ODI World Cup: ಹೈದರಾಬಾದ್ ಸ್ಟೇಡಿಯಂ ಸೀಟುಗಳನ್ನು ನೋಡಿ ಅಭಿಮಾನಿಗಳ ಆಕ್ರೋಶ
2023ರ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಇಂದಿನಿಂದ (ಅ.5) ಚಾಲನೆ ಸಿಗಲಿದೆ. ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಇಂಗ್ಲೆಂಡ್ - ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ವಿಶ್ವಕಪ್ ಪಂದ್ಯಾವಳಿಯನ್ನು ಯಶಸ್ವಿಯಾಗಿಸಲು ಬಿಸಿಸಿಐ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ದೇಶದ 10 ಕ್ರೀಡಾಂಗಣಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ವಿಶ್ವಕಪ್‌ಗಾಗಿಯೇ ಎಲ್ಲಾ ಕ್ರೀಡಾಂಗಣಗಳನ್ನು ನವೀಕರಣ ಮಾಡಲಾಗಿದೆ. ನವೀಕರಣ ಆದ ಬಳಿಕವೂ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ ಸೀಟುಗಳು ಕೊಳಕಾಗಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಹೈದರಾಬಾದ್‌ನ ಉಪ್ಪಾಳದಲ್ಲಿರುವ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣವು ಏಕದಿನ ವಿಶ್ವಕಪ್‌ನ ಮೂರು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಕ್ರಿಕೆಟ್ ಬರಹಗಾರ, ವಿಶ್ಲೇಷಕ ಮತ್ತು ವಿವರಣೆಗಾರ ಸಿ ವೆಂಕಟೇಶ್ ಅವರು ಮಂಗಳವಾರ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಅಭ್ಯಾಸ ಪಂದ್ಯದ ಸಂದರ್ಭದಲ್ಲಿ ವೀಕ್ಷಕರ ಆಸನಗಳು ಪಕ್ಷಿಗಳ ಹಿಕ್ಕೆಗಳಿಂದ ತುಂಬಿರುವ ಹಲವಾರು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
''ಉಪ್ಪಾಳ ಕ್ರೀಡಾಂಗಣದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಕೆಲವು ವಿಂಡೋ ಡ್ರೆಸ್ಸಿಂಗ್ ಮತ್ತು ವೀಕ್ಷಕರ ಸೌಕರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿಲ್ಲ,'' ಎಂದು ವೆಂಕಟೇಶ್ ಎಕ್ಸ್‌ನಲ್ಲಿ ಸ್ಟೇಡಿಯಂನೊಳಗಿನ ಚಿತ್ರಗಳನ್ನು ಹಂಚಿಕೊಳ್ಳುವಾಗ ಹೇಳಿದ್ದಾರೆ.
This is for those, who said I had posted an old or fake pic. I’m very present at the ground. pic.twitter.com/klMfNCM6VM
— C.VENKATESH (@C4CRICVENKATESH) October 3, 2023
ಅನೇಕ ಬಳಕೆದಾರರು ಚಿತ್ರಗಳ ಸತ್ಯಾಸತ್ಯತೆಯ ಬಗ್ಗೆ ಅವರನ್ನು ಪ್ರಶ್ನಿಸಿದ ನಂತರ, ಅವರು ನಿಜವನ್ನು ಸಾಬೀತುಪಡಿಸಲು ವಿಡಿಯೋ ಹಂಚಿಕೊಂಡಿದ್ದಾರೆ. ನಡೆಯುತ್ತಿರುವ ಪಂದ್ಯದ ನಡುವೆ ಸೀಟುಗಳ ಸ್ಥಿತಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಸ್ಪಷ್ಟನೆ ನೀಡಿದ ವೆಂಕಟೇಶ್
ಕೊಳಕು ಆಸನಗಳು ಪಶ್ಚಿಮ ಟೆರೇಸ್‌ನಲ್ಲಿ ಮಾತ್ರ ಇದ್ದವು ಆದರೆ ಉಳಿದ ಕ್ರೀಡಾಂಗಣವನ್ನು ನವೀಕರಿಸಲಾಗಿದೆ ಮತ್ತು ಹೊಸ ಆಸನಗಳನ್ನು ಅಳವಡಿಸಲಾಗಿದೆ ಎಂದು ಅವರು ನಂತರ ಸ್ಪಷ್ಟನೆ ನೀಡಿದರು.
