Virat Kohli: ಇಂದೋರ್‌ನಲ್ಲಿ ಅಬ್ಬರಿಸಿದ ಕೊಹ್ಲಿ: ಐಪಿಎಲ್, ವಿಶ್ವಕಪ್‌ಗೂ ಮುನ್ನ ಕೊಟ್ರು ಎಚ್ಚರಿಕೆ
14 ತಿಂಗಳ ಬಳಿಕ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನೇ ರವಾನಿಸಿದ್ದಾರೆ. ಇದು ಹಳೆ ವಿರಾಟ್ ಕೊಹ್ಲಿ ಅಲ್ಲ ಎನ್ನುವಂತೆ ಅವರು ಬ್ಯಾಟಿಂಗ್ ಮಾಡಿದ್ದು ವಿಶೇಷ.
ವಿರಾಟ್ ಕೊಹ್ಲಿ ಆಟವನ್ನು ನೋಡಿದವರಿಗೆ ಅಫ್ಘಾನಿಸ್ತಾನದ ವಿರುದ್ಧ ಅವರು ಆಡಿದ ಇನ್ನಿಂಗ್ಸ್ ಹೊಸದಾಗೆ ಕಾಣಿಸುತ್ತದೆ. ಸಾಮಾನ್ಯವಾಗಿ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಅಟ್ಯಾಕಿಂಗ್ ಬ್ಯಾಟಿಂಗ್ ಮಾಡುವ ಸಾಹಸಕ್ಕೆ ಕೈಹಾಕುವುದಿಲ್ಲ. ಕೆಟ್ಟ ಎಸೆತಗಳಿಗೆ ಮಾತ್ರ ಬೌಂಡರಿ ಗಳಿಸುವ ಅವರು, ಕೊನೆಯ ಓವರ್ ಗಳಲ್ಲಿ ಅಬ್ಬರಿಸುತ್ತಾರೆ.

ಆದರೆ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಈ ಮೂಲಕ ತಾವು ಟಿ20 ಬ್ಯಾಟಿಂಗ್ ಹೊಸ ಬ್ರಾಂಡ್‌ಗೆ ಹೊಂದಿಕೊಳ್ಳುವ ಸಂದೇಶ ನೀಡಿದ್ದಾರೆ.
ಟಿ20 ಮಾದರಿಯಲ್ಲಿ ಕೊಹ್ಲಿ ಅತ್ಯುತ್ತಮ ಆಟಗಾರ, ಆದರೆ ಅವರು ಆರಂಭದ ಕೆಲವು ಎಸೆತಗಳಲ್ಲಿ ಎಚ್ಚರಿಕೆಯಿಂದ ಆಡುತ್ತಾರೆ. ಆದರೂ ರನ್‌ಗಳನ್ನು ಓಡುವ ಮೂಲಕ ಅವರು ಸ್ಕೋರ್ ಬೋರ್ಡ್ ಅನ್ನು ಚಲಿಸುವಂತೆ ನೋಡಿಕೊಳ್ಳುತ್ತಾರೆ, ನಂತರ ಬೌಂಡರಿ ಮೂಲಕ ಇನ್ನಿಂಗ್ಸ್‌ಗೆ ವೇಗವನ್ನು ನೀಡುತ್ತಾರೆ.
ಕಾಯುವ ಮಾತೇ ಇಲ್ಲ!
ಅಡಿಲೇಡ್‌ನಲ್ಲಿ ನಡೆದ 2022 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಸೆಮಿಫೈನಲ್ ಸೋಲಿನ ನಂತರ ವಿರಾಟ್ ಕೊಹ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದರು. ಆದರೆ ಅವರು ಕಾಯುವ ಆಟವನ್ನು ಆಡಲು ಪ್ರಯತ್ನ ಮಾಡಲಿಲ್ಲ.
ರೋಹಿತ್ ಶರ್ಮಾ ಮೊದಲ ಎಸೆತದಲ್ಲೇ ಬೌಲ್ಡ್ ಆದ ನಂತರ ಕ್ರೀಸ್‌ಗೆ ಬಂದ ಕೊಹ್ಲಿ, ನಿರ್ಭಯವಾಗಿ ಬ್ಯಾಟ್ ಬೀಸಿದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ ಒಂದು ಕಡೆಯಿಂದ ಬೌಂಡರಿ ಗಳಿಸಿದರೆ ಮತ್ತೊಂದು ತುದಿಯಲ್ಲಿ ಕೊಹ್ಲಿ ಕೂಡ ಅಬ್ಬರಿಸಿದರು.
ಎಡಗೈ ಆಟಗಾರ ಫಜಲ್ಹಕ್ ಫಾರೂಕಿಯಿಂದ ಕೊಹ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಗಳಿಸಿದರು. ಮಿಸ್ಟರಿ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಓವರ್ ನಲ್ಲಿ ಕೂಡ ಬೌಂಡರಿಗಳನ್ನು ಹೊಡೆದು ಎದುರಾಳಿಗಳಿಗೆ ಸ್ಪಷ್ಟ ಸಂದೇಶ ಕೊಟ್ಟರು.
ಆರ್ ಸಿಬಿ ಅಭಿಮಾನಿಗಳಿಗೆ ಖುಷಿ
ಭಾನುವಾರ ವಿರಾಟ್ ಕೊಹ್ಲಿ ಇನ್ನಿಂಗ್ಸ್ ನೋಡಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಕೊಹ್ಲಿ ನಾಯಕ ಫಾಫ್ ಡುಪ್ಲೆಸಿಸ್ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹೊಸ ವರ್ಷನ್ ಕೊಹ್ಲಿ ಆರಂಭದಿಂದಲೇ ಅಬ್ಬರಿಸಿದರೆ ಆರ್ ಸಿಬಿ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಲಿದೆ.
ಜೊತೆಗೆ ಜೂನ್ 1ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಕೊಹ್ಲಿ ಅವಕಾಶ ಕೊಡುವ ಅಭಿಮಾನಿಗಳ ಒತ್ತಾಯಕ್ಕೆ ಅವರ ಬ್ಯಾಟಿಂಗ್ ಪ್ರದರ್ಶನ ಹೆಚ್ಚು ಬಲ ತುಂಬಿದೆ.












Click it and Unblock the Notifications