ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೀಡಾಪಟುಗಳಿಗಾಗಿ ಆನ್‌ಲೈನ್ ಪೋರ್ಟಲ್ ಆರಂಭಿಸಿದ ಕ್ರೀಡಾ ಸಚಿವಾಲಯ

|
Google Oneindia Kannada News

ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರದ ಕ್ರೀಡಾ ಸಚಿವಾಲಯ ಆನ್‌ಲೈನ್ ಪೋರ್ಟಲ್ ಆರಂಭಿಸಿದೆ. ಕ್ರೀಡಾಪಟುಗಳಿಗೆ ಅಗತ್ಯವಾದ ಮಾಹಿತಿ ಇದರಲ್ಲಿ ದೊರೆಯುತ್ತದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ತಮ್ಮ ಇಲಾಖೆಯ ಆನ್‌ಲೈನ್ ಪೋರ್ಟಲ್, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ (ಎನ್‌ಎಸ್‌ಡಿಎಫ್) ವೆಬ್‌ಸೈಟ್ ಮತ್ತು ನಗದು ಪ್ರಶಸ್ತಿ, ರಾಷ್ಟ್ರೀಯ ಕಲ್ಯಾಣ ಮತ್ತು ಕ್ರೀಡಾಪಟುಗಳಿಗೆ ಪಿಂಚಣಿಗಳ ಪರಿಷ್ಕೃತ ಯೋಜನೆಗೆ ಚಾಲನೆ ನೀಡಿದರು.

ಆನ್‌ಲೈನ್ ಪೋರ್ಟಲ್ ಮಾಡಿರುವುದರಿಂದ ಅರ್ಹ ಕ್ರೀಡಾಪಟುಗಳು ಮತ್ತು ಮಾಜಿ ಕ್ರೀಡಾಪಟುಗಳು ಈಗ ತಮ್ಮ ಪ್ರತಿಫಲಗಳು ಮತ್ತು ಬಾಕಿಗಳನ್ನು ಪಡೆಯಲು ರಾಷ್ಟ್ರೀಯ ಫೆಡರೇಶನ್‌ಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

24 ಗಂಟೆ ಮ್ಯಾರಥಾನ್ ಓಟ: ಭಾರತ ತಂಡಗಳಿಗೆ ಚಿನ್ನ ಮತ್ತು ಬೆಳ್ಳಿ24 ಗಂಟೆ ಮ್ಯಾರಥಾನ್ ಓಟ: ಭಾರತ ತಂಡಗಳಿಗೆ ಚಿನ್ನ ಮತ್ತು ಬೆಳ್ಳಿ

ಸರ್ಕಾರದಿಂದ ಮಾನ್ಯತೆ ಮತ್ತು ಬಹುಮಾನಗಳನ್ನು ಪಡೆಯುವ ಸಕ್ರಿಯ ಕ್ರೀಡಾಪಟುಗಳು ಈಗ ಕ್ರೀಡಾ ಇಲಾಖೆಯ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು, ಕಾರ್ಪೊರೇಟ್‌ಗಳು, ಪಿಎಸ್‌ಯುಗಳು ಮತ್ತು ವ್ಯಕ್ತಿಗಳು ಅದರ ಹೊಸದಾಗಿ ನಿರ್ಮಿಸಲಾದ ವೆಬ್‌ಸೈಟ್‌ನಲ್ಲಿ ಎನ್‌ಎಸ್‌ಡಿಎಫ್‌ ನಿಧಿಗೆ ಕೊಡುಗೆ ನೀಡಬಹುದು.

ಸರ್ಕಾರದ ಡಿಜಿಟಲ್ ಇಂಡಿಯಾ ಮಿಷನ್‌ಗೆ ಉತ್ತೇಜನ ನೀಡುವುದರ ಜೊತೆಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಇದು ಸಹಾಯ ಮಾಡುತ್ತದೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿಸ್ಪೋರ್ಟ್ಸ್‌ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ತಮ್ಮ ಕರಾಳ ಅನುಭವ ಬಿಚ್ಚಿಟ್ಟ ದ್ಯುತಿ

