T20 World Cup: ವಿಶ್ವಕಪ್‌ನಲ್ಲಿ ಭಾರತ ತಂಡದ ಆಟಗಾರರು ಧರಿಸುವ ಜೆರ್ಸಿ ಇದೇ ನೋಡಿ
ಐಪಿಎಲ್ 2024ರ ಬಳಿಕ ಟಿ20 ವಿಶ್ವಕಪ್ ಶುರುವಾಗಲಿದ್ದು, ಅಭಿಮಾನಿಗಳಿಗೆ ನಿರಂತರ ಮನರಂಜನೆ ಸಿಗಲಿದೆ. ಬಿಸಿಸಿಐ ಈಗಾಗಲೇ ಟಿ20 ವಿಶ್ವಕಪ್‌ಗೆ ಭಾರತ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಭಾರತ ತಂಡ ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಧರಿಸುವ ಜೆರ್ಸಿಯ ಚಿತ್ರಗಳು ಬಹಿರಂಗವಾಗಿದ್ದು, ನೆಟ್ಟಿಗರು ಮಿಶ್ರಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಜೆರ್ಸಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವ ಮುನ್ನವೇ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ.

ವೈರಲ್ ಆಗಿರು ಚಿತ್ರಗಳಲ್ಲಿ, ಜೆರ್ಸಿಯು ವಿ-ಆಕಾರದ ಕುತ್ತಿಗೆಯ ಮೇಲೆ ತ್ರಿವರ್ಣದ ಪಟ್ಟಿಗಳನ್ನು ಹೊಂದಿರುವುದನ್ನು ನೋಡಬಹುದು. ಸಂಪೂರ್ಣ ನೀಲಿ ಬಣ್ಣಕ್ಕಿಂತ ಭಿನ್ನವಾಗಿ, ಜರ್ಸಿಯು ನೀಲಿ ಮತ್ತು ಕೇಸರಿ ಬಣ್ಣದ ಸಂಯೋಜನೆಯನ್ನು ಹೊಂದಿದೆ. ಜರ್ಸಿಯ ಮೇಲೆ ಕ್ರೀಡಾ ಉಡುಪುಗಳ ಕಂಪನಿ ಅಡಿಡಾಸ್‌ನ ಲೋಗೊವನ್ನು ನೋಡಬಹುದು.
ಮಿಶ್ರ ಪ್ರತಿಕ್ರಿಯೆ
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಜರ್ಸಿಯ ಸೋರಿಕೆಯಾದ ಚಿತ್ರಗಳನ್ನು ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಲವರು ಹೊಸ ಜೆರ್ಸಿಯನ್ನು ಶ್ಲಾಘಿಸಿದಂತೆ, ಇನ್ನೂ ಹಲವರು ಹೊಸ ಜೆರ್ಸಿಯನ್ನು ಚನ್ನಾಗಿಲ್ಲ ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು ಜರ್ಸಿಯ ವಿ-ಆಕಾರದ ಕುತ್ತಿಗೆಗೆ ಒತ್ತು ನೀಡುವ ಮೂಲಕ ಹೊಸ ವಿನ್ಯಾಸವನ್ನು ಶ್ಲಾಘಿಸಿದರು. "ಅದ್ಭುತ! ವಿ-ಆಕಾರದ ಕುತ್ತಿಗೆಯಲ್ಲಿ ಸುಂದರವಾದ ಜರ್ಸಿ." ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಜೆರ್ಸಿ ಚನ್ನಾಗಿಲ್ಲ ಎಂದು ಹೇಳಿದ್ದಾರೆ.
ಜೂನ್ 2ರಿಂದ ಟಿ20 ವಿಶ್ವಕಪ್ ಪಂದ್ಯಾವಳಿ ಆರಂಭವಾಗಲಿದ್ದು, ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎ ಆತಿಥ್ಯ ವಹಿಸಲಿದೆ. ಜೂನ್ 5ರಂದು ಭಾರತ ಐರ್ಲೆಂಡ್ ವಿರುದ್ಧ ಸೆಣೆಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ರಿಂಕು ಸಿಂಗ್, ಶುಭಮನ್ ಗಿಲ್, ಖಲೀಲ್ ಅಹ್ಮದ್, ಆವೇಶ್ ಖಾನ್.












Click it and Unblock the Notifications