ವೃದ್ಧಾಶ್ರಮ ಸೇರಿದ ಸಚಿನ್ ಆಪ್ತ ಗೆಳೆಯ, ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ, ವೈರಲ್ ಆಯ್ತು ವಿಡಿಯೋ

Vinod Kambli: ಸಾಮಾನ್ಯವಾಗಿ ಕ್ರಿಕೆಟ್‌ ವಯಲದಲ್ಲಿ ಗುರುತಿಸಿಕೊಂಡ ಬಹುತೇಕರು ಆರಂಭದಲ್ಲಿ ಬಡತನದಿಂದ ಬಂದಿದ್ದರೂ ಸಹ, ನಂತರದ ದಿನಗಳಲ್ಲಿ ಅವರು ಅಮೋಘ ಸಾಧನೆಗಳನ್ನು ಮಾಡಿ ಶ್ರಿಮಂತಿಕೆಯ ಜೀವನ ಕಟ್ಟಿಕೊಂಡಿರುವ ಉದಾಹರಣೆಗಳಿವೆ. ಆದರೆ ಈ ನಡುವೆಯೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಅವರು ವೃದ್ಧಾಶ್ರಮಕ್ಕೆ ಸೇರಿರುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಹುಟ್ಟುಹಾಕಿದೆ.

ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕಳವಳ ಮತ್ತು ಭಾವುಕ ಉಂಟುಮಾಡಿದೆ. ಥಾಣೆಯಲ್ಲಿರುವ 'ನಿದಾನ್' ಎಂಬ ನಿದಾನ್ ಹಿರಿಯ ನಾಗರಿಕರ ಹಾರೈಕೆ (ವೃದ್ಧಾಶ್ರಮ) ಕೇಂದ್ರದಿಂದ ಹೊರಬಂದಿರುವ ಈ ವಿಡಿಯೋದಲ್ಲಿ ಅವರು ತಮಗೆ ಸಿಗುತ್ತಿರುವ ಆರೈಕೆ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

Vinod Kambli at elder care centre Viral Video Sparks Concern Among Fans Know Complete details

ವಿನೋದ್ ಕಾಂಬ್ಳಿ ಹೇಳಿದ್ದೇನು?

ವಿಡಿಯೋದಲ್ಲಿ ಮಾತನಾಡುತ್ತಾ, 'ನಾನು ವಿನೋದ್ ಕಾಂಬ್ಳಿ. ಇಲ್ಲಿ ನನಗೆ ಅಪಾರ ಪ್ರೀತಿ ಸಿಕ್ಕಿದೆ. ಇಲ್ಲಿರುವ ಪ್ರತಿಯೊಬ್ಬರಿಂದಲೂ ಆತ್ಮೀಯತೆ ಸಿಗುತ್ತಿದ್ದು, ಮನೆಯಿಂದ ದೂರ ಇದ್ದೇನೆ ಎಂಬ ಭಾವನೆ ಬರುತ್ತಿಲ್ಲ. ಇಲ್ಲಿನ ವ್ಯವಸ್ಥೆ ಹಾಗೂ ಸ್ವಚ್ಛತೆ ನಿಜಕ್ಕೂ ಅತ್ಯುತ್ತಮವಾಗಿದೆ,' ಎಂದು ತಮಗೆ ಸಿಗುತ್ತಿರುವ ಆರೈಕೆಯ ಬಗ್ಗೆ ವಿವರಿಸಿದ್ದಾರೆ. ಈ ದೃಶ್ಯದಲ್ಲಿ ಅವರು ಮಾತನಾಡಲು ಸ್ವಲ್ಪ ಶ್ರಮಪಡುತ್ತಿರುವುದು ಕಂಡುಬಂದರೂ, ಅಲ್ಲಿನ ಪರಿಸರ ಮತ್ತು ಸಿಬ್ಬಂದಿಯ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ.

ವಿನೋದ್ ಕಾಂಬ್ಳಿ-ಸಚಿನ್ ಬಾಂಧ್ಯವ್ಯ

ಇನ್ನೂ ವಿನೋದ್ ಕಾಂಬ್ಳಿ ಮತ್ತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ನಡುವೆ ಉತ್ತಮ ಬಾಂಧವ್ಯವಿತ್ತು. ಇಬ್ಬರೂ ಮುಂಬೈನ ಶಾರದಾಶ್ರಮ ವಿದ್ಯಾಮಂದಿರದಲ್ಲಿ ತರಬೇತುದಾರ ರಮಾಕಾಂತ್ ಅಚ್ರೇಕರ್ ಅವರ ಮಾರ್ಗದರ್ಶನದಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದವರು. ಶಾಲಾ ಕ್ರಿಕೆಟ್‌ನಲ್ಲೇ ಇವರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರತಿಭೆಯಿಂದ ಗಮನ ಸೆಳೆದಿದ್ದು, ಬಳಿಕ ಟೀಮ್ ಇಂಡಿಯಾಕ್ಕೆ ಪ್ರವೇಶ ಮಾಡಿದ್ದರು.