ತಂತ್ರಜ್ಞಾನ ಅಳವಡಿಕೆಯಿಂದ ಉತ್ತಮ ಸೇವೆ

ತಂತ್ರಜ್ಞಾನ ಅಳವಡಿಕೆಯಿಂದ ಉತ್ತಮ ಸೇವೆ

"ನಾವು ನಮ್ಮ ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು ಒದಗಿಸುವುದನ್ನು ಮುಂದುವರೆಸುತ್ತೇವೆ ಆದರೆ ಈ ಸೌಲಭ್ಯಗಳೊಂದಿಗೆ ನಾವು ತಂತ್ರಜ್ಞಾನವೂ ಜೊತೆಯಾದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ" ಎಂದು ಹೇಳಿದ್ದಾರೆ.

"ಒಬ್ಬ ಅಥ್ಲೀಟ್ ಉತ್ತಮ ಪ್ರದರ್ಶನದ ನಂತರ ಸರ್ಕಾರದಿಂದ ಬಹುಮಾನ ಮತ್ತು ಮನ್ನಣೆಯನ್ನು ಪಡೆಯಬೇಕಾದರೆ, ಅವರು ಮೊದಲು ಫೆಡರೇಶನ್ ಅಥವಾ ಎಸ್‌ಎಐ ಮೂಲಕ ಹೋಗಬೇಕಾಗಿತ್ತು, ನಂತರ ಅದನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿತ್ತು ಮತ್ತು ಈ ಕ್ರೀಡಾಪಟುಗಳು ತಮ್ಮ ಬಾಕಿಯನ್ನು ಪಡೆಯಲು ಸುಮಾರು ಒಂದು ಅಥವಾ ಎರಡು ವರ್ಷಗಳಷ್ಟು ಸಮಯ ಬೇಕಾಗುತ್ತಿತ್ತು" ಎಂದು ಅವರು ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು.

ಕ್ರೀಡಾಪಟುಗಳ ಸಮಯ ಉಳಿತಾಯ

ಕ್ರೀಡಾಪಟುಗಳ ಸಮಯ ಉಳಿತಾಯ

"ನಾವು ಈ ವ್ಯವಸ್ಥೆಯನ್ನು ಸರಳ ಮತ್ತು ಹೆಚ್ಚು ಪಾರದರ್ಶಕಗೊಳಿಸಿದ್ದೇವೆ. ಸರಳ ಪದಗಳಲ್ಲಿ ನಾವು ವ್ಯವಸ್ಥೆಗೆ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ತಂತ್ರಜ್ಞಾನವನ್ನು ಬಳಸಿದ್ದೇವೆ ಮತ್ತು ಇದು ಕ್ರೀಡಾಪಟುಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಹಾಯ ಮಾಡುತ್ತದೆ ಮತ್ತು ಸೀಮಿತ ಸಮಯದಲ್ಲಿ ಅವರು ತಮ್ಮ ಹಣವನ್ನು ಪಡೆಯುತ್ತಾರೆ." ಎಂದರು.

"ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆ ಅಥವಾ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ಯೋಜನೆ ಕೂಡ ನಾವು ಆನ್‌ಲೈನ್ ಮಾಡಿದ್ದೇವೆ, ಇದರಿಂದಾಗಿ ಕ್ರೀಡಾಪಟುಗಳ ಸಮಯ ವ್ಯರ್ಥವಾಗುವುದಿಲ್ಲ. ಎಸ್‌ಎಐ ಮತ್ತು ಎನ್‌ಎಸ್‌ಎಫ್‌ ಗಳ ಪಾತ್ರವನ್ನು ಅಸ್ತಿತ್ವದಲ್ಲಿಲ್ಲದ ಹಾಗೆ ಮಾಡಲಾಗಿದೆ ಎಂದು" ಠಾಕೂರ್ ಹೇಳಿದರು.

