• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಮಹಿಳಾ ಆಟಗಾರ್ತಿಯ ಶಿರಚ್ಛೇದನಗೈದ ತಾಲಿಬಾನ್‌

|
Google Oneindia Kannada News

ಕಾಬೂಲ್‌, ಅಕ್ಟೋಬರ್‌ 20: ಅಫ್ಘಾನಿಸ್ತಾನದ ಜೂನಿಯರ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯ ಶಿರಚ್ಛೇದವನ್ನು ತಾಲಿಬಾನ್‌ ಮಾಡಿದೆ ಎಂದು ಕೋಚ್‌ ಒಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ ಕೋಚ್‌ ಸುರಾಯ ಅಫ್ಜಾಲಿ (ಹೆಸರು ಬದಲಾಯಿಸಲಾಗಿದೆ), "ಮಹ್‌ಜಬೀನ್‌ ಹಖೀಮಿ ಎಂಬ ಮಹಿಳಾ ಆಟಗಾರ್ತಿಯನ್ನು ಅಕ್ಟೋಬರ್‌ ಆರಂಭದಲ್ಲಿ ತಾಲಿಬಾನ್‌ ಹತ್ಯೆ ಮಾಡಿದೆ. ಆದರೆ ಈ ಬಗ್ಗೆ ಯಾರೂ ಕೂಡಾ ಮಾತನಾಡುವುದಿಲ್ಲ. ಇದು ಸುದ್ದಿ ಕೂಡಾ ಆಗಿಲ್ಲ. ಆಕೆಯ ಕುಟುಂಬಕ್ಕೆ ಈ ವಿಚಾರದ ಬಗ್ಗೆ ಎಲ್ಲಿಯೂ ಮಾತನಾಡದಂತೆ ತಾಲಿಬಾನ್‌ ಬೆದರಿಕೆಯೊಡ್ಡಿದೆ," ಎಂದು ತಿಳಿಸಿ‌ದ್ದಾರೆ.

ಮರಣದಂಡನೆ, ಅಂಗಚ್ಛೇದನ ಶಿಕ್ಷೆ: 'ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ' ಎಂದ ತಾಲಿಬಾನ್‌!ಮರಣದಂಡನೆ, ಅಂಗಚ್ಛೇದನ ಶಿಕ್ಷೆ: 'ಕೈಗಳನ್ನು ಕತ್ತರಿಸುವುದು ಬಹಳ ಅವಶ್ಯಕ' ಎಂದ ತಾಲಿಬಾನ್‌!

ಈ ಹಿಂದೆ ಅಶ್ರಫ್‌ ಘನಿ ಸರ್ಕಾರ ಪತನವಾಗುವ ಮುನ್ನ ಕಾಬೂಲ್‌ ಮುನ್ಸಿಪಾಲ್‌ ವಾಲಿಬಾನ್‌ ಕ್ಲಬ್‌ ಪರವಾಗಿ ಮಹ್‌ಜಬೀನ್‌ ಹಖೀಮಿ ಆಟವಾಡುತ್ತಿದ್ದರು. ಹಾಗೆಯೇ ಈ ಕ್ಲಬ್‌ನ ಅದ್ಭುತ ಆಟಗಾರ್ತಿ ಆಗಿದ್ದರು. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಹ್‌ಜಬೀನ್‌ ಹಖೀಮಿಯ ರುಂಡ ಮುಂಡ ಬೇರೆ ಬೇರೆಯಾಗಿರುವ ಚಿತ್ರ ಹರಿದಾಡಿತ್ತು.

