ವಿರಾಟ್ ಕೊಹ್ಲಿ ವಿದಾಯ.. ಕ್ರಿಕೆಟ್ ಅಭಿಮಾನಿಗಳ ಕಣ್ಣೀರು...
ಕಿಂಗ್ ವಿರಾಟ್ ಕೊಹ್ಲಿ ನಿನ್ನೆ ತಮ್ಮ ಕ್ರಿಕೆಟ್ ಜೀವನದಲ್ಲೇ ಅತ್ಯಂತ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ. ವಿರಾಟ್ ಕೊಹ್ಲಿ ಅಂದ್ರೆ ಕ್ರಿಕೆಟ್, ಕ್ರಿಕೆಟ್ ಆಟಕ್ಕೆ ವಿರಾಟ್ ಕೊಹ್ಲಿಯೇ ಭೂಷಣ ಎನ್ನುವಷ್ಟು ಹವಾ ಎಬ್ಬಿಸಿದ್ದ ಈ ಆಟಗಾರ ಈಗ ನಿವೃತ್ತಿ ಘೋಷಣೆ ಮಾಡಿ ಅಭಿಮಾನಿಗಳ ಎದೆಯಲ್ಲಿ ಕಾಡ್ಗಿಚ್ಚು ಹೊತ್ತಿಸಿದ್ದಾರೆ. ಹಾಗಾದ್ರೆ ವಿರಾಟ್ ಕೊಹ್ಲಿ ಇನ್ನು ಮುಂದೆ ಯಾವ ಯಾವ ಮಾದರಿ ಕ್ರಿಕೆಟ್ ಆಡಲ್ಲ? ಯಾಕೆ ಆಡಲ್ಲ? ಬನ್ನಿ ತಿಳಿಯೋಣ.
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಮಾಡದೇ ಇರುವ ಸಾಧನೆಗಳೇ ಇಲ್ಲ. ಯಾಕಂದ್ರೆ ಈ ಆಟಗಾರನ ಶಿಸ್ತು, ಶ್ರದ್ಧೆ, ಸ್ಥಿರತೆ ಕಂಡು ಇಡೀ ಕ್ರಿಕೆಟ್ ಲೋಕವೇ ಒಮ್ಮೆ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತದೆ. ಕ್ರಿಕೆಟ್ ಲೋಕದ ದೇವರು ಅಂತಾ ಕರೆಸಿಕೊಂಡಿದ್ದ ಸಚಿನ್ ತೆಂಡೂಲ್ಕರ್ ಕೂಡ ವಿರಾಟ್ ಕೊಹ್ಲಿ ಆಟಕ್ಕೆ ಅಭಿಮಾನಿ ಆಗಿಬಿಟ್ಟರು. ಹೀಗೆ ಜಗತ್ತಿನ ದೊಡ್ಡ ದೊಡ್ಡ ಆಟಗಾರರನ್ನೇ ವಿರಾಟ್ ಕೊಹ್ಲಿ ಫಿದಾ ಮಾಡಿರುವಾಗ, ಫ್ಯಾನ್ಸ್ ಮರುಳಾಗದೇ ಇರುತ್ತಾರೆಯೇ? ಹೌದು ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರುವ, ಹೃದಯವಂತ ಕೊಹ್ಲಿ ಇನ್ನುಮುಂದೆ ಕ್ರಿಕೆಟ್ ಆಡುವುದಿಲ್ಲ, ಅದು ಈ ಮಾದರಿಯಲ್ಲಿ.

ವಿರಾಟ್ ಕೊಹ್ಲಿ ವಿದಾಯ ಏಕೆ?