ತಂತ್ರಜ್ಞಾನದಿಂದ ಪಾರದರ್ಶಕ ವ್ಯವಸ್ಥೆ

ತಂತ್ರಜ್ಞಾನದಿಂದ ಪಾರದರ್ಶಕ ವ್ಯವಸ್ಥೆ

ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪಿಂಚಣಿ ಯೋಜನೆಯು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅನೇಕ ಪ್ರಯೋಜನಗಳನ್ನು ಪಡೆಯಲು ವಿಫಲವಾಗಿದೆ. ಆದ್ದರಿಂದ ನಾವು ಕ್ರೀಡಾಪಟುಗಳಿಗೆ ಬಳಸಲು ಸುಲಭವಾದ ಪಾರದರ್ಶಕ ವ್ಯವಸ್ಥೆಯನ್ನು ಒದಗಿಸಿದ್ದೇವೆ. ಇದು ಬಳಕೆದಾರ ಸ್ನೇಹಿ, ತಂತ್ರಜ್ಞಾನ ಚಾಲಿತವಾಗಿದೆ ಮತ್ತು ಈ ಮೂಲಕ ನಾವು ಕನಿಷ್ಟ ಸರ್ಕಾರದ ಗರಿಷ್ಠ ಸರ್ಕಾರದ ಚಿಂತನೆಯನ್ನು ಪೂರೈಸಬಹುದು ಎಂದು ಹೇಳಿದರು.

ಭಾರತೀಯ ಕ್ರೀಡೆಗಳ ಅಭಿವೃದ್ಧಿಗಾಗಿ ಎನ್‌ಎಸ್‌ಡಿಎಫ್‌ಗೆ ಕೊಡುಗೆ ನೀಡುವಂತೆ ದೇಶವಾಸಿಗಳು, ಖಾಸಗಿ ಸಂಸ್ಥೆಗಳು ಮತ್ತು ಪಿಎಸ್‌ಯುಗಳಿಗೆ ಠಾಕೂರ್ ಮನವಿ ಮಾಡಿದರು.

ಸಹಾಯಕ್ಕೆ ಮನವಿ ಮಾಡಿದ ಸಚಿವ ಠಾಕೂರ್

ಸಹಾಯಕ್ಕೆ ಮನವಿ ಮಾಡಿದ ಸಚಿವ ಠಾಕೂರ್

"ವ್ಯಕ್ತಿಗಳು ಸಹ ಅವರು ಬಯಸಿದರೆ ಕೊಡುಗೆ ನೀಡಬಹುದು. ಎಲ್ಲಾ ದೇಶವಾಸಿಗಳು, ಕಾರ್ಪೊರೇಟ್ ವಲಯಗಳು, ಪಿಎಎಸ್‌ಯುಗಳು ಮತ್ತು ಇತರ ಎಲ್ಲ ಸಂಸ್ಥೆಗಳು ಆನ್‌ಲೈನ್‌ಗೆ ಹೋಗಿ ತಮ್ಮ ಕೊಡುಗೆಯನ್ನು ನೀಡಬೇಕು, ಇದು ಕ್ರೀಡೆಯನ್ನು ಮುಂದಕ್ಕೆ ಕೊಂಡೊಯ್ಯಲು ನಮಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

ರಾಷ್ಟ್ರೀಯ ಕ್ರೀಡಾ ದಿನದಂದು ನೀಡಲಾಗುವ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಮಾಡಬಹುದೇ ಎಂಬ ಪ್ರಶ್ನೆಗೆ, "ನಾನು ಅದನ್ನು ಉತ್ತಮ ಸಲಹೆಯಾಗಿ ತೆಗೆದುಕೊಳ್ಳುತ್ತೇನೆ, ನಾವು ಇದನ್ನು ಗಮನಿಸುತ್ತೇವೆ" ಎಂದು ಸಚಿವರು ಹೇಳಿದರು.

ಎನ್‌ಎಸ್‌ಡಿಎಫ್‌ಗೆ ನೀಡುವ ಎಲ್ಲಾ ಕೊಡುಗೆಗಳು ಆದಾಯ ತೆರಿಗೆಯಿಂದ ವಿನಾಯಿತಿಗಳನ್ನು ಪಡೆಯುತ್ತವೆ.

English summary
Union Sports Ministry has launched an online portal to facilitate sportspersons. It contains the necessary information for athletes. Sports Minister Anurag Thakur on Friday launched his department's online portal, National Sports Development Fund (NSDF) website and revised scheme of cash awards, national welfare and pensions for sportspersons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X