ವಿನೋದ್ ಕಾಂಬ್ಳಿ ಕ್ರಿಕೆಟ್‌ ವೃತ್ತಿಜೀವನ

1988ರಲ್ಲಿ ಶಾರದಾಶ್ರಮ ಶಾಲೆಯ ಪಂದ್ಯವೊಂದರಲ್ಲಿ ಅಜೇಯ 664 ರನ್‌ಗಳ ದಾಖಲೆಯ ಜೊತೆಯಾಟವಾಡಿ ಜಗತ್ತಿನ ಗಮನ ಸೆಳೆದಿದ್ದರು. ಈ ಜೋಡಿಯ ಸೌಹಾರ್ದತೆ ನಂತರದ ದಿನಗಳಲ್ಲಿ ಅಷ್ಟೇನು ಚೆನ್ನಲಾಗಿರಲಿಲ್ಲ ಎನ್ನುವ ಸುದ್ದಿಗಳು ಹಬ್ಬಿದ್ದವು. ಆದರೆ ದಿನಕಳೆದಂತೆ ಇವರಿಬ್ಬರು ಉತ್ತಮ ಸ್ನೇಹಿತರು ಎನ್ನುವ ಸ್ಪಷ್ಟನೆ ಕೂಡ ಹೊರಬಿದ್ದಿದ್ದು, ಗೊಂದಲಗಳಿಗೆ ತೆರೆ ಬಿದ್ದಿತ್ತು.

ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾಂಬ್ಳಿ

ಕಳೆದ ಕೆಲವು ವರ್ಷಗಳಿಂದ ವಿನೋದ್ ಕಾಂಬ್ಳಿ ಅವರು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಅವರಿಗೆ ರಕ್ತದೊತ್ತಡ, ಮೂತ್ರನಾಳದ ಸೋಂಕು ಹಾಗೂ ಹಳೆಯ ಪಾರ್ಶ್ವವಾಯುವಿನ ಪರಿಣಾಮವಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೂ ಅವರ ಶಾರೀರಿಕ ಚಲನವಲನ ಹಾಗೂ ಮಾತುಗಳಲ್ಲಿ ಕಷ್ಟಪಡುತ್ತಿರುವುದು ಅಭಿಮಾನಿಗಳಿಗೆ ಆತಂಕ ತಂದಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಎರಡು ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಾಂಬ್ಳಿ, ಭಾರತದ ಪರ 17 ಟೆಸ್ಟ್‌ಗಳಲ್ಲಿ 54.20ರ ಸರಾಸರಿಯಲ್ಲಿ 1,084 ರನ್ ಹಾಗೂ 104 ಏಕದಿನ ಪಂದ್ಯಗಳಲ್ಲಿ 2,477 ರನ್ ಗಳಿಸಿದ್ದಾರೆ. ಮೈದಾನದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ್ದ ಕ್ರಿಕೆಟಿಗನೊಬ್ಬ ಇಂದು ಹಿರಿಯ ನಾಗರಿಕರ ಹಾರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಅಭಿಮಾನಿಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಶ್ರೀಮಂತ ಕ್ರಿಕೆಟ್‌ ತಂಡಗಳಲ್ಲಿ ಭಾರತ ಕೂಡ ಒಂದಾಗಿ ಗುರುತಿಸಿಕೊಂಡಿದ್ದು, ಈ ದೇಶದ ದಿಗ್ಗಜ ಆಟಗಾರನೊಬ್ಬ ವೃದ್ಧಶ್ರಮ ಸೇರಿರುವುಸು ಆಶ್ಚರ್ಯಕರ ಸಂಗತಿಯಾಗಿದೆ. ಇದೀಗ ಕಾಂಬ್ಳಿ ಅವರು ಯಾಕೆ ಈ ನಿರ್ಧಾರ ತೆಗೆದುಕೊಂಡರು? ಅವರಿಗೆ ಫ್ಯಾಮಿಲಿ ಇಲ್ಲವೇ ಎನ್ನುವ ಪ್ರಶ್ನೆಗಳು ಎದ್ದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+