ಬರೀ ಭಾರತ ಅಷ್ಟೇ ಅಲ್ಲಾ, ಯುಎಸ್‌ಎದಲ್ಲೂ ಪಾಕ್ ವಿರುದ್ಧದ ಪಂದ್ಯದ ವೇಳೆ ರಸ್ತೆ ಖಾಲಿ ಖಾಲಿ
ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಇದ್ದಾಗ ಭಾರತದಲ್ಲಿನ ರಸ್ತೆಗಳು ಖಾಲಿ ಖಾಲಿ ಆಗಿರುತ್ತವೆ. ಇದೇ ಚಿತ್ರಣ ಇದೇ ಭಾನುವಾರ ಕಂಡು ಬರಲಿದೆ. ಆದರೆ ಇದೇ ರೀತಿಯ ಚಿತ್ರಣ ಅಮೆರಿಕದಲ್ಲೂ ಕಂಡು ಬಂದಿದ್ದನ್ನು ಕಂಡು ಕ್ರಿಕೆಟ್ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ.
ಗುರುವಾರ ಲೀಗ್‌ಹಂತದ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ ಹಾಗೂ ಯುಎಸ್‌ಎ ನಡುವಣ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಾಕ್ ಗೆಲ್ಲುವ ಫೆವರೀಟ್ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಆಗಿದ್ದೇ ಬೇರೆ, ಅಮೆರಿಕ ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿ ಅಬ್ಬರಿಸಿದೆ.

ಪಂದ್ಯ ನಿಗದಿತ ಸಮಯದಲ್ಲಿ ಡ್ರಾ ಆದಾಗ ಪಂದ್ಯದ ಫಲಿತಾಂಶ ಅರಿತು ಕೊಳ್ಳಲು ಸೂಪರ್ ಓವರ್ ಮೊರೆ ಹೋಗಾಲಾಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಅಮೆರಿಕ 1 ವಿಕೆಟ್ ಕಳೆದುಕೊಂಡು 18 ರನ್ ಬಾರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ಗುರಿಯನ್ನು ಮುಟ್ಟುವಲ್ಲಿ ವಿಫಲವಾಯಿತು. ಪರಿಣಾಮ ಟಿ20 ವಿಶ್ವಕಪ್‌ನಲ್ಲಿ ಮೊದಲ ಅಚ್ಚರಿ ಫಲಿತಾಂಶ ಹೊರ ಬಿದ್ದಿದೆ. ಈ ಪಂದ್ಯದಲ್ಲಿ ಅಮೆರಿಕ ಭರ್ಜರಿ ಗೆಲುವು ಸಾಧಿಸಿದೆ.
ಅಮೆರಿಕ ಸೂಪರ್ ಓವರ್ ನಡೆಯುತ್ತಿದ್ದರೆ ಅಮೆರಿಕದ ಬೀದಿಗಳು ಖಾಲಿ ಖಾಲಿ ಆಗಿದ್ದವು. ಈ ದೇಶದಲ್ಲಿ ಕ್ರಿಕೆಟ್ ಈಗ ಅಂಬೇಗಾಲು ಇಡುತ್ತಿದೆ. ಈ ದೇಶದ ಜನರಿಗೆ ಕ್ರಿಕೆಟ್ ಆಸಕ್ತಿ ತೀರಾ ಕಡಿಮೆ. ಆದರೂ ತಮ್ಮ ತಂಡ ಇಂತಹ ಪ್ರದರ್ಶನ ನೀಡಿದೆ ಎಂದು ನೋಡಲು ಇಡೀ ಅಮೆರಿಕ ಕಾದು ಕುಳಿತಿತ್ತು. ಆಗ ಇಡಿ ಅಮೆರಿಕದ ಬೀದಿಗಳೆಲ್ಲಾ ಬಿಕೋ ಎನ್ನುತ್ತಿದ್ದವು.

ಸೂಪರ್ ಓವರ್ ನಿಜಕ್ಕೂ ಥ್ರಿಲ್ ಆಗಿತ್ತು. ಪಾಕಿಸ್ತಾನ ಹಾಗೂ ಅಮೆರಿಕ ನಡುವಣ ಪಂದ್ಯದ ವೇಳೆ ರಸ್ತೆಗಳಲ್ಲಿ ವಾಹನಗಳು ಒಂದು ಬದಿಯಲ್ಲಿ ನಿಂತು ಪಂದ್ಯ ವೀಕ್ಷಿಸಿದ್ದವು. ನಿಜಕ್ಕೂ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ದೇಶದಲ್ಲಿ ಈ ದೃಶ್ಯ ನಿಜಕ್ಕೂ ಐಸಿಸಿಗೆ ಸಮಾಧಾನ ತಂದಿರುತ್ತದೆ.
ಸೂಪರ್ ಓವರ್
ಸೂಪರ್ ಓವರ್‌ನಲ್ಲಿ ಅಮೆರಿಕದ ಜೋನ್ಸ್ ಒಂದು ಬೌಂಡರಿ ಬಾರಿಸಿದರು ಮತ್ತು ಪಾಕಿಸ್ತಾನದ ವಿಶ್ವ ದರ್ಜೆಯ ವೇಗಿ ಮೊಹಮ್ಮದ್ ಅಮೀರ್ 3 ವೈಡ್‌ಗಳನ್ನು ಬೌಲ್ಡ್ ಮಾಡಿ ಸ್ಕೋರ್‌ಗೆ 18 ರನ್ ನೀಡಿದರು. ಪಾಕಿಸ್ತಾನದ ಮುಂದೆ 19 ರನ್‌ಗಳ ಗುರಿ ಇತ್ತು. 2010ರಲ್ಲಿ ಭಾರತ ಅಂಡರ್-19 ತಂಡದಲ್ಲಿ ಆಡಿದ್ದ ಸೌರಭ್ ನೇತ್ರವಾಲ್ಕರ್ ಬೌಲಿಂಗ್ ಭರ್ಜರಿ ಬೌಲಿಂಗ್ ಮಾಡಿ ಎಲ್ಲರ ಗಮನ ಸೆಳೆದರು. ಈ ಓವರ್‌ನಲ್ಲಿ ಒಂದೇ ಒಂದು ಬೌಂಡರಿ ಕೊಟ್ಟರು, ಅದೂ ಲೆಗ್ ಬೈ ಆಗಿತ್ತು. ಪಾಕಿಸ್ತಾನದ ಇಫ್ತಿಕರ್, ಫಖರ್ ಜಮಾನ್ ಮತ್ತು ಶಾದಾಬ್ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು. ಸೂಪರ್ ಓವರ್‌ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಅಮೆರಿಕ.












Click it and Unblock the Notifications