ಟಿ20 ವಿಶ್ವಕಪ್: ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಭಾರತದ ವಾರ್ಮಪ್ ಪಂದ್ಯಗಳು
ದುಬೈ, ಸೆ. 8: ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಗಳಲ್ಲಿ ಭಾರತದ ಎದುರಾಳಿಗಳು ಫಿಕ್ಸ್ ಆಗಿದ್ದಾರೆ. ವಿಶ್ವಕಪ್‌ಗೆ ಮುನ್ನ ಭಾರತ ಎರಡು ವಾರ್ಮಪ್ ಮ್ಯಾಚ್‌ಗಳನ್ನು ಆಡಲಿದೆ. ಅಕ್ಟೋಬರ್ 17 ಮತ್ತು ಅಕ್ಟೋಬರ್ 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಭಾರತ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಈ ಬಾರಿಯ ಟಿ20 ಕಪ್ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಒಟ್ಟು 16 ತಂಡಗಳು ಆಡುತ್ತಿವೆ. ಟೂರ್ನಿ ಶುರುವಾಗುವ ಮುನ್ನ ಈ 16 ತಂಡಗಳಿಗೆ ವಾರ್ಮಪ್ ಪಂದ್ಯಗಳನ್ನು ಐಸಿಸಿ ನಿಗದಿ ಮಾಡಿದೆ. ಅಭ್ಯಾಸ ಪಂದ್ಯಗಳು ಅಕ್ಟೋಬರ್ 10ರಿಂದ 19ವರೆಗೂ ನಡೆಯಲಿದೆ.
ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಆಡುವ ತಂಡಗಳಿಗೆ ವಾರ್ಮಪ್ ಪಂದ್ಯಗಳು ಅಕ್ಟೋಬರ್ 10ರಿಂದ 13ರವರೆಗೂ ನಡೆಯಲಿದೆ. ಸೂಪರ್-12ರ ಹಂತದಲ್ಲಿ ನೇರವಾಗಿ ಕ್ವಾಲಿಫೈ ಆಗಿರುವ ತಂಡಗಳಿಗೆ ವಾರ್ಮಪ್ ಪಂದ್ಯಗಳು ಅಕ್ಟೋಬರ್ 17ರಿಂದ 19ರವರೆಗೆ ನಡೆಯಲಿದೆ.

ಟಿ20 ವಿಶ್ವಕಪ್ ವಾರ್ಮಪ್ ಪಂದ್ಯಗಳು:
ಅಕ್ಟೋಬರ್ 10:
ವೆಸ್ಟ್ ಇಂಡೀಸ್ ವರ್ಸಸ್ ಯುಎಇ
ಸ್ಕಾಟ್ಲೆಂಡ್ ವರ್ಸಸ್ ನೆದರ್‌ಲೆಂಡ್ಸ್
ಶ್ರೀಲಂಕಾ ವರ್ಸಸ್ ಜಿಂಬಾಬ್ವೆ
ಅಕ್