Vinesh Phogat: ತೂಕದ ಕಾರಣ ವಿನೇಶ್ ಫೋಗಟ್ ಅನರ್ಹ: ಕರಣ್ ಭೂಷಣ್ ಹೇಳಿದ್ದೇನು?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕದ ರೇಸ್‌ನಿಂದ ಹೊರಗುಳಿದ ನಂತರ ವಿನೇಶ್ ಫೋಗಟ್ ತುಂಬಾ ನಿರಾಶೆಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿನೇಶ್ ಫೋಗಟ್ ಪರವಾಗಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರು ವಿನೇಶ್ ಅವರನ್ನು ಚಾಂಪಿಯನ್ ಆಫ್ ಚಾಂಪಿಯನ್ ಎಂದು ಕರೆದಿದ್ದಾರೆ. ಇಡೀ ದೇಶವೇ ನಿಮ್ಮ ಬಗ್ಗೆ ಹೆಮ್ಮೆಪಡುತ್ತಿದೆ, ನೀವು ಇಡೀ ದೇಶಕ್ಕೆ ಸ್ಫೂರ್ತಿಯ ಮೂಲವಾಗಿದ್ದೀರಿ ಎಂದು ಪ್ರಧಾನಿ ಮೋದಿ ಕರೆದಿದ್ದಾರೆ.
ಅಷ್ಟೇ ಅಲ್ಲ, ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ.ಉಷಾ ಅವರಿಗೆ ಕರೆ ಮಾಡಿದ ಪ್ರಧಾನಿ ಮೋದಿ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿನೇಶ್ ಫೋಗಟ್‌ಗೆ ಸಹಾಯ ಮಾಡದ ಈ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಬೇಕು ಎಂದು ಪ್ರಧಾನಿ ಹೇಳಿದ್ದಾರೆಂದು ತಿಳಿದು ಬಂದಿದೆ.

ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ..!
ಈ ನಡುವೆ ಭಾರತೀಯ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷ ಕರಣ್ ಭೂಷಣ್ ಸಿಂಗ್ ಅವರು ವಿನೇಶ್ ಪರ ಮಾತನಾಡಿದ್ದಾರೆ. ವಿನೇಶ್ ಫೋಗಟ್ ಅವರ ಅನರ್ಹತೆಯಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ. ಇದರ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ. ಕರಣ್ ಭೂಷಣ್ ಸಿಂಗ್ ಅವರು ಭಾರತೀಯ ಕುಸ್ತಿ ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ.
ಭಾರತಕ್ಕೆ ಬಿಗ್ ಶಾಕ್
ಇಂದು ವಿನೇಶ್ ಫೋಗಟ್ ಅವರು 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಅಮೆರಿಕದ ಆಟಗಾರರೊಂದಿಗೆ ಸ್ಪರ್ಧಿಸಲಿದ್ದರು. ಇದರಿಂದ ಭಾರತಕ್ಕೆ ಒಂದು ಪದಕ ಖಚಿತ ಎನ್ನುವ ನಿರೀಕ್ಷೆಯಲ್ಲಿ ಎಲ್ಲರಿದ್ದರು. ಚಿನ್ನ ಅಥವಾ ಬೆಳ್ಳಿಯ ಪದಕ ಖಚಿತವಾಗಿತ್ತು. ಆದರೆ ಈ ಪಂದ್ಯಕ್ಕೂ ಮುನ್ನ ವಿನೇಶ್ ಅನರ್ಹಗೊಂಡಿದ್ದಾರೆ.
ಮಹಾವೀರ್ ಫೋಗಟ್ ಹೇಳಿಕೆ
ನಾನು ಹೇಳಲು ಏನೂ ಇಲ್ಲ ಎಂದು ವಿನೇಶ್ ಫೋಗಟ್ ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಹೇಳಿದ್ದಾರೆ. ಇಡೀ ದೇಶವೇ ಚಿನ್ನದ ನಿರೀಕ್ಷೆಯಲ್ಲಿತ್ತು. ಆದರೆ ಆಟಗಾರರು 50-100 ಗ್ರಾಂ ಅಧಿಕ ತೂಕ ಹೊಂದಿದ್ದರೂ ಆಡಲು ಅವಕಾಶವಿದೆ. ದೇಶದ ಜನತೆಗೆ ನಿರಾಶರಾಗಬೇಡಿ ಎಂದು ಹೇಳಲು ಇಚ್ಚಿಸುತ್ತೇನೆ. ಒಂದಲ್ಲ ಒಂದು ದಿನ ಆಕೆ ಪದಕ ತಂದುಕೊಡುತ್ತಾಳೆ. ಮುಂದಿನ ಒಲಿಂಪಿಕ್ಸ್‌ಗೆ ಅವರನ್ನು ಸಿದ್ಧಪಡಿಸುತ್ತೇನೆ ಎಂದಿದ್ದಾರೆ.
ಯಾರಿಗೆ ಬೆಳ್ಳಿ ಪದಕ ಸಿಗಲಿದೆ?
ನಿಯಮಗಳ ಪ್ರಕಾರ, ಅಂತಿಮ ಪಂದ್ಯದಿಂದ ಆಟಗಾರನನ್ನು ಅನರ್ಹಗೊಳಿಸಿದರೆ ಬೆಳ್ಳಿ ಪದಕವನ್ನು ಯಾರಿಗೂ ನೀಡಲಾಗುವುದಿಲ್ಲ. ಫೈನಲ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಆಟಗಾರ ಚಿನ್ನದ ಪದಕವನ್ನು ಪಡೆಯುತ್ತಾನೆ. ಅಲ್ಲದೆ, ಅನರ್ಹಗೊಂಡ ಆಟಗಾರ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿಯುತ್ತಾರೆ.












Click it and Unblock the Notifications