T20 World cup: ಟೂರ್ನಿ ಆರಂಭಕ್ಕೂ ಮುನ್ನವೇ ತಂಡದ ಜೆರ್ಸಿ ವಿವಾದ

ಭಾರತದಲ್ಲಿ ನಡೆದಿದ್ದ ಐಪಿಎಲ್‌ ಮುಗಿದಿದೆ. ಇನ್ನೇನಿದ್ದರೂ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಯ ಟಿ20 ವಿಶ್ವಕಪ್‌ ಜೂನ್‌ 2ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ.

ಈಗಾಗಲೇ ಹಲವು ತಂಡಗಳು ಆಯೋಜಿತ ದೇಶವನ್ನು ತಲುಪಿದ್ದು, ಅಭ್ಯಾಸವನ್ನು ಆರಂಭಿಸಿವೆ. ಟೂರ್ನಿ ಆರಂಭಕ್ಕೂ ಮುನ್ನವೇ ಎಲ್ಲ ತಂಡಗಳು ತಮ್ಮ ತಮ್ಮ ಜೆರ್ಸಿಯನ್ನು ಅನವಾರಣ ಮಾಡಿವೆ. ಎಲ್ಲ ತಂಡಗಳ ಜೆರ್ಸಿಯಲ್ಲಿ ಈ ಒಂದು ತಂಡದ ಜೆರ್ಸಿ ವಿವಾದಕ್ಕೆ ಕಾರಣವಾಗಿದೆ. ವಿಶ್ವಕಪ್ ಆರಂಭಕ್ಕೂ ಮುನ್ನವೇ ಐಸಿಸಿ ಈ ತಂಡದ ಜೆರ್ಸಿ ಮೇಲೆ ಕ್ರಮ ಕೈಗೊಂಡಿದೆ.

uganda Jersey Controversy Erupts Ahead of T20 World Cup

ಐಸಿಸಿ ಈ ತಂಡದ ಜೆರ್ಸಿಯನ್ನು ನಿಷೇಧಿಸಿದ್ದಲ್ಲದೇ ಹೊಸ ಜೆರ್ಸಿ ಮಾಡಲು ಸೂಚಿಸಿದೆ. ಇದೀಗ ಈ ತಂಡ ತನ್ನ ಆಟಗಾರರಿಗಾಗಿ ಹೊಸ ಜೆರ್ಸಿಯನ್ನೂ ಸಹ ಬಿಡುಗಡೆ ಮಾಡಿದೆ. ಹಾಗಿದ್ದರೆ ಆ ತಂಡ ಯಾವುದು ಜೆರ್ಸಿ ಬಿಡುಗಡೆ ಚೇಂಜ್ ಮಾಡಲು ಕಾರಣ ಏನು ಇಲ್ಲಿದೆ ನೋಡಿ.

ಜೆರ್ಸಿ ನಿಷೇಧ ಏಕೆ?

ಇನ್ನೇನು ಕೆಲವೇ ದಿನಗಳಲ್ಲಿ ಐಸಿಸಿ ಟಿ20 ವಿಶ್ವಕಪ್‌ ಆರಂಭವಾಗಲಿದೆ. ಹೀಗಾಗಿ ಅಭ್ಯಾಸ ಪಂದ್ಯಗಳನ್ನು ಸಹ ಆಯೋಜಿಸಲಾಗುತ್ತಿದೆ. ಐಸಿಸಿ ಉಗಾಂಡ ಜೆರ್ಸಿಯ ಬಗ್ಗೆ ಪ್ರಶ್ನೆ ಎತ್ತಿದ್ದಾಗ ವಿವಾದ ಆರಂಭವಾಗಿದೆ. ವಿಶ್ವಕಪ್‌ಗಾಗಿ ಉಗಾಂಡ ಬಿಡುಗಡೆ ಮಾಡಿದ ಜೆರ್ಸಿಯನ್ನು ಐಸಿಸಿ ನಿಷೇಧಿಸಿದೆ.

ಉಗಾಂಡ ತಂಡದ ಜೆರ್ಸಿಯ ತೋಳುಗಳಲ್ಲಿ ಪ್ರಾಯೋಜಕರ ಲೋಗೋ ಸ್ಪಷ್ಟವಾಗಿ ಕಾಣದೇ ಇರುವುದರಿಂದ ಈ ಜೆರ್ಸಿಯ ಬಣ್ಣವನ್ನು ಬದಲಿಸಲು ಸೂಚಿಸಿದೆ. ಉಗಾಂಡ ತಂಡದ ಜೆರ್ಸಿಯ ತೋಳುಗಳಲ್ಲಿ ಹಕ್ಕಿಯ ರೆಕ್ಕೆಗಳು ಇದ್ದವು. ಹೀಗಾಗಿ ಇದನ್ನು ಬದಲಿಸಲು ಐಸಿಸಿ ಸೂಚನೆ ನೀಡಿದೆ. ಹಳೆಯ ಜೆರ್ಸಿಗೆ ಹೋಲಿಸಿದರೆ ಶೇ 20ರಷ್ಟು ಬದಲಾವಣೆ ಮಾಡಿ ಹೊಸ ಜೆರ್ಸಿಯನ್ನು ತಯಾರಿಸಲಾಗಿದೆ ಎಂದು ಉಗಾಂಡ ಕ್ರಿಕೆಟ್ ಮಂಡಳಿ ತಿಳಿಸಿದೆ.

ಉಗಾಂಡ ತಂಡ ಈ ಜೆರ್ಸಿಯನ್ನು ಒಂದು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಜೇತರು ತಯಾರಿಸಿದ ಜೆರ್ಸಿಯನ್ನು ತಂಡಕ್ಕೆ ನೀಡಲಾಗಿದೆ. ಅಷ್ಟಕ್ಕೂ ಉಗಾಂಡದ ರಾಷ್ಟ್ರೀಯ ಪಕ್ಷಿಯಾದ 'ಗ್ರೇ ಕ್ರೌನ್ಡ್' ಕ್ರೇನ್‌ನಿಂದ ಪ್ರೇರಣೆ ಪಡೆದು ಈ ವಿನ್ಯಾಸವನ್ನು ಮಾಡಲಾಗಿದೆ. ಅಂದಹಾಗೆ ಐಸಿಸಿ ಇದೇ ಪಕ್ಷಿಯ ರೆಕ್ಕೆಗಳನ್ನು ತೆಗೆದು ಪ್ರಾಯೋಜಕರ ಲೋಗವನ್ನು ಸ್ಪಷ್ಟವಾಗಿ ಕಾಣುವಂತೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+