RCB vs CSK: ತುಂಬಾ ಬೇಗ ಬಂದ್ರು; ಎಂಎಸ್ ಧೋನಿ ಬಗ್ಗೆ ಮಾಜಿ ಕ್ರಿಕೆಟಿಗರ ವ್ಯಂಗ್ಯ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಆರ್‌ಸಿಬಿ ಸಿಎಸ್‌ಕೆ ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ ಆರ್ ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ಎರಡನೇ ಗೆಲುವು ಸಾಧಿಸಿದೆ.

ಆರ್ ಸಿಬಿ ಗೆಲುವು ಸಾಧಿಸಿದ್ದು ಒಂದು ಕಡೆಯಾದರೆ, ಸಿಎಸ್‌ಕೆ ತವರಿನಲ್ಲಿ ಹೀನಾಯ ಸೋಲು ಕಂಡಿದ್ದು ಅಭಿಮಾನಿಗಳನ್ನು ಕೆರಳಿಸಿದೆ. ಮುಖ್ಯವಾಗಿ ತಂಡ ಸಂಕಷ್ಟದಲ್ಲಿದ್ದಾಗಲೂ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಎಂಎಸ್ ಧೋನಿ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Virender sehwag manoj tiwari mocks ms dhoni csk vs rcb ipl 2025

ಧೋನಿ ಬಗ್ಗೆ ಸೆಹ್ವಾಗ್, ತಿವಾರಿ ವ್ಯಂಗ್ಯ

ಎಂಎಸ್ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ಅಭಿಮಾನಿಗಳಿಗೆ ಮಾತ್ರವಲ್ಲ ಮಾಜಿ ಕ್ರಿಕೆಟಿಗರಿಗೂ ಅಚ್ಚರಿ ಉಂಟು ಮಾಡಿತ್ತು. ಸೋಲುವ ಹಂತದಲ್ಲಿದ್ದಾಗ ಬರದೆ ಸೋಲು ಖಚಿತವಾದ ಬಳಿಕ ಶಾಸ್ತ್ರಕ್ಕೆ ಕೊನೆಯಲ್ಲಿ ಬಂದು ಅಭಿಮಾನಿಗಳಿಗಾಗಿ ಬ್ಯಾಟಿಂಗ್‌ ಮಾಡಿದಂತಿತ್ತು. ತಂಡದ ಗೆಲುವಿಗಿಂತ ಬಂದಿರುವ ಪ್ರೇಕ್ಷಕರಿಗಾಗಿ ಆಡುವುದೇ ಮುಖ್ಯವಾಯಿತಾ ಎನ್ನುವ ಪ್ರಶ್ನೆ ಮೂಡಿದೆ.

ಎಂಎಸ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಮತ್ತು ಮನೋಜ್ ತಿವಾರಿ ಟೀಕಿಸಿದ್ದಾರೆ. ಎಂಎಸ್ ಧೋನಿ 30 ರನ್ ಗಳಿಸಿದರೂ ಆರ್ ಸಿಬಿ 50 ರನ್‌ಗಳಿಂದ ಗೆಲುವು ಸಾಧಿಸಿತು. ಕ್ರಿಕ್‌ಬಜ್‌ ಜೊತೆ ಮಾತನಾಡಿದ ಎಂಎಸ್ ಧೋನಿ, ಧೋನಿ ಸಾಮಾನ್ಯವಾಗಿ 19 ನೇ ಅಥವಾ 20 ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ, 16ನೇ ಓವರ್ ನಲ್ಲಿ ಅಲ್ಲ ಎಂದು ವ್ಯಂಗ್ಯವಾಡಿದರು.

ಎಂಎಸ್ ಧೋನಿ ಎಷ್ಟು ಎಸೆತಗಳನ್ನು ಆಡುತ್ತಾರೆ ಎಂದು ಮೊದಲೇ ನಿರ್ಧರಿಸಲಾಗಿದೆ. ಪರಿಸ್ಥಿತಿ ಏನೇ ಇದ್ದರೂ ಅವರು 19 ಅಥವಾ 20ನೇ ಓವರ್ ಬ್ಯಾಟಿಂಗ್‌ಗೆ ಬರುತ್ತಾರೆ. ಹಾಗೆ ನೋಡಿದರೆ ಈ ಪಂದ್ಯದಲ್ಲಿ ಬೇಗನೇ ಬಂದಿದ್ದಾರೆ 16ನೇ ಓವರ್ ನಲ್ಲೇ ಬ್ಯಾಟಿಂಗ್‌ಗೆ ಬಂದಿದ್ದಾರೆ. ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಕಳೆದುಕೊಂಡರು. ಧೋನಿ ಕೇವಲ ಕೆಲವೇ ಎಸೆತಗಳನ್ನು ಆಡುತ್ತಾರೆ ಎಂದು ತಂಡ ನಿರ್ಧರಿಸುತ್ತಿತ್ತು. ಇದು ಆಶ್ಚರ್ಯವೇನಿಲ್ಲ ಎಂದು ಸೆಹ್ವಾಗ್ ಹೇಳಿದರು.

30 ರನ್ ಗಳಿಸಿದ ಧೋನಿ, ಸುರೇಶ್ ರೈನಾ ಅವರನ್ನು ಹಿಂದೆ ಹಾಕಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಧೋನಿ ರನ್ ಗಳಿಸಿದರೂ ಸಿಎಸ್‌ಕೆ ಸೋಲನ್ನು ತಪ್ಪಿಸಲು ಆಗಲಿಲ್ಲ.

ಮನೋಜ್ ತಿವಾರಿ ಹೇಳಿದ್ದೇನು?

ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಕೂಡ ಧೋನಿ 9ನೇ ಕ್ರಮಾಂಕದಲ್ಲಿ ಬಂದಿದ್ದು ತಿಳುವಳಿಕೆಗೆ ಮೀರಿದ್ದು ಎಂದಿದ್ದಾರೆ. ಸಿಎಸ್‌ಕೆ ತಂಡದ ಕೋಚ್‌ಗೆ ಧೋನಿಗೆ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೇಳುವ ಧೈರ್ಯವಿಲ್ಲ ಎಂದಿದ್ದಾರೆ.

ಇದು ನನ್ನ ತಿಳುವಳಿಕೆಗೆ ಮೀರಿದ್ದು. 16 ಎಸೆತಗಳಲ್ಲಿ 30 ರನ್‌ಗಳು ಮತ್ತು 190 ರ ಸ್ಟ್ರೈಕ್ ರೇಟ್ ಹೊಂದಿರುವ ಅವರು ಪಂದ್ಯವನ್ನು ಉಳಿಸಲು ಬೇಗನೆ ಬರಬೇಕಿತ್ತು. ಆದರೆ ಅವರು ಡಗೌಟ್‌ನಲ್ಲಿ ಕೂತು ಯೋಚಿಸುತ್ತಿದ್ದರು. ಕೋಚಿಂಗ್ ಸಿಬ್ಬಂದಿಯಿಂದ ಯಾರೂ ಧೋನಿಗೆ ಕ್ರಮಾಂಕವನ್ನು ಬ್ಯಾಟಿಂಗ್ ಮಾಡಲು ಹೇಳಲು ಸಾಧ್ಯವಿಲ್ಲ. ಅದನ್ನು ಧೋನಿಯೇ ತೀರ್ಮಾನ ಮಾಡಬೇಕು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+