ವಿರಾಟ್ ಕೊಹ್ಲಿ ಮ್ಯಾಜಿಕ್! ಹೀಗೆ ಮಾಡಿದ ಮುಂದಿನ ಓವರ್ನಲ್ಲೇ ಬಿತ್ತು ವಿಕೆಟ್
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ್ದ ಮ್ಯಾಜಿಕ್ ನೆನಪಿದ್ಯಾ! ಚೆಂಡು ಹಿಡಿದು ಮಂತ್ರ ಹೇಳಿದ್ದ ಪಾಂಡ್ಯ ಮುಂದಿನ ಎಸೆತದಲ್ಲೇ ವಿಕೆಟ್ ಪಡೆದುಕೊಂಡಿದ್ದರು. ಈಗ ಅಂತಹದ್ದೇ ಮ್ಯಾಜಿಕ್ ಅನ್ನು ಕೊಹ್ಲಿ ಮಾಡಿದ್ದಾರೆ.
ಸೆಂಚುರಿಯನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಎರಡನೇ ದಿನದಂದು ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ಮಾಡಿತು. ವಿಕೆಟ್ ಪಡೆಯಲು ಭಾರತದ ಬೌಲರ್ ಗಳು ಕಷ್ಟಪಟ್ಟರು. ಮೊಹಮ್ಮದ್ ಸಿರಾಜ್ ಅವರು ಐಡೆನ್ ಮಾರ್ಕ್ರಾಮ್ ಅವರನ್ನು ಆರಂಭಿಕ ಹಂತದಲ್ಲಿ ಔಟ್ ಮಾಡಿದ ನಂತರ, ಡೆನಾ ಎಲ್ಗರ್ ಮತ್ತು ಟೋನಿ ಡಿ ಝೋರ್ಝಿ ಉತ್ತಮ ಜೊತೆಯಾಟ ಆಡಿದರು.

11 ರನ್‌ಗೆ ಮೊದಲ ವಿಕೆಟ್ ಬಿದ್ದ ಬಳಿಕ, 104 ರನ್‌ಗಳ ಜೊತೆಯಾಟ ಆಡಿದರು. ಈ ಸಂದರ್ಭದಲ್ಲಿ ವಿಕೆಟ್ ಹುಡುಕಾಟದಲ್ಲಿದ್ದ ಭಾರತಕ್ಕೆ ವಿರಾಟ್ ಕೊಹ್ಲಿ ಮ್ಯಾಜಿಕ್ ಕೆಲಸ ಮಾಡಿತು. ಜಸ್ಪ್ರೀತ್ ಬುಮ್ರಾ ಡಿ ಜೊರ್ಜಿ ಮತ್ತು ಕೀಗನ್ ಪೀಟರ್ಸನ್ ಅವರ ವಿಕೆಟ್‌ಗಳನ್ನು ತ್ವರಿತವಾಗಿ ಪಡೆದು ಮಿಂಚಿದರು.
ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?
ಇಬ್ಬರು ಬ್ಯಾಟರ್‌ಗಳು ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವಾಗ ಔಟಾಗದಿದ್ದರೆ ಏನು ಮಾಡುವುದು? ಸ್ಟಂಪ್‌ಗಳವರೆಗೆ ನಡೆದು ಬೈಲ್‌ಗಳನ್ನು ಬದಲಾಯಿಸಿದರೆ. ತಮಾಷೆಯಲ್ಲ ಕೊಹ್ಲಿ ಇದೇ ರೀತಿ ಮಾಡಿದ್ದು ಮ್ಯಾಜಿಕ್ ಕೆಲಸ ಮಾಡಿದೆ. ವಿರಾಟ್ ಕೊಹ್ಲಿ ಇತ್ತೀಚಿನ ಮತ್ತು ಬಹುಶಃ ಇದನ್ನು ಪ್ರಯತ್ನಿಸಿದ ಮೊದಲ ಭಾರತೀಯ ಕ್ರಿಕೆಟಿಗ. ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ 2 ನೇ ದಿನದಂದು ಕೊಹ್ಲಿ ಬೇಲ್‌ಗಳನ್ನು ತಿರುಗಿಸಿದರು ಮತ್ತು ಒಂದೆರಡು ನಿಮಿಷಗಳ ನಂತರ ಭಾರತಕ್ಕೆ ವಿಕೆಟ್ ಸಿಕ್ಕಿತು.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿ ಓವರ್‌ಗಳ ನಡುವೆ ಬೇಲ್‌ಗಳನ್ನು ಬದಲಾಯಿಸುತ್ತಿರುವುದನ್ನು ನೋಡಬಹುದಾಗಿದೆ ಅವರು ಹಾಗೆ ಮಾಡಿದ ಕೆಲವು ಎಸೆತಗಳ ನಂತರ, ಡಿ ಜೊರ್ಜಿ ಬುಮ್ರಾ ಬೌಲಿಂಗ್‌ನಲ್ಲಿ ಔಟಾದರು.
