RCB vs CSK: ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ; ವಿಜಯ್ ಮಲ್ಯ ಹೇಳಿದ್ದೇನು?
ಶುಕ್ರವಾರ ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 50 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 17 ವರ್ಷಗಳ ಬಳಿಕ ಆರ್‌ಸಿಬಿ ಚೆನ್ನೈನಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸಿ ಸೋಲಿನ ಸರಪಳಿಯನ್ನು ಮುರಿದಿದೆ. ಆರ್ ಸಿಬಿ ಅಭಿಮಾನಿಗಳು ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ.
ತಂಡದ ಮಾಜಿ ಮಾಲಿಕ ವಿಜಯ್ ಮಲ್ಯ ಕೂಡ ಆರ್ ಸಿಬಿ ತಂಡದ ಗೆಲುವಿಗೆ ಶುಭಾಶಯ ತಿಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಗೆದ್ದಾಗ ಕೂಡ ವಿಜಯ್ ಮಲ್ಯ ಟ್ವೀಟ್ ಮಾಡಿ ಆರ್ ಸಿಬಿ ತಂಡದ ಆಟವನ್ನು ಶ್ಲಾಘಿಸಿದ್ದರು.

ವಿಜಯ್ ಮಲ್ಯ ಹೇಳಿದ್ದೇನು?
ಆರ್ ಸಿಬಿ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ಅವರು, 18 ವರ್ಷಗಳ ಬಳಿಕ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಗೆಲುವು ಸಾಧಿಸಿದ್ದಕ್ಕೆ ಶುಭಾಶಯಗಳು ಆರ್ ಸಿಬಿ. ತಂಡದಿಂದ ಅತ್ಯುತ್ತಮ ಆಲ್‌ರೌಂಡರ್ ಪ್ರದರ್ಶನ ಬಂದಿದೆ. ಧೈರ್ಯವಾಗಿ ಆಡಿರಿ ಎಂದಿದ್ದಾರೆ.
ಆರ್ ಸಿಬಿ ತಂಡಕ್ಕೆ ಶುಭಾಶಯಗಳ ಮಹಾಪೂರ
ಆರ್ ಸಿಬಿ ಗೆಲುವಿಗೆ ಮಾಜಿ ಕ್ರಿಕೆಟಿಗರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ವಿಡಿಯೋ ಹಂಚಿಕೊಂಡಿದ್ದು, ಆರ್ ಸಿಬಿ ತಂಡ ಬಲಿಷ್ಠವಾಗಿ ಕಾಣುತ್ತಿದೆ. ತವರಿನಲ್ಲಿ ಸಿಎಸ್‌ಕೆ ವಿರುದ್ಧ ಗೆದ್ದಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದು ನನಗೆ ಖುಷಿಯಾಗಲಿಲ್ಲ, ಇದು ಸಿಎಸ್‌ಕೆ ತಂಡಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಆರ್ ಸಿಬಿ ತಂಡದ ಮಾಜಿ ಆಟಗಾರ ವಿನಯ್ ಕುಮಾರ್ ಕೂಡ ಆರ್ ಸಿಬಿ ಗೆಲುವನ್ನು ಕೊಂಡಾಡಿದ್ದಾರೆ. ಟ್ವೀಟ್ ಮಾಡಿರುವ ಅವರು, "ಆರ್‌ಸಿಬಿಗೆ ಸಮಗ್ರ ಗೆಲುವು. ಮೊದಲು ಬ್ಯಾಟಿಂಗ್ ಮಾಡುವುದು ವರದಾನವಾಗಿತ್ತು, ಬೌಲರ್‌ಗಳು ಕೂಡ ಉತ್ತಮ ಪ್ರದರ್ಶನ ನೀಡಿದರು. ರಜತ್ ಪಟಿದಾರ್ ನಾಯಕತ್ವ ಉತ್ತಮವಾಗಿತ್ತು" ಎಂದಿದ್ದಾರೆ.












Click it and Unblock the Notifications