ಸ್ಟಬ್ಸ್-ಸ್ಟೋಯ್ನಿಸ್ ಅಬ್ಬರ, ಟ್ರೆಂಟ್ ರಾಕೆಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಸದರ್ನ್ ಬ್ರೇವ್

The Hundred: ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್‌ನಲ್ಲಿ ಸೋಮವಾರ (ಆಗಸ್ಟ್ 10) ನಡೆದ ದಿ ಹಂಡ್ರೆಡ್ ಟೂರ್ನಿಯ 29ನೇ ಪಂದ್ಯದಲ್ಲಿ ಸದರ್ನ್ ಬ್ರೇವ್ ತಂಡವು ಸ್ಟಬ್ಸ್ ಹಾಗೂ ಸ್ಟೋಯ್ನಿಸ್ ಆಕ್ರಮಣಕಾರಿ ಆಟದಿಂದ ಟ್ರೆಂಟ್ ರಾಕೆಟ್ಸ್ ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು.

ಟಾಸ್‌ ಗೆದ್ದ ಸದರ್ನ್ ಬ್ರೇವ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್‌ ಬೀಸಿದ ಟ್ರೆಂಟ್ ರಾಕೆಟ್ಸ್ ನಿಗದಿತ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್‌ಗಳನ್ನ ಕಲೆಹಾಕಿತು. ಬಳಿಕ ಬ್ರೇವ್ ಟೀಮ್ ಈ ಬೃಹತ್ ರನ್‌ಗಳ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.

The Hundred 2026 Southern Brave Beat Trent Rockets by 6 Wickets as Tristan Stubbs Stoinis Shine

ಸದರ್ನ್ ಬ್ರೇವ್ ಪರ ಬ್ಯಾಟ್ ಬೀಸಿದ ಟ್ರಿಸ್ಟಾನ್ ಸ್ಟಬ್ಸ್ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ ಅಜೇಯ 52(28) ರನ್‌ ಸಿಡಿಸಿದರೆ, ಮಾರ್ಕಸ್ ಸ್ಟೋಯ್ನಿಸ್ 46(24) ರನ್‌ಗಳನ್ನ ಚಚ್ಚಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಜೇಮೀ ಸ್ಮಿತ್ 26(18), ಮೊಯಿನ್ ಅಲಿ 17(14), ಡೇವಿಡ್ ಮಿಲ್ಲರ್ 14(10) ರನ್‌ಗಳ ಕೊಡುಗೆ ನೀಡಿದರು. ತಂಡವು 97 ಎಸೆತಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್‌ ಗಳಿಸಿ ಗೆಲುವಿನ ನಗೆ ಬೀರಿತು.

ಇದಕ್ಕೂ ಮುನ್ನ ಬ್ಯಾಟ್‌ ಬೀಸಿದ ಟ್ರೆಂಟ್ ರಾಕೆಟ್ಸ್ 5 ವಿಕೆಟ್ ನಷ್ಟಕ್ಕೆ 158 ರನ್‌ಗಳನ್ನ ಕಲೆಹಾಕಿತು. ತಂಡದ ಪರ ಮಿಚೆಲ್ ಸ್ಯಾಂಟ್ನರ್ ಅಜೇಯ 35(23), ಲೆವಿಸ್ ಗ್ರೆಗೊರಿ ಅಜೇಯ 28(18), ಫಿನ್ ಅಲೆನ್ 23(12), ಬೆನ್ ಡಕೆಟ್ 17(14), ಟಿಮ್ ಡೇವಿಡ್ 15(12), ಅನ್ಯೂರಿನ್ ಡೊನಾಲ್ಡ್ 19(9), ಸ್ಯಾಮ್ ಬಿಲ್ಲಿಂಗ್ಸ್‌ 13(12) ರನ್‌ ಗಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+