T20 World Cup: ಇಂದು ಟೀಮ್ ಇಂಡಿಯಾ ಪ್ರಕಟಿಸುವ ಸಾಧ್ಯತೆ: ಆಯ್ಕೆದಾರರ ಮುಂದೆ ಮೂರು ಪ್ರಶ್ನೆ

ಜೂನ್‌ನಲ್ಲಿ ವೆಸ್ಟ್‌ ಇಂಡೀಸ್‌ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಆಯೋಜಿಸಲಾಗುತ್ತಿದೆ. ಈ ಮೆಗಾ ಟೂರ್ನಿಗೆ ಈಗಾಗಲೇ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ಟೀಮ್ ಇಂಡಿಯಾ ಸಹ ಇಂದು ಈ ಟೂರ್ನಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಬಿಸಿಸಿಐ ಆಯ್ಕೆ ಸಮಿತಿ ಸಭೆ ನಡೆಸಿದ ಬಳಿಕ ತಂಡವನ್ನು ಇಂದು ಘೋಷಿಸುವ ಸಾಧ್ಯತೆ ಕಾಣುತ್ತಿದೆ. ಮೇ 1 ರಂದು ತಂಡವನ್ನು ಘೋಷಿಸುವುದು ಕಡ್ಡಾಯವಾಗಿದೆ.

ಈಗಾಗಲೇ ಈ ಮೆಗಾ ಟೂರ್ನಿಗೆ ಸಂಬಂಧಿಸಿದೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್‌, ಟೀಮ್ ಇಂಡಿಯಾ ಕೋಚ್‌ ರಾಹುಲ್ ದ್ರಾವಿಡ್‌, ಟೀಮ್ ಇಂಡಿಯಾ ನಾಯಕ ರಾಹುಲ್ ದ್ರಾವಿಡ್‌ ಸಭೆ ನಡಸಿದ್ದಾರೆ. ಈ ವೇಳೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದೆ ಎನ್ನಾಗುತ್ತಿದೆ.

T20 World Cup Team India likely to announce today Three questions for selectors

ಉಪನಾಯಕ ಯಾರು?

ಕ್ರಿಕ್‌ಬಜ್ ವರದಿ ಪ್ರಕಾರ, ಟಿ20 ವಿಶ್ವಕಪ್‌ಗೆ ನಡೆಯಲಿರುವ ತಂಡದ ಆಯ್ಕೆ ಸಭೆಯಲ್ಲಿ ಉಪನಾಯಕನ ಹೆಸರನ್ನು ಚರ್ಚಿಸುವ ಸಾಧ್ಯತೆ ಇದೆ. ಸದ್ಯ ಈ ಜವಾಬ್ದಾರಿಯನ್ನು ಹಾರ್ದಿಕ್ ಪಾಂಡ್ಯ ನಿಭಾಯಿಸುತ್ತಿದ್ದಾರೆ. ಆದರೆ ಸಭೆಯಲ್ಲಿ ಭಾರತ ತಂಡದ ಉಪನಾಯಕನನ್ನಾಗಿ ರಿಷಬ್ ಪಂತ್ ಅವರನ್ನು ಮರು ನೇಮಕ ಮಾಡುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ರಿಷಬ್ ಪಂತ್ ಈ ಹಿಂದೆಯೂ ಸಹ ಟೀಮ್ ಇಂಡಿಯಾದ ಉಪನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಹಾರ್ದಿಕ್‌ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಇವರ ಫ್ಲೈಟ್ ಹತ್ತುವ ಚಾನ್ಸ್‌ ಮಿಸ್ ಆಗಬಹುದು.

ಗಾಯದಿಂದ ಚೇತರಿಸಿಕೊಂಡ ಬಳಿಕ ಟೀಮ್ ಇಂಡಿಯಾದ ಸ್ಟಾರ್ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇವರು ತಾವು ಟಿ20 ವಿಶ್ವಕಪ್‌ ಆಡಲು ಸಿದ್ಧ ಎಂದು ಸಾರಿದ್ದಾರೆ. ಬ್ಯಾಟಿಂಗ್ ಹಾಗೂ ವಿಕೆಟ್‌ ಕೀಪಿಂಗ್‌ನಲ್ಲಿ ಪಂತ್‌ ಮೊದಲಿನಂತೆ ಚುರುಕುತನ ಕಂಡು ಬಂದಿದೆ. ಇನ್ನು ವಿಕೆಟ್‌ ಕೀಪರ್‌ ಆಗಿ ಪಂತ್‌ ಆಯ್ಕೆ ಮಾಡಬಹುದು ಎಂದು ಪರಿಗಣಿಸಲಾಗಿದೆ. ಆದರೆ ಒಂದು ವೇಳೆ ಇವರು ಗಾಯಕ್ಕೆ ಈಡಾದರೆ ವಿಕೆಟ್ ಕೀಪಿಂಗ್ ಮಾಡೋದು ಯಾರು ಎಂಬ ಪ್ರಶ್ನೆ ಎದ್ದಿದೆ.