ಈ ಬಗ್ಗೆ ಮಾತನಾಡಿದ ಅಫ್ಘಾನಿಸ್ತಾನ ಮಹಿಳಾ ವಾಲಿಬಾಲ್‌ ಆಟಗಾರ್ತಿಯರ ತಂಡದ ಕೋಚ್‌, "ಆಗಸ್ಟ್‌ನಲ್ಲಿ ತಾಲಿಬಾನ್‌ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆಯುವ ಮುನ್ನ ಅಫ್ಘಾನಿಸ್ತಾನದಿಂದ ಮಹಿಳಾ ತಂಡದ ಇಬ್ಬರು ಆಟಗಾರ್ತಿಯರು ಮಾತ್ರ ದೇಶವನ್ನು ಬಿಟ್ಟು ಪಲಾಯನವಾಗಲು ಸಾಧ್ಯವಾಗಿದೆ. ಆದರೆ ಮಹ್‌ಜಬೀನ್‌ ಹಖೀಮಿ ಸೇರಿದಂತೆ ಹಲವಾರು ಆಟಗಾರ್ತಿಯರು ದೇಶವನ್ನು ತೊರೆಯಲು ಸಾಧ್ಯವಾಗದೆ ಸಂಕಷ್ಟದಲ್ಲಿ ಇದ್ದಾರೆ," ಎಂದು ಹೇಳಿದ್ದಾರೆ.

ಯುಎಸ್‌ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ದಾಳಿಯನ್ನು ಮಾಡಿದೆ. ಬಳಿಕ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಈಗ ಸರ್ಕಾರವನ್ನು ರಚನೆ ಮಾಡಿದೆ. ಆ ಬಳಿಕ ದೇಶದಲ್ಲಿ ಇರುವ ಅಥ್ಲೀಟ್‌ಗಳನ್ನು ಗುರಿಯಾಗಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ವಿದೇಶದಲ್ಲಿ ಆಟವಾಡಿದ, ಮಾಧ್ಯಮದಲ್ಲಿ ಕಾಣಿಸಿಕೊಂಡ ಅಫ್ಘಾನಿಸ್ತಾನದ ಮಹಿಳಾ ವಾಲಿಬಾಲ್‌ ತಂಡದ ಆಟಗಾರ್ತಿಯರು ಗುರಿಯಾಗಿಸಿಕೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪಲಾಯನವಾಗಿರುವ ಅಥವಾ ತಲೆಮರೆಸಿಕೊಂಡಿರುವ ಅಫ್ಘಾನ್‌ ಮಹಿಳಾ ನಾಯಕರು ಯಾರು?ಪಲಾಯನವಾಗಿರುವ ಅಥವಾ ತಲೆಮರೆಸಿಕೊಂಡಿರುವ ಅಫ್ಘಾನ್‌ ಮಹಿಳಾ ನಾಯಕರು ಯಾರು?

"ವಾಲಿಬಾಲ್‌ ತಂಡದ ಎಲ್ಲಾ ಆಟಗಾರರು ಹಾಗೂ ಬೇರೆ ಮಹಿಳಾ ಆಟಗಾರರು ಈಗ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ. ಆತಂಕದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಎಲ್ಲರನ್ನೂ ದೇಶದಿಂದ ಪಲಾಯನವಾಗುವಂತೆ ಒತ್ತಡ ಹೇರಲಾಗುತ್ತಿದೆ. ಇನ್ನೂ ಅನೇಕ ಮಂದಿ ತಲೆ ಮರೆಸಿಕೊಂಡು ಜೀವಿಸುತ್ತಿದ್ದಾರೆ," ಎಂದು ಕೋಚ್‌ ಮಾಧ್ಯಮದ ಸಂದರ್ಶನದಲ್ಲಿ ಹೇಳಿದ್ದಾರೆ.

1978 ರಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳಾ ಆಟಗಾರ್ತಿಯರ ತಂಡವು ಸ್ಥಾಪನೆಯಾಗಿದೆ. ಈ ಮೂಲಕ ಮಹಿಳಾ ಸಬಲೀಕರಣದ ಭರವಸೆಯನ್ನು ಅಫ್ಘಾನಿಸ್ತಾನದಲ್ಲಿ ಹುಟ್ಟಿಸಿತ್ತು. ಆದರೆ ಈಗ ಮಹಿಳಾ ಆಟಗಾರ್ತಿಯ ಶಿರಚ್ಛೇದನಗೈದಿರುವುದು ಅಫ್ಘಾನಿಸ್ತಾನದ ಮಹಿಳೆಯರಲ್ಲಿ ಮತ್ತಷ್ಟು ಭೀತಿಯನ್ನು ಸೃಷ್ಟಿ ಮಾಡಿದೆ.