ಉಪ್ಪಾಳ ಕ್ರೀಡಾಂಗಣದ ಕೆಲವು ಸ್ಟ್ಯಾಂಡ್‌ಗಳಲ್ಲಿನ ಆಸನಗಳ ಕೆಟ್ಟ ಸ್ಥಿತಿಯ ಕುರಿತು ನನ್ನ ಟ್ವೀಟ್‌ಗಳು ವೈರಲ್ ಆಗಿವೆ. ದೇಶದ ಹೊರಗಿನ ಕೆಲವರು ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹೊಚ್ಚ ಹೊಸ ಆಸನಗಳೊಂದಿಗೆ ಕ್ರೀಡಾಂಗಣವನ್ನು ನವೀಕರಿಸಲಾಗಿದೆ ಮತ್ತು ವೆಸ್ಟರ್ನ್ ಟೆರೇಸ್ ಸ್ಟ್ಯಾಂಡ್ ಹಳೆಯ ಸೀಟುಗಳು ಮಾತ್ರ ಕೆಟ್ಟದಾಗಿವೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
When I said nothing has changed in Uppal Stadium, it has a direct reference to my earlier tweet in May this year, wherein I found dirty seats in the same Western Terrace stands. The bad condition of those stands has worsened now. But the rest of the stadium has been refurbished. https://t.co/QP26jih9eL
— C.VENKATESH (@C4CRICVENKATESH) October 3, 2023
ವಿಶ್ವಕಪ್ ಆರಂಭಕ್ಕೆ ಕಡಿಮೆ ಸಮಯ ಇದ್ದ ಕಾರಣ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದ ಎಲ್ಲಾ ಸೀಟುಗಳನ್ನು ಬದಲಾಯಿಸಲು ಸಾಧ್ಯವಾಗಿಲ್ಲ ಎನಿಸುತ್ತದೆ. ಆದರೆ ಪಂದ್ಯಕ್ಕೆ ಮುನ್ನ ಹಳೆಯ ಸೀಟುಗಳನ್ನು ಸ್ವಚ್ಛಗೊಳಿಸಿದ್ದಾರೆ. ಕ್ರೀಡಾಂಗಣದಲ್ಲಿ ಉಳಿದ ಸೌಲಭ್ಯಗಳು ಉತ್ತಮವಾಗಿದ್ದು, ಭಾರತದ ಆತಿಥ್ಯ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಹೇಳಿದ್ದಾರೆ.
ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
ಈ ಫೋಟೋಗಳನ್ನು ಕಂಡ ಬಳಿಕ ಹಲವು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಬೇಜವಾಬ್ದಾರಿಯಿಂದ ಇಡೀ ದೇಶದ ಪ್ರತಿಷ್ಟೆಯನ್ನೇ ಹಾಳು ಮಾಡುತ್ತೀರಾ, ಇದು ನಾಚಿಕಗೇಡು ಎಂದು ಒಬ್ಬರು ಸಿಟ್ಟು ಹೊರಹಾಕಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯೆ ನೀಡಿ ''ಸ್ಥಳೀಯ ಭ್ರಷ್ಟಾಚಾರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೈದರಾಬಾದ್‌ಗೆ ಉತ್ತಮ ಆಡಳಿತ ಮತ್ತು ಲೆಕ್ಕಪರಿಶೋಧನೆಯ ಅಗತ್ಯವಿದೆ. ಅಂತಹ ವಿಶ್ವ ದರ್ಜೆಯ ಕ್ರೀಡಾಂಗಣವನ್ನು ಸ್ಥಳೀಯ ಕ್ರಿಕೆಟ್ ಸ್ಟೇಡಿಯಂ ಆಗಿ ಪರಿವರ್ತಿಸುವುದು ಹೇಗೆ ಎಂದು ಖಚಿತವಾಗಿಲ್ಲ!" ಎಂದು ಹೇಳಿದ್ದಾರೆ.
ಗಮನಾರ್ಹವಾಗಿ, 2023ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಹತ್ತು ಅಭ್ಯಾಸ ಪಂದ್ಯಗಳಲ್ಲಿ ಎರಡನ್ನು ಹೈದರಾಬಾದ್ ಆಯೋಜಿಸಿತ್ತು. 15 ಎಕರೆಗಳಷ್ಟು ವಿಸ್ತಾರವಾದ ಈ ಕ್ರೀಡಾಂಗಣವು 39,200 ಆಸನ ಸಾಮರ್ಥ್ಯವನ್ನು ಹೊಂದಿದೆ.












Click it and Unblock the Notifications