USA vs PAK: ಕ್ರಿಕೆಟ್ ಶಿಶುಗಳ ಎದುರು ಸೋತ 2022ರ T20 ವಿಶ್ವಕಪ್ ಫೈನಲಿಸ್ಟ್: ಪಾಕಿಸ್ತಾನ ಟೂರ್ನಿಯಿಂದ ಹೊರಕ್ಕೆ?
ಪಾಕಿಸ್ತಾನ ಕ್ರಿಕೆಟ್ ಅಂಗಳದಲ್ಲಿ ಇಂತಹ ಒಂದು ಹೀನಾಯ ಸೋಲು ಕಾಣುತ್ತದೆ ಎಂದು ಯಾರೂ ಊಹೀಸಿರಲಿಲ್ಲ. ಮಾಜಿ ಏಕದಿನ ವಿಶ್ವಕಪ್ ಚಾಂಪಿಯನ್ಸ್, ಟಿ20 ವಿಶ್ವಕಪ್ ಚಾಂಪಿಯನ್ಸ್ ಕ್ರಿಕೆಟ್ ಶಿಶುಗಳ ಎದುರು ಮಂಡಿಯೂರಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲೂ ಪಾಕಿಸ್ತಾನ ತನ್ನ ಘನತೆಗೆ ತಕ್ಕ ಆಟವನ್ನು ಆಡಲೇ ಇಲ್ಲ. ಪರಿಣಾಮ ಭಾರೀ ಮುಖಭಂಗವನ್ನು ಅನುಭವಿಸಿದೆ.
ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿದ್ದ ಪಾಕಿಸ್ತಾನ ಈ ಬಾರಿ ವಿಶ್ವಕಪ್‌ನಲ್ಲಿ ಲೀಗ್ ಹಂತದಿಂದ ಮುಂದೆ ಹೋಗುತ್ತದಾ ಎಂಬ ಪ್ರಶ್ನೆಗಳು ಎದ್ದಿವೆ. ಪಾಕಿಸ್ತಾನ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಮುಂದಿನ ಎಲ್ಲ ಪಂದ್ಯಗಳನ್ನು ಉತ್ತಮ ರನ್ ರೇಟ್‌ನಲ್ಲಿ ಗೆಲ್ಲುವ ಅನಿವಾರ್ಯತೆ ಇದೆ. ಟೂರ್ನಿಯಲ್ಲಿ ಇನ್ನೊಂದು ಸೋಲು ಪಾಕ್ ತಂಡದ ಚಾಂಪಿಯನ್ ಆಸೆಗೆ ಪೆಟ್ಟು ನೀಡುವುದುರಲ್ಲಿ ಅನುಮಾನವೇ ಇಲ್ಲ.

