ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ... Virat Kohli
ಭಾರತ ಕ್ರಿಕೆಟ್ ತಂಡವು ಇಂದು ನ್ಯೂಜಿಲೆಂಡ್ ತಂಡದ ವಿರುದ್ಧ 'ಚಾಂಪಿಯನ್ಸ್ ಟ್ರೋಫಿ 2025' ಫೈನಲ್ ಪಂದ್ಯವನ್ನು ಆಡುತ್ತಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡ ಅದ್ಧೂರಿಯಾಗಿ ಚಾಂಪಿಯನ್ಸ್ ಟ್ರೋಫಿ-2025 ಕಪ್ ಗೆದ್ದು ಸಂಭ್ರಮಿಸಲು ಸಜ್ಜಾಗಿದೆ. ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, 150 ಕೋಟಿಗೂ ಹೆಚ್ಚು ಅಭಿಮಾನಿಗಳು ಫೈನಲ್ ಪಂದ್ಯ ನೋಡಲು ಕಾಯುತ್ತಿದ್ದಾರೆ. ಹೀಗಿದ್ದಾಗಲೇ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಘಾತವೇ ಎದುರಾಗಿ, ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ...
2002 ಮತ್ತು 2013ರ 'ಚಾಂಪಿಯನ್ಸ್ ಟ್ರೋಫಿ' ಕಪ್ ಗೆದ್ದು ಬೀಗಿರುವ ಭಾರತ ತಂಡಕ್ಕೆ ಈಗ 3ನೇ ಬಾರಿಗೆ ಚಾಂಪಿಯನ್ಸ್ ಆಗುವ ಅವಕಾಶ ಬಂದೊದಗಿದೆ. ಇದೇ ಕಾರಣಕ್ಕೆ ಕೋಟಿ, ಕೋಟಿ ಅಭಿಮಾನಿಗಳು ಉಸಿರು ಬಿಗಿಹಿಡಿದು ಇದೀಗ ಮ್ಯಾಚ್ ನೋಡಲು ಕಾಯುತ್ತಿದ್ದಾರೆ. ಈಗಾಗಲೇ ಚಾಂಪಿಯನ್ಸ್ ಟ್ರೋಫಿ 2025 ಫೈನಲ್ ಮ್ಯಾಚ್ ನಡೆಯುವ ದುಬೈನ ಕ್ರೀಡಾಂಗಣದ ಎಲ್ಲಾ ಸೀಟ್‌ಗಳು ತುಂಬಿ ತುಳುಕುತ್ತಿದ್ದು, ಟಿಕೆಟ್ ಎಲ್ಲಾ ಸೋಲ್ಡ್ ಔಟ್ ಆಗಿವೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ...

ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ....
ಭಾರತ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಲು ಇನ್ನು ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಅದರಲ್ಲೂ ಭಾರತ ತಂಡ ಅದ್ಧೂರಿಯಾಗಿ 'ಚಾಂಪಿಯನ್ಸ್ ಟ್ರೋಫಿ' ಎತ್ತಿ ಹಿಡಿಯುವುದನ್ನು ನೋಡಲು ಶತಕೋಟಿ ಭಾರತೀಯರು ಕಾಯುತ್ತಿದ್ದಾರೆ. ಇಂತಹ ಅದ್ಭುತ ಸಮಯದಲ್ಲೇ ಭಾರತೀಯ ಕ್ರಿಕೆಟ್ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಕಾಡುತ್ತಿದ್ದು, ಈ ಸುದ್ದಿ ಕೇಳಿ ವಿರಾಟ್ ಕೊಹ್ಲಿ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ. ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ...
ವಿರಾಟ್ ಕೊಹ್ಲಿ ಕೊನೆಯ ಮ್ಯಾಚ್ ಅಂತಾ...
ಹೌದು, ಬಿಸಿಸಿಐ ಈಗಾಗಲೇ ರೋಹಿತ್ ಶರ್ಮಾ ಮೇಲೆ ಒತ್ತಡ ಹಾಕುತ್ತಿದ್ದು ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯ ಮುಗಿದ ತಕ್ಷಣ ನಿವೃತ್ತಿ ಘೋಷಣೆ ಮಾಡಲು ಒತ್ತಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಇಂತಹ ಸಮಯದಲ್ಲೇ ರೋಹಿತ್ ಶರ್ಮಾ ಕೂಡ ಎಲ್ಲಾ ಮಾದರಿಯ ಕ್ರಿಕೆಟ್ ಅಖಾಡದಿಂದ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಇದೆಲ್ಲವನ್ನೂ ಮೀರಿ, ವಿರಾಟ್ ಕೊಹ್ಲಿ ಕೂಡ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿ ಇದೀಗ ಹಲ್‌ಚಲ್ ಎಬ್ಬಿಸಿದೆ.
ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಅಂತಾ ಸೋಷಿಯಲ್ ಮೀಡಿಯಾದ ತುಂಬಾ ಇದೀಗ ದೊಡ್ಡ ಚರ್ಚೆ ನಡೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ಸ್ ಗೆದ್ದು, ಕಪ್ ಎತ್ತಿಹಿಡಿದ ತಕ್ಷಣವೇ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ಅಭಿಮಾನಿಗಳ ಎದೆಯಲ್ಲಿ ನಡುಕ ತರಿಸಿದೆ. ಹೀಗಾಗಿ, ಎಲ್ಲರ ಚಿತ್ತ ಇದೀಗ ದುಬೈನ ಕ್ರಿಕೆಟ್ ಮೈದಾನದ ಮೇಲೆ ನೆಟ್ಟಿದೆ.












Click it and Unblock the Notifications