RCB: ಆರ್‌ಸಿಬಿ ತಂಡಕ್ಕೆ ಇವರೇ ನಾಯಕರಾಗೋದು ಬಹುತೇಕ ಫಿಕ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ನಾಯಕ ಎನ್ನುವ ಪ್ರಶ್ನೆ ಕಾಡುತ್ತಿದೆ. 2025ರ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟಿರುವ ಆರ್ ಸಿಬಿ ಇದೀಗ ನಾಯಕನ ಆಯ್ಕೆ ಮಾಡುವ ಯೋಚನೆಯಲ್ಲಿದೆ. ಕಳೆದ ನಾಲ್ಕು ಆವೃತ್ತಿಗಳಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಪ್ ಡುಪ್ಲೆಸಿಸ್‌ರನ್ನು ಕೈಬಿಡಲಾಗಿದ್ದು ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ.
ಆರ್ ಸಿಬಿ ತಂಡದಲ್ಲಿ ಹಲವು ಆಟಗಾರರು ನಾಯಕರಾಗುವ ಅರ್ಹತೆ ಹೊಂದಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ತಂಡವನ್ನು ಮುನ್ನಡೆಸಿದ್ದಾರೆ. ಈ ಬಾರಿಯೂ ಅವರೇ ನಾಯಕರಾಗುತ್ತಾರೆ ಎನ್ನುವ ವದಂತಿಗಳಿದೆ. ಆದರೆ ಫ್ರಾಂಚೈಸಿ ಮಾತ್ರ ಇನ್ನೂ ನಾಯಕ ಯಾರು ಎನ್ನುವ ಬಗ್ಗೆ ನಿರ್ಧಾರವಾಗಿಲ್ಲ ಎನ್ನುತ್ತಿದೆ.

ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ, ರಜತ್ ಪಟಿದಾರ್ ಈಗಾಗಲೇ ದೇಶೀಯ ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸಿಕೊಂಡಿದ್ದಾರೆ. ಮೂವರಿಗೂ ನಾಯಕತ್ವದ ಅನುಭವ ಇರುವ ಕಾರಣ ಇವರನ್ನೂ ನಾಯಕರ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಇದೆ.
ಭವಿಷ್ಯದ ದೃಷ್ಟಿಯಿಂದ ಇನ್ನೂ ನಾಲ್ಕು ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸುವ ನಾಯಕನಿಗೆ ಹುಡುಕಾಟ ನಡೆಸಿರಬಹುದು. ಆದರೆ ಮೂಲಗಳ ಪ್ರಕಾರ ಈ ಬಾರಿ ವಿರಾಟ್ ಕೊಹ್ಲಿಯೇ ಮತ್ತೆ ನಾಯಕರಾಗಿ ಬರುವ ಸಾಧ್ಯತೆ ಹೆಚ್ಚಾಗಿದೆ.
ವಿರಾಟ್ ಕೊಹ್ಲಿಗೆ ನಾಯಕತ್ವ ಫಿಕ್ಸ್?
2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಮೂರು ಮಾದರಿಯಲ್ಲಿ ಆಡಬೇಕಾದ ಒತ್ತಡ ಕಡಿಮೆಯಾಗಿದೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರೆಯಲಿದ್ದು, ಅವರು ಆರ್ ಸಿಬಿ ನಾಯಕತ್ವ ವಹಿಸಿಕೊಳ್ಳಲು ಒಪ್ಪಿಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡಿದೆ. ಕೊಹ್ಲಿ ಆರ್ ಸಿಬಿ ಪ್ರಮುಖ ಆಕರ್ಷಣೆ ಕೂಡ ಹೌದು, ಅವರನ್ನು ಹೊರತುಪಡಿಸಿ ಉಳಿದ ಯಾರೇ ನಾಯಕತ್ವ ವಹಿಸಿಕೊಂಡರೂ, ಕೊಹ್ಲಿ ಬೆಂಬಲ ಸಹಕಾರ ಮುಖ್ಯವಾಗುತ್ತದೆ.
ಗಾಯದ ಸಮಸ್ಯೆ
ಐಪಿಎಲ್ ಆರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇರುವಾಗ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿದೆ. ಪ್ರಮುಖ ಆಲ್‌ರೌಂಡರ್ ಜೇಕಬ್ ಬೆಥೆಲ್ ಈ ಬಾರಿ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಕೂಡ ಗಾಯಗೊಂಡಿದ್ದು ಅವರು ಯಾವಾಗ ಫಿಟ್ ಆಗುತ್ತಾರೆ ಎನ್ನುವುದು ಕೂಡ ತಿಳಿದಿಲ್ಲ. ಆರ್ ಸಿಬಿ ಈ ಇಬ್ಬರು ಆಟಗಾರರಿಗೆ ಬದಲೀ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.












Click it and Unblock the Notifications