ಬೇರೆ ದೇಶಗಳ ಸಹಾಯದಿಂದ ವಾಲಿಬಾಲ್‌ ಆಟಗಾರರು ದೇಶವನ್ನು ತೊರೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಈವರೆಗೆ ಕತ್ತಾರ್‌ ಸರ್ಕಾರ ಹಾಗೂ ಎ‌ಫ್‌ಐಎಫ್‌ಎ ಸಹಾಯದಿಂದ ನೂರು ಮಂದಿ ಮಹಿಳಾ ಫುಟ್‌ಬಾಲ್‌ ಆಟಗಾರರು ದೇಶದಿಂದ ತೆರಳಿದ್ದಾರೆ. ಹಾಗೆಯೇ ನೂರು ಮಂದಿ ಮಹಿಳಾ ಫುಟ್‌ಬಾಲ್‌ ಆಟಗಾರರ ಕುಟುಂಬಸ್ಥರು ಕೂಡಾ ದೇಶದಿಂದ ತೆರಳಿದ್ದಾರೆ. ಆದರೆ ಈಗ ಅಫ್ಘಾನಿಸ್ತಾನದಲ್ಲಿ ಹಲವಾರು ಮಹಿಳಾ ವಾಲಿಬಾಲ್‌ ಆಟಗಾರರು ಬಾಕಿಯಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಆಟ, ರಾಜಕೀಯ, ಸಾಮಾಜಿಕ ಕಾರ್ಯ ಸೇರಿದಂತೆ ಎಲ್ಲಾ ಕ್ಷೇತ್ರದಿಂದ ಹೊರ ಇಡಲಾಗಿದೆ.

ತಾಲಿಬಾನ್‌ ಈ ಹಿಂದೆ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರ ರಚಿಸಿಕೊಂಡಿದ್ದಾಗಲೂ ಷರಿಯತ್‌ ನೆಪದಲ್ಲಿ ಕಠಿಣವಾದ ಶಿಕ್ಷೆಯನ್ನು ನೀಡುತ್ತಿದ್ದವು. ಈಗ ಮತ್ತೆ ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆಯುವಾಗ ತಾನು ಬದಲಾದಂತೆ ಬಿಂಬಿಸುವ ಪ್ರಯತ್ನ ಮಾಡಿದ್ದವು. ಆದರೆ ತಾಲಿಬಾನ್‌ ಎಂದಿಗೂ ಬದಲಾಗುವುದಿಲ್ಲ ಎಂಬುವುದನ್ನು ತಾನು ಹಲವಾರು ಮಂದಿಯ ಹತ್ಯೆ ಮಾಡುವ ಮೂಲಕ ತೋರಿಸಿಕೊಟ್ಟಿದೆ. ಇನ್ನು ಇತ್ತೀಚೆಗೆ ಮಾತನಾಡಿದ್ದ ತಾಲಿಬಾನ್‌ನ ನಾಯಕ ಮುಲ್ಲಾ ನೂರುದ್ದೀನ್ ತುರಾಬಿ "ಈ ಹಿಂದಿನ ಶಿಕ್ಷೆ ನಿಯಮವು ಈಗಿನ ತಾಲಿಬಾನ್ ಸರ್ಕಾರದಲ್ಲೂ ಇರಲಿದೆ," ಎಂದಿದ್ದಾರೆ. "ಭದ್ರತೆಯ ದೃಷ್ಟಿಯಿಂದ ಶಿಕ್ಷೆಯ ಸಂದರ್ಭದಲ್ಲಿ ಕೈಗಳನ್ನು ಕತ್ತರಿಸುವುದು ಬಹಳ ಮುಖ್ಯ," ಎಂದು ತಾಲಿಬಾನ್‌ನ ನಾಯಕ ಮುಲ್ಲಾ ನೂರುದ್ದೀನ್ ತುರಾಬಿ ಹೇಳಿದ್ದರು.

(ಒನ್‌ಇಂಡಿಯಾ ಸುದ್ದಿ)

English summary
Taliban behead junior volleyball player who was part of Afghan women’s national team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X