ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್‌ ಇಂಡೀಸ್‌ ಪರ ಕರ್ನಾಟಕದ ಆರ್‌ಸಿಬಿ ರೊಮಾರಿಯೋ ಮಿಂಚಿನ ಆಟ: ಮನಸೋತ ಅಭಿಮಾನಿಗಳು

Romario Shepherd: ಅಹಮದಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2026 ಸೂಪರ್ 8 ಹಂತದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿವೆ. ವೆಸ್ಟ್‌ ಇಂಡೀಸ್ ಪರ ಕರ್ನಾಟಕದ ಆರ್‌ಸಿಬಿಯ ರೊಮಾರಿಯೋ ಶೆಫರ್ಡ್ ಸ್ಫೋಟಕ ಬ್ಯಾಟಿಂಗ್ ಮಾಡಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ತಂಡ ಬೃಹತ್ ರನ್‌ ಕಲೆಹಾಕಲು ಪ್ರಮುಖ ಪಾತ್ರವಹಿಸಿದರು.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ವೆಸ್ಟ್‌ ಇಂಡೀಸ್‌ ನಿಗದಿ 20 ಓವರ್‌ಗಳಿಗೆ 8 ವಿಕೆಟ್ ಕಳೆದುಕೊಂಡು 176 ರನ್‌ಗಳನ್ನು ಕಲೆಹಾಕಿತು. ಅದರಲ್ಲೂ ಸ್ಫೋಟಕ ಇನ್ನಿಂಗ್ ಆಡಿದ ರೊಮಾರಿಯೋ ಶೆಫರ್ಡ್, 37 ಎಸೆತಗಳಲ್ಲಿ 3 ಬೌಂಡರಿ, 4 ಸಕ್ಸರ್‌ಗಳೊಂದಿಗೆ ಅಜೇಯ 52 ರನ್‌ ಕಲೆಹಾಕಿದರು. ಇವರು ಐಪಿಎಲ್‌ನಲ್ಲಿ ಕರ್ನಾಟಕದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡಲಿದ್ದಾರೆ. ಕಳೆದ ಬಾರಿಯ ಸೀಸನ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಇವರು ಬ್ಲ್ಯಾಕ್‌ ಡ್ರ್ಯಾಗನ್‌ ಅಂತಲೇ ಹೆಸರುವಾಸಿಯಾಗಿದ್ದಾರೆ.

T20 world cup RCB s Romario Shines With Blazing Half-Century for West Indies Against South Africa

ದಕ್ಷಿಣ ಆಫ್ರಿಕಾ ವಿರುದ್ಧ ಮಿಂಚಿದ ಶೆಫರ್ಡ್

ಇದೀಗ ತಮ್ಮ ದೇಶದ ವೆಸ್ಟ್‌ ಇಂಡೀಸ್‌ ಪರ ಟಿ20 ವಿಶ್ವಕಪ್‌ನಲ್ಲೂ ಕೂಡ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಹಾಗೆಯೇ ಇಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡದ ಪರ ಅತೀ ಹೆಚ್ಚು ರನ್‌ ಗಳಿಸಿ ಗಮನ ಸೆಳೆದಿದ್ದಾರೆ. ಹಾಗಾದಾರೆ ಯಾರೆಲ್ಲಾ ಎಷ್ಟು ರನ್‌ಗಳನ್ನು ಬಾರಿಸಿದ್ದಾರೆ ಎನ್ನುವ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ತಿಳಿಯಿರಿ.

ವೆಸ್ಟ್‌ ಇಂಡೀಸ್‌ ಪರ ಯಾರು ಎಷ್ಟು ರನ್ ಬಾರಿಸಿದರು?

ವೆಸ್ಟ್‌ ಇಂಡೀಸ್‌ ಪರ ಬ್ಯಾಟ್‌ ಬೀಸಿದ ಜೇಸನ್ ಹೋಲ್ಡರ್ 49(31), ಬ್ರಾಂಡನ್ ಕಿಂಗ್ 21(11), ಶೆರ್ಫೇನ್ ರುದರ್‌ಫೋರ್ಡ್ 12(10), ಮ್ಯಾಥ್ಯೂ ವಾಲ್ಟರ್ ಫೋರ್ಡ್ 11(9), ರೊಮಾರಿಯೋ ಶೆಫರ್ಡ್ ಅಜೇಯ 52(37) ರನ್‌ ಸಿಡಿಸುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.

ರೊಮಾರಿಯೋ ಶೆಫರ್ಡ್‌ ಬಗ್ಗೆ ಮಾಹಿತಿ

ರೊಮಾರಿಯೋ ಶೆಫರ್ಡ್‌ ವೆಸ್ಟ್ ಇಂಡೀಸ್‌ನ ಪ್ರಮುಖ ಆಲ್‌ರೌಂಡರ್ ಆಗಿದ್ದು, ವೇಗದ ಬೌಲಿಂಗ್ ಮತ್ತು ಸ್ಪೋಟಕ ಕೆಳ-ಕ್ರಮಾಂಕದ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಗಯಾನಾದವರಾದ ಇವರು 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್, ಎಸ್‌ಆರ್‌ಹೆಚ್, ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಇದೀಗ ಇವರು ಆರ್‌ಸಿಬಿ ಪರ ಆಡುತ್ತಿದ್ದು, ಕಳೆದ ಬಾರಿ ಸಿಎಸ್‌ಕೆ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆಗಿನಿಂದ ಇವರನ್ನು ಆರ್‌ಸಿಬಿ ಬ್ಲ್ಯಾಕ್‌ ಡ್ರ್ಯಾಗನ್‌ ಅಂತಲೇ ಕರೆಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+