Virat Kohli: ನಾನು ಅವರಷ್ಟು ಉತ್ತಮ ಆಟಗಾರನಲ್ಲ: ಸಚಿನ್ ಬಗ್ಗೆ ವಿರಾಟ್ ಕೊಹ್ಲಿ ಏನಂದ್ರು?
ಕ್ರಿಕೆಟ್ ದೇವರು ಎನಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಏಕದಿನ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅಮೋಘ ಶತಕ ಗಳಿಸಿದ ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬದ ದಿನವೇ ಸಚಿನ್ ದಾಖಲೆ ಸರಿಗಟ್ಟಿದರು.
ವಿರಾಟ್ ಕೊಹ್ಲಿ ಅವರ ಸಾಧನೆ ಬಗ್ಗೆ ಅಭಿನಂದನೆ ತಿಳಿಸಿದ ಸಚಿನ್ ಬೇಗನೇ 50ನೇ ಶತಕ ಗಳಿಸುವ ಮೂಲಕ ತಮ್ಮ ದಾಖಲೆ ಮುರಿಯುವಂತೆ ಹಾರೈಸಿದ್ದಾರೆ. ಸಚಿನ್ ಅವರು ಅಭಿನಂದಿಸಿರುವ ಬಗ್ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿ, ಸಚಿನ್ ಅಭಿನಂದನೆ ಸಲ್ಲಿಸಿದ್ದರಿಂದ ಕೊಹ್ಲಿ ಸಹಜವಾಗಿಯೇ ಖುಷಿಯಾಗಿದ್ದಾರೆ. ತಮ್ಮ ಆರಾಧ್ಯ ದೈವದಿಂದ ಸಂದೇಶವನ್ನು ಸ್ವೀಕರಿಸಲು ನನಗೆ ದೊಡ್ಡ ಗೌರವವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಅವರಷ್ಟು ಉತ್ತಮವಲ್ಲ ಎಂದ ಕೊಹ್ಲಿ
ತಮ್ಮ 35 ನೇ ಹುಟ್ಟುಹಬ್ಬದಂದು ವಿರಾಟ್ ಕೊಹ್ಲಿ ತಮ್ಮ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಅವರ ಶತಕಗಳ ಸಾಧನೆಯನ್ನು ಸರಿಗಟ್ಟಿದರು. ಆದರೂ ಎಂದಿಗೂ ತಾನು ಸಚಿನ್ ಅವರಷ್ಟು ಉತ್ತಮ ಆಟಗಾರನಲ್ಲ ಎಂದು ಹೇಳಿಕೊಂಡರು.
"ತೆಂಡೂಲ್ಕರ್ ಅವರ ಸಂದೇಶವು ತುಂಬಾ ವಿಶೇಷವಾಗಿದೆ. ಸದ್ಯಕ್ಕೆ ತೆಗೆದುಕೊಳ್ಳಲು ಇದು ತುಂಬಾ ಹೆಚ್ಚು. ನನ್ನ ಆರಾಧ್ಯ ದೈವದ ದಾಖಲೆ ಸರಿಗಟ್ಟಿದ್ದು ದೊಡ್ಡ ಗೌರವ. ನಾನು ಅವರಷ್ಟು ಉತ್ತಮ ಆಟಗಾರನಲ್ಲ. ಅವರು ಬ್ಯಾಟ್‌ನೊಂದಿಗೆ ಪರಿಪೂರ್ಣರಾಗಿದ್ದಾರೆ. ಅದೊಂದು ಭಾವನಾತ್ಮಕ ಕ್ಷಣ. ನಾನು ಬಂದ ದಿನಗಳು ನನಗೆ ಗೊತ್ತು, ನಾನು ಅವರ ಆಟವನ್ನು ಟಿವಿಯಲ್ಲಿ ನೋಡಿದ ದಿನಗಳು ನನಗೆ ಗೊತ್ತು. ಅವರಿಂದ ಮೆಚ್ಚುಗೆ ಪಡೆಯುವುದು ನನಗೆ ತುಂಬಾ ಖುಷಿಯಾಗಿದೆ" ಎಂದು ಪಂದ್ಯದ ನಂತರ ಕೊಹ್ಲಿ ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕೊಹ್ಲಿ ತಮ್ಮ ದಾಖಲೆಯ ಮೈಲಿಗಲ್ಲನ್ನು ಸರಿಗಟ್ಟಿದಾಗ ಸಚಿನ್ ತೆಂಡೂಲ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ "ವಿರಾಟ್ ಚೆನ್ನಾಗಿ ಆಡಿದ್ದಾರೆ. ಈ ವರ್ಷದ ಆರಂಭದಲ್ಲಿ 49 ರಿಂದ 50 ಕ್ಕೆ ಹೋಗಲು ನನಗೆ 365 ದಿನಗಳು ಬೇಕಾಯಿತು. ನೀವು 49 ರಿಂದ 50 ಕ್ಕೆ ಹೋಗಿ ಮುಂದಿನ ಕೆಲವು ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ. ಅಭಿನಂದನೆಗಳು!!" ಎಂದು ಹೇಳಿದ್ದಾರೆ.












Click it and Unblock the Notifications