Vinesh Phogat: ವಿನೇಶ್ ಫೋಗಟ್ ಅನರ್ಹ: ಲೋಕಸಭೆಯಲ್ಲಿ ವಿಷಯ ಪ್ರಸ್ತಾಪ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಭಾರೀ ಹಿನ್ನಡೆಯಾಗಿದೆ. ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣ ಮಹಿಳಾ ಕುಸ್ತಿ 50 ಕೆಜಿ ವಿಭಾಗದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಅವರು ಫೈನಲ್‌ನಿಂದ ಹೊರಗುಳಿದಿದ್ದಾರೆ. ಈ ಬಗ್ಗೆ ಲೋಕಸಭೆಯಲ್ಲಿ ಸಚಿವ ಅರ್ಜುನ್ ರಾಮ್ ಮೇಘವಾಲ್ ಪ್ರಸ್ತಾಪ ಮಾಡಿದರು.
ವಿನೇಶ್ ಫೋಗಟ್ ಭಾಗವಹಿಸಲು 100 ಗ್ರಾಮ ತೂಕ ಹೆಚ್ಚಾಗಿ ಇತ್ತು. ಇದನ್ನು ಇಳಿಕೆ ಮಾಡಲು ಒಂದು ಗಂಟೆ ಅವಕಾಶ ಕೇಳಿದ್ದರು. ಆದರೆ ಇದಕ್ಕೆ ಒಲಿಪಿಂಕ್ಸ್ ಸಂಸ್ಥೆ ಅವಕಾಶ ನೀಡಿಲ್ಲ. ಜೊತೆಗೆ ಅವರನ್ನು ಅನರ್ಹಗೊಳಿಸಿದೆ ಎಂದು ಸಚಿವ ಅರ್ಜುನ್ ರಾಮ್ ಮೇಘವಾಲ್ ಲೋಕಸಭೆಯಲ್ಲಿ ಹೇಳಿದರು.

ಎರಡು ಕೆಜಿ ಹೆಚ್ಚಿದ್ದರಿಂದ ವಿನೇಶ್ ಫೋಗಟ್ ಕಳೆದ ದಿನ ರಾತ್ರಿಯಿಡೀ ವರ್ಕೌಟ್ ಮಾಡಿದ್ದರು. ನಿದ್ದೆಗೆಟ್ಟು ಸ್ಕಿಪ್ಪಿಂಗ್, ಜಾಗಿಂಗ್, ಸೈಕ್ಲಿಂಗ್ ಮಾಡಿದ್ದರು. ಆದರೆ 100 ಗ್ರಾಮ ತೂಕ ಹೆಚ್ಚಿತ್ತು. ಇದರ ಇಳಿಕೆಗೆ ಒಂದು ಗಂಟೆ ಮಾತ್ರ ಕಾಲಾವಕಾಶ ನೀಡಿ ಎಂದು ಮನವಿ ಮಾಡಲಾಯಿತು. ಆದರೆ ಒಲಿಪಿಂಕ್ಸ್ ಸಂಸ್ಥೆ ನೀಡಿಲ್ಲ ಎಂದು ಅರ್ಜುನ್ ರಾಮ್ ಮೇಘವಾಲ್ ಕಿಡಿಕಾರಿದ್ದಾರೆ.
ಹೌದು... ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ಸ್ ಪ್ರವೇಶಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣಕ್ಕಾಗಿ ಮಹಿಳೆಯರ 50 ಕೆಜಿ ಕುಸ್ತಿಯಿಂದ ಅನರ್ಹಗೊಂಡಿದ್ದಾರೆ. ರಾತ್ರಿಯಿಡೀ ತಂಡವು ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಇಂದು ಬೆಳಗ್ಗೆ 50 ಕೆಜಿಗಿಂತ ವಿನೇಶ್ ಫೋಗಟ್ ತೂಕ ಹೆಚ್ಚಿದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ.
ಇಂದು ಬೆಳಗ್ಗೆ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಅಧಿಕ ತೂಕ ಹೊಂದಿದ್ದರು. ಈ ಸಂದರ್ಭದಲ್ಲಿ ಅವರ ಖಾಸಗಿತವನ್ನು ಗೌರವಿಸಿ ಅವರ ಜೊತೆ ನಿಲ್ಲುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ತಿಳಿಸಿದೆ. ಕೇವಲ ಕೂದಲೆಳೆ ಅಂತರದಲ್ಲಿ ಫೈನಲ್ ಪಂದ್ಯ ಆಡುವುದರಿಂದ ವಿನೆಶ್ ಫೋಗಟ್ ಅವಕಾಶ ಕಳೆದುಕೊಮಡಿದ್ದು, ಅವರ ಅನರ್ಹತೆ ಪ್ರಶ್ನಿಸಿ ದೂರು ನೀಡಲು ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ನಿರ್ಧರಿಸಿದೆ.












Click it and Unblock the Notifications