28ನೇ ಓವರ್ ನ ಕೊನೆಯ ಎಸೆತದಲ್ಲಿ ಎಲ್ಗರ್ ಸಿರಾಜ್ ಮತ್ತೊಂದು ಬೌಂಡರಿ ಬಾರಿಸಿದರು. ಆ ಕ್ಷಣದಲ್ಲಿಯೇ ಕೊಹ್ಲಿ ಮ್ಯಾಜಿಕ್ ಮಾಡಲು ನಿರ್ಧರಿಸಿದರು. ಅವರು ಸ್ಟಂಪ್‌ಗೆ ನಡೆದರು ಮತ್ತು ಓವರ್‌ಗಳ ನಡುವೆ ಬೈಲ್‌ಗಳನ್ನು ತಿರುಗಿಸಿದರು.
ಮುಂದಿನ ಓವರ್ ಅನ್ನು ಬೌಲ್ ಮಾಡಲು ಬುಮ್ರಾ ಬಂದರು ಮತ್ತು ಮೂರನೇ ಎಸೆತದಲ್ಲಿ ಡಿ ಜೊರ್ಜಿ ಬೌಂಡರಿ ಹೊಡೆದರೂ, ಆ ಓವರ್‌ನ ಕೊನೆಯ ಎಸೆತದಲ್ಲಿ ಅವರು ಔಟಾದರು. ಪಂದ್ಯದ ಅತ್ಯಧಿಕ ಜೊತೆಯಾಟ ಮುರಿಯಿತು. ವಿಕೆಟ್ ಪಡೆದುಕೊಂಡಿದ್ದಕ್ಕೆ ಬುಮ್ರಾ ಅವರಷ್ಟೇ ಶ್ರೇಯಸ್ಸು ಕೊಹ್ಲಿಗೂ ಸಲ್ಲುತ್ತದೆ.
ಟೆಸ್ಟ್ ಪಂದ್ಯಗಳಲ್ಲಿ ಬೇಲ್ ಬದಲಾಯಿಸಿದ್ದು ವಿಕೆಟ್ ಪಡೆಯಲು ಕಾರಣವಾಗುತ್ತಿರುವುದು ಇದೇ ಮೊದಲಲ್ಲ. ಇದನ್ನು ಆಸ್ಟ್ರೇಲಿಯಾ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಜನಪ್ರಿಯಗೊಳಿಸಿದ್ದಾರೆ. 2019 ರ ಆಶಸ್ ಸಮಯದಲ್ಲಿ, ಲಿಯಾನ್ ಬೇಲ್ಸ್ ಬದಲಾಯಿಸಿದ ಬಳಿಕ ಇಂಗ್ಲೆಂಡ್ ಬ್ಯಾಟರ್‌ಗಳಾದ ಜೋ ರೂಟ್ ಮತ್ತು ರೋರಿ ಬರ್ನ್ಸ್ ಅವರು ತ್ವರಿತವಾಗಿ ಔಟಾಗಿದ್ದರು.
ಈ ವರ್ಷದ ಆರಂಭದಲ್ಲಿ, ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಆಶಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬೇಲ್‌ಗಳನ್ನು ತಿರುಗಿಸಿದರು ಮತ್ತು ನಂತರದ ಎಸೆತದಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಮಾರ್ನಸ್ ಲ್ಯಾನ್‌ಬುಸ್‌ಚಾಗ್ನೆ ಔಟಾಗಿದ್ದರು.












Click it and Unblock the Notifications