Vijay Mallya: ಕೊಹ್ಲಿ ಮತ್ತು ಆರ್‌ಸಿಬಿ ನಾನು ಮಾಡಿದ ಉತ್ತಮ ಆಯ್ಕೆಗಳು ಎಂದ ವಿಜಯ್ ಮಲ್ಯ
ಬೆಂಗಳೂರು, ಮೇ. 22: ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಐಪಿಎಲ್‌ನಲ್ಲಿ ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಈ ವರ್ಷದ ಪ್ಲೇಆಫ್ ಹಂತಕ್ಕೆ ಮರಳಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ಇಂದು (ಮೇ. 22) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೊದಲ ಪ್ಲೇಆಫ್ ಪಂದ್ಯ ಆಡಲಿದೆ.
ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಪಂದ್ಯಕ್ಕು ಮುನ್ನ ಮಾಜಿ ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ತಮ್ಮ ಮಾಜಿ ತಂಡಕ್ಕೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ವಿಶೇಷ ಸಂದೇಶ ಹಂಚಿಕೊಂಡಿರುವ ಅವರು ಸುಮಾರು 17 ವರ್ಷಗಳ ಹಿಂದೆ ವಿರಾಟ್ ಕೊಹ್ಲಿಗಾಗಿ ಬಿಡ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಇದಕ್ಕಿಂತ ಉತ್ತಮ ಆಯ್ಕೆ ಮಾಡಲು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ. ಇದಲ್ಲದೆ, ಈ ವರ್ಷ ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ವಿಜಯ್ ಮಲ್ಯ ಹೇಳಿದ್ದಾರೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ವಿಜಯ್ ಮಲ್ಯ, "ನಾನು ಆರ್‌ಸಿಬಿ ಫ್ರಾಂಚೈಸ್‌ಗಾಗಿ ಬಿಡ್ ಮಾಡಿದಾಗ ಮತ್ತು ನಾನು ವಿರಾಟ್‌ಗೆ ಬಿಡ್ ಮಾಡಿದಾಗ, ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಒಳ ಮನಸ್ಸು ಹೇಳಿತ್ತು. ಈಗ ನನ್ನ ಒಳ ಮನಸ್ಸು ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ಹೇಳುತ್ತಿದೆ. ಮುನ್ನುಗ್ಗಿ... ಮತ್ತಷ್ಟು ಒಳ್ಳೆಯದಾಗಲಿ" ಎಂದಿದ್ದಾರೆ.
ಪ್ರಸ್ತುತ ಯುನೈಟೆಡ್ ಕಿಂಗ್‌ಡಂ (ಬ್ರಿಟನ್)ನಲ್ಲಿ ಇರುವ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಭಾರತ ಸರ್ಕಾರಕ್ಕೆ ಹಸ್ತಾಂತರ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಗೆದ್ದಾಗ ಮತ್ತು ಸೋತಾಗ ಟ್ವಿಟ್‌ಗಳ ಮೂಲಕ ಹುರಿದುಂಬಿಸುತ್ತಿದ್ದಾರೆ.

ಮುಂದುವರೆಯಲಿದೆಯೇ RR ವಿರುದ್ಧ RCB ಪ್ರಾಬಲ್ಯ
ಆರ್‌ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇಆಫ್ ಹಂತದಲ್ಲಿದೆ. 6 ಪಂದ್ಯಗಳ ಗೆಲುವಿನ ಓಟ ಮುಂದುವರಿಸಿದ ನಂತರ ಪ್ಲೇ ಆಫ್‌ಗೆ ತಲುಪಿದೆ. 8 ಪಂದ್ಯಗಳಿಂದ ಮೊದಲ 7 ಪಂದ್ಯಗಳಲ್ಲಿ ಸೋತ ನಂತರ ಆರ್‌ಸಿಬಿ ಡೌನ್ ಮತ್ತು ಔಟ್ ಆಗಿತ್ತು. ಬಳಿಕ ನಡೆದ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಫಾರ್ಮ್ ಕಾಯ್ದುಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ನಡುವಿನ ಎಲಿಮಿನೇಟರ್ ಪದ್ಯದ ವಿಜೇತರು ಕ್ವಾಲಿಫೈಯರ್ 2 ಕ್ಕೆ ತಲುಪಲಿದ್ದಾರೆ. ಅಲ್ಲಿ ಮೇ 24 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣೆಸಲಿದ್ದಾರೆ. ಆರ್‌ಸಿಬಿ ಐಪಿಎಲ್ ಟ್ರೋಫಿ ಎತ್ತಿಹಿಡಿಯಲು 3 ಮ್ಯಾಚ್‌ಗಳನ್ನು ಗೆಲ್ಲುವ ಅಗತ್ಯವಿದೆ.
When I bid for the RCB franchise and I bid for Virat, my inner instinct told me that I could not have made better choices. My inner instinct tells me that RCB have the best chance to go for the IPL Trophy. Onward and Upward. Best of luck.
— Vijay Mallya (@TheVijayMallya) May 21, 2024
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದರೆ, ಚೆನ್ನೈನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ದ ಸೆಣಸಲಿದೆ. ಅಲ್ಲಿ ಜಯಗಳಿಸಿದರೆ, ಫೈನಲ್‌ನಲ್ಲಿ ಕೋಲ್ಕತ್ತ ತಂಡ ಎದುರಾಗಲಿದೆ. ಆದರೆ, ರಾಜಸ್ಥಾನ್ ರಾಯಲ್ಸ್ ಪಂದ್ಯಾವಳಿಯ ಲೀಗ್ ಹಂತಗಳಲ್ಲಿ ತಮ್ಮ ಹೆಸರಿಗೆ 17 ಪಾಯಿಂಟ್ಸ್ ಜೊತೆಗೆ ಉತ್ತಮ ದಾಖಲೆ ಹೊಂದಿದೆ.
ದಾಖಲೆ ಬರೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯ
ಆರ್‌ಸಿಬಿ 6 ಪಂದ್ಯಗಳನ್ನು ಗೆದ್ದುಕೊಂಡಿದ್ದಕ್ಕಿಂತ ಹೆಚ್ಚಾಗಿ, ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಕತ್ ರೋಮಾಂಚಕವಾಗಿತ್ತು. ಈ ಗೆಲುವನ್ನು ಅರ್‌ಸಿಬಿ ಅಭಿಮಾನಿಗಳು ಐಪಿಎಲ್ ಟ್ರೋಫಿ ಗೆದ್ದಷ್ಟೇ ಖುಷಿಯಿಂದ ಸಂಭ್ರಮಿಸಿದ್ದಾರೆ.












Click it and Unblock the Notifications