ನಿಮಗೆಲ್ಲಾ ಗೊತ್ತಿರುವ ರೀತಿ ವಿರಾಟ್ ಕೊಹ್ಲಿ ಈಗಾಗಲೇ ಕ್ರಿಕೆಟ್ ಲೋಕದಲ್ಲಿ ದೊಡ್ಡ ದೊಡ್ಡ ದಾಖಲೆ ಮುರಿದು ಬಿಸಾಡಿದ್ದಾರೆ. ಅದರಲ್ಲೂ ಏಕದಿನ, ಟೆಸ್ಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ದೊಡ್ಡ ದೊಡ್ಡವರ ದಾಖಲೆ ಪುಡಿ ಪುಡಿ ಮಾಡಿದ್ದಾರೆ. ಇನ್ನುಳಿದಂತೆ ಟಿ20 ಕ್ರಿಕೆಟ್ ಅಖಾಡದಲ್ಲಿ ಕೂಡ ವಿರಾಟ್ ಕೊಹ್ಲಿ ಕಡಿಮೆ ಸಾಧನೆ ಮಾಡಿಲ್ಲ. ಹೀಗೆ ಎಲ್ಲಾ ಮಾದರಿಯಲ್ಲೂ ಆರ್ಭಟಿಸಿದ ನಮ್ಮ ಕೊಹ್ಲಿಗೆ ಈಗ ಯಾಕೋ ಟಿ20 ಮಾದರಿ ಕ್ರಿಕೆಟ್ ಬೇಡ ಅನಿಸುತ್ತಿದೆ. ಈ ನಿರ್ಧಾರದಲ್ಲೂ ಯುವ ಕ್ರಿಕೆಟ್ ಆಟಗಾರರಿಗೆ ದಾರಿಯನ್ನು ಮಾಡಿಕೊಡುವ ಉದ್ದೇಶ ಹೊಂದಿದ್ದಾರೆ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ.
ವಿರಾಟ್ ಕೊಹ್ಲಿ ಹೀಗೆ ಟಿ20 ಕ್ರಿಕೆಟ್ ಬಿಟ್ಟು ಹೊರಡಲು ನಿರ್ಧಾರ ಮಾಡಿರುವುದೆಲ್ಲಾ ಯುವ ಕ್ರಿಕೆಟ್ ಆಟಗಾರರಿಗೆ ಅಂತಾ. ಭಾರತ ತಂಡದಲ್ಲಿ ಬರೀ ಹಿರಿಯ ಆಟಗಾರರಿಗೆ ಅವಕಾಶ ನೀಡಿದರೆ ಹೊಸ ಪ್ರತಿಭೆಗಳು ಎಲ್ಲಿ ಹೋಗಬೇಕು? ಇದು ವಿರಾಟ್ ಕೊಹ್ಲಿಯ ಪ್ರಶ್ನೆ. ಹೀಗಾಗಿ 35 ವಯಸ್ಸು ದಾಟಿರುವ ವಿರಾಟ್ ಕೊಹ್ಲಿ ಇನ್ನುಮುಂದೆ ಏಕದಿನ & ಟೆಸ್ಟ್ ಮಾದರಿ ಕ್ರಿಕೆಟ್ ಆಟದಲ್ಲಿ ಮಾತ್ರ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಈ ಆಟಗಾರ ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ಆಟ ಮುಂದುವರಿಸುವರು.
ಕೊಹ್ಲಿ ದಾಖಲೆ ಮುಟ್ಟಲು ಆಗಲ್ಲ!
ವಿರಾಟ್ ಕೊಹ್ಲಿ ಟಿ20 ಮಾದರಿ ಕ್ರಿಕೆಟ್‌ಗೆ ಈಗ ನಿವೃತ್ತಿ ಘೋಷಣೆ ಮಾಡಿ, ವಿದಾಯ ಹೇಳಿದ್ದರೂ ಅವರ ದಾಖಲೆ ಮುಟ್ಟಲು ಇನ್ನೂ 20 ವರ್ಷವೇ ಬೇಕು ಬಿಡಿ. ಯಾಕಂದ್ರೆ ಅಷ್ಟು ದೊಡ್ಡ ದಾಖಲೆ ನಿರ್ಮಿಸಿದ್ದಾರೆ ನಮ್ಮ ಕೊಹ್ಲಿ. ಹೀಗಾಗಿ ವಿರಾಟ್ ಕೊಹ್ಲಿಗೆ & ಅವರ ದಾಖಲೆಗಳಿಗೆ ಅವರೇ ಸರಿಸಮ ಎನ್ನಬಹುದು. ಈ ಮೂಲಕ ಕ್ರಿಕೆಟ್ ಇತಿಹಾಸ ಒಂದು ಯುಗಾಂತ್ಯ ಕಂಡಿದೆ ಎಂಬುದು ಕ್ರಿಕೆಟ್ ತಜ್ಞರ ಮಾತಾಗಿದೆ.












Click it and Unblock the Notifications