T20 World Cup Team India likely to announce today Three questions for selectors

ಇದಕ್ಕೆ ಸ್ಪರ್ಧಿಗಳಾಗಿ ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಇಶಾನ್ ಕಿಶನ್, ಜಿತೇಶ್ ಶರ್ಮಾ ಅವರಂತಹ ಆಟಗಾರರಿದ್ದಾರೆ. ಈ ಆಟಗಾರರಲ್ಲಿ ಒಬ್ಬರ ಹೆಸರನ್ನು ಅಜಿತ್ ಅಗರ್ಕರ್ ಮತ್ತು ಕಂಪನಿ ಸೂಚಿಸಬಹುದು.

ಬ್ಯಾಕ್‌ಅಪ್ ಓಪನರ್‌ ಯಾರು?

ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇವರೊಂದಿಗೆ ವಿರಾಟ್ ಕೊಹ್ಲಿ ಕಣಕ್ಕೆ ಇಳಿಯಬಹುದು ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಅಮೋಘ ಪ್ರದರ್ಶನ ನೀಡುತ್ತಿದ್ದು, ಆಯ್ಕೆದಾರರ ಗಮನ ಸೆಳೆದಿದೆ. ಇವರು ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವುದು ಖಚಿತ ಎಂದು ಹೇಳಲಾಗುತ್ತಿದೆ.

T20 World Cup Team India likely to announce today Three questions for selectors

ಇವರಿಬ್ಬರೂ ತಂಡದಲ್ಲಿ ಸ್ಥಾನ ಪಡೆದರೂ ಬ್ಯಾಕಪ್ ಓಪನರ್ ತಂಡಕ್ಕೆ ಅಗತ್ಯವಿದೆ. ಇದಕ್ಕಾಗಿ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮಾ ಪೈಪೋಟಿ ನಡೆಸುತ್ತಿದ್ದಾರೆ. ಈ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಆಯ್ಕೆದಾರರಿಗೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಈ ಯುವ ಆಟಗಾರರು ಐಪಿಎಲ್‌ನಲ್ಲಿ ತಮ್ಮ ಸ್ಥಿರ ಪ್ರದರ್ಶನದಿಂದ ಗಮನ ಸೆಳೆಯುತ್ತಿದ್ದಾರೆ. ಶೀಘ್ರದಲ್ಲೇ ಆಯ್ಕೆದಾರರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು.


ಚಿಂತೆ ಹೆಚ್ಚಿಸಿದೆ ಈ ಸ್ಲಾಟ್‌

ಟೀಮ್ ಇಂಡಿಯಾದ ಬೌಲಿಂಗ್ ವಿಭಾಗವೂ ಬಲಾಢ್ಯವಾಗಿದೆ. ಜಸ್ಪ್ರಿತ್ ಬುಮ್ರಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಲಾಗುತ್ತಿದೆ. ಐಪಿಎಲ್‌ನಲ್ಲಿ ಇವರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಇನ್ನು ರಿಸ್ಟ್‌ ಸ್ಪಿನರ್‌ ಕುಲ್ದೀಪ್‌ ಯಾದವ್‌ ತಮ್ಮ ಮೋಡಿ ಮುಂದುವರೆಸಿದ್ದಾರೆ. ಇವರು ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕಾಣಿಕೆ ನೀಡಲಬಲ್ಲರು ಎಂದು ಐಪಿಎಲ್‌ನಲ್ಲಿ ಸಾಬೀತು ಪಡಿಸಿದ್ದಾರೆ.

ಬುಮ್ರಾ ಅವರಿಗೆ ಸಾಥ್‌ ನೀಡೋದು ಯಾರು ಎಂಬ ಪ್ರಶ್ನೆ ಎದ್ದಿದೆ. ಮೊಹಮ್ಮದ್ ಸಿರಾಜ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್ ಈ ಸ್ಥಾನದ ಪ್ರಮುಖ ಆಕಾಂಶಿಗಳು. ಆದರೆ, ಮಯಾಂಕ್ ಯಾದವ್‌ ಅವರನ್ನು ಈ ಸ್ಥಾನದಿಂದ ದೂರ ಇಡಲು ಆಗದು. ಇನ್ನು ಸ್ಪಿನ್‌ ಬೌಲರ್‌ಗಳಾಗಿ ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಅಕ್ಷರ್ ಪಟೇಲ್ ಆಯ್ಕೆದಾರರ ಚಿತ್ತ ಕದಿದ್ದಾರೆ. ಈ ಆಟಗಾರರಲ್ಲಿ ಯಾರಿಗೆ ಆಯ್ಕೆದಾರರ ಮಣೆ ಹಾಕುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+