ಅಂದಹಾಗೆ ಈ ಪಿಚ್‌ಗಳ ಮೇಲೆ ಆಡಿರುವ ಅನುಭವ ಪಾಕಿಸ್ತಾನಕ್ಕೆ ಹೆಚ್ಚಾಗಿ ಇಲ್ಲ. ಪಾಕ್ ಆಟಗಾರರು ಬಿಗ್ ಶಾಟ್‌ಗಳನ್ನೇ ಹೆಚ್ಚು ಹೊಡದು ಆರ್ಭಟಿಸುವ ಕಲೆಗಾರರು. ಆದರೆ ಅವರ ತಾಕತ್ತು ಇಲ್ಲಿ ಉಪಯೋಗಕ್ಕೆ ಬಾರಲೇ ಇಲ್ಲ. ಈ ಅಂಗಳದ ಔಟ್ ಫೀಲ್ಡ್ ತುಂಬ ಸ್ಲೋ ಇದೆ. ನೀವು ಎಷ್ಟೇ ತಾಕತ್ತಿನಿಂದ ಬಾರಿಸಿದರೂ, ಫೋರ್ ಹೋಗುವುದು ಕಠಿಣ. ಬಾನಂಗಣದಲ್ಲಿ ಚೆಂಡನ್ನು ಪ್ರೇಕ್ಷಕರ ಗ್ಯಾಲರಿಗೆ ಅಟ್ಟಿದಾಗ ಮಾತ್ರ ರನ್ ಸುರಿಮಳೆ ಇಲ್ಲಾ ಅಂದರೆ ಸ್ಟ್ರೈಕ್ ರೋಟೆಟ್ ಮಾಡಿಕೊಂಡೇ ಆಡಬೇಕು.
ಸೂಪರ್ ಓವರ್ ಫಲಿತಾಂಶ
ಯುಎಸ್‌ಎ ಉತ್ತಮ ಸಂಘಟಿತದ ಆಟದ ಪ್ರದರ್ಶನ ನೀಡಿದ ಯುಎಸ್‌ಎ ಪಾಕ್ ತಂಡದ ಗರ್ವಭಂಗ ಮಾಡಿದೆ. ಮೊದಲು ನಿಗದಿತ ಓವರ್‌ಗಳಲ್ಲಿ ಪಾಕ್ ಕಲೆ ಹಾಕಿದ್ದಷ್ಟೇ ರನ್ ಗಳನ್ನು ಕಲೆ ಹಾಕಿದ್ದ ಯುಎಸ್‌ಎ ಸೂಪರ್ ಓವರ್‌ನಲ್ಲಿ ಸೂಪರ್ ಆಟದ ಪ್ರದರ್ಶನ ನೀಡಿತು. ಮೊದಲು ಬ್ಯಾಟ್ ಮಾಡಿದ ಅಮೆರಿಕ ಒಂದು ವಿಕೆಟ್ ಕಳೆದುಕೊಂಡು 18 ರನ್ ಕಲೆ ಹಾಕಿದರೆ, ಪಾಕಿಸ್ತಾನ ಕೇವಲ 13 ರನ್‌ಗಳಿಗೆ ಆಟ ಮುಗಿಸಿತು. ಈ ಮೂಲಕ ಮತ್ತೊಮ್ಮೆ ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದ್ದ ಪಾಕ್‌ಗೆ ಆರಂಭದಲ್ಲಿ ಪೆಟ್ಟು ಬಿದ್ದಿದೆ.

ಪಾಕ್ ಮುಂದಿನ ಹಾದಿ
ಪಾಕಿಸ್ತಾನ ಇದೇ ಭಾನುವಾರ ಭಾರತದ ವಿರುದ್ಧ, ಜೂನ್ 11 ರಂದು ಕೇನಾಡ ವಿರುದ್ಧ, ಜೂನ್ 16 ರಂದು ಐರ್ಲೆಂಡ್ ವಿರುದ್ಧ ಪಂದ್ಯಗಳನ್ನು ಆಡಬೇಕಿದೆ. ಈ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಕಂಡರೂ ಲೆಕ್ಕಾಚಾರ ಬೇರೆಯದ್ದೇ ಆಗುತ್ತದೆ. ಪಾಕ್ ಇನ್ನು ಮುಂದಿನ ಪಂದ್ಯಗಳಲ್ಲಿ ಒಳ್ಳೆಯ ರನ್ ರೇಟ್‌ನಿಂದ ಗೆಲ್ಲುವ ಅನಿವಾರ್ಯತೆ ಇದೆ. ಹೀಗೆ ಆದಾಗ ಮಾತ್ರ ಪಾಕ್ ಸೂಪರ್ 8 ತಲುಪುತ್ತದೆ. ಇಲ್ಲಾ ಅಂದರೆ ಪಾಕ್ ಲೀಗ್ ಹಂತದಲ್ಲೇ ತನ್ನ ಆಟವನ್ನು ಮುಗಿಸಬೇಕಾಗುತ್ತದೆ.

ಆತಿಥೇಯ ಯುಎಸ್‌ಎ ಮುಂದಿನ ಪಂದ್ಯಗಳಲ್ಲಿ ಒಂದನ್ನು ಉತ್ತಮ ಮಾರ್ಜಿನ್‌ನಿಂದ ಗೆದ್ದಿದ್ದೆ ಆದಲ್ಲಿ ಪಾಕ್‌ಗೆ ಟುಕುಟುಕು ಸ್ಟಾರ್ಟ್...












Click it and Unblock the Notifications