬಲ ಇದೆ ಎನ್ನಲಾಗಿದೆ.
ಎಲ್ಲೆಲ್ಲೂ ಶ್ರೇಯಾಂಕಾ ಹವಾ ಜೋರು
ಶ್ರೇಯಾಂಕ ಪಾಟೀಲ್ ಅವರ ಹೆಸರು ಇದೀಗ ಸೋಷಿಯಲ್ ಮೀಡಿಯಾದಲ್ಲೂ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಶೇಯಾಂಕ ಪಾಟೀಲ್ ಕ್ರಿಕೆಟ್ ವಿಡಿಯೋಗಳನ್ನು ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ. ಹಾಗೇ ಶೇಯಾಂಕ ಆಟಕ್ಕೂ ಫ್ಯಾನ್ಸ್ ಈಗ ಫಿದಾ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇಯಾಂಕ ಅವರ ಹವಾ ಜೋರಾಗಿದೆ. ಅದ್ರಲ್ಲೂ ಆರ್‌ಸಿಬಿ ಮೊದಲ ಬಾರಿ ಕಪ್ ಗೆದ್ದ ನಂತರ ಶ್ರೇಯಾಂಕಾ ಹವಾ ಮತ್ತಷ್ಟು ಜೋರಾಗಿದೆ. ಅಲ್ಲದೆ 2024ರ WPLನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದು, ಮುಂದೆ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಡುವ ಗುರಿ ಹೊಂದಿದ್ದಾರಂತೆ.
ಶ್ರೇಯಾಂಕಾ ಅಬ್ಬರಕ್ಕೆ ದಾಖಲೆ ಉಡೀಸ್!
ಆರ್‌ಸಿಬಿ ಬೌಲಿಂಗ್ ಹೇಗಿತ್ತು ಅಂದ್ರೆ ದೆಹಲಿ ತಂಡಕ್ಕೆ ಎಲ್ಲೂ ಗೆಲ್ಲುವ ಆಸೆ ಮೂಡಲೇ ಇಲ್ಲ ಬಿಡಿ. ಶ್ರೇಯಾಂಕಾ ಪಾಟೀಲ್ 3.3 ಓವರ್‌ಗಳಲ್ಲಿ 12 ರನ್ ನೀಡಿ 4 ವಿಕೆಟ್ ಕಬಳಿಸಿದರೆ ಸೋಫಿ ಮೊಲಿನೆಕ್ಸ್ 4 ಓವರ್‌ಗಳಲ್ಲಿ 20 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಆಶಾ ಸೋಬನಾ 3 ಓವರ್‌ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು. ಈ ಮೂಲಕ ದೆಹಲಿ ತಂಡವನ್ನು 113 ರನ್‌ಗೆ ಆಲೌಟ್ ಮಾಡಿತು ಆರ್‌ಸಿಬಿ ತಂಡ. ಈ ಗುರಿಯನ್ನು ಬೆನ್ನತ್ತಿದ್ದ ನಮ್ಮ ಆರ್‌ಸಿಬಿ (Royal Challengers Bengaluru) ತಂಡ ಸುಲಭವಾಗಿ ಗುರಿ ತಲುಪಿತ್ತು. ಹಾಗೇ ಭರ್ಜರಿ 8 ವಿಕೆಟ್ ಅಂತರದ ಗೆಲುವನ್ನ ಕಂಡು ಕೊನೆಗೂ ಕಪ್ ಮನೆಗೆ ತಂದಿದೆ.
ಜಗತ್ತಿಗೆ ಶ್ರೇಯಾಂಕಾ ಬಗ್ಗೆ ಹೆಮ್ಮೆ!
RCB.. RCB.. RCB.. ಹಿಂಗೆ ಕನ್ನಡಿಗರ ಕಣ ಕಣದಲ್ಲೂ ಆರ್‌ಸಿಬಿ ಅನ್ನೋ ಪದ ಈಗ ಬೆರೆತು ಹೋಗಿದೆ. 'ರಾಯಲ್ ಚಾಲೆಂಜರ್ಸ್ ಬೆಂಗಳೂರು' ತಂಡವನ್ನ ಕನ್ನಡಿಗರು ಪ್ರತಿ ಹಂತದಲ್ಲೂ ಪ್ರೀತಿ ಮಾಡುತ್ತಾರೆ. ಸೋಲು & ಗೆಲುವಿನ ಸಮಯದಲ್ಲಿ ಆರ್‌ಸಿಬಿ ಪರ ಕನ್ನಡಿಗರು ಗಟ್ಟಿಯಾಗಿ ನಿಂತಿದ್ದಾರೆ. ಹೀಗಿದ್ದಾಗ 'WPL' ಅಂದ್ರೆ ವುಮೆನ್ಸ್ ಪ್ರಿಮಿಯರ್ ಲೀಗ್ ಭರ್ಜರಿ ಹವಾ ಎಬ್ಬಿಸಿದೆ. ಮೊಟ್ಟ ಮೊದಲ ಬಾರಿಗೆ, ಆರ್‌ಸಿಬಿ ತಂಡಕ್ಕೆ ಕಪ್ ಗೆಲ್ಲಿಸಿ ಕೊಟ್ಟಿದ್ದಾರೆ ಮಹಿಳಾ ತಂಡದ ಆಟಗಾರ್ತಿಯರು. ಅದರಲ್ಲೂ ನಮ್ಮ ಕನ್ನಡಿತಿ ಶ್ರೇಯಾಂಕಾ ಹವಾ ಹೇಗಿದೆ ಅಂದ್ರೆ, ಈಗ ಇಡೀ ಜಗತ್ತೇ ಶ್ರೇಯಾಂಕಾ ಅವರ ಬೌಲಿಂಗ್ ಬಗ್ಗೆ ಕೊಂಡಾಡುತ್ತಿದೆ. ಹಾಗೇ, ಆರ್‌ಸಿಬಿಯ ಅಭಿಮಾನಿಗಳು ಶ್ರೇಯಾಂಕಾ ಪಾಟೀಲ್ ಅವರ ಆಟಕ್ಕೆ ಫಿದಾ ಆಗಿದ್ದಾರೆ.












Click it and Unblock the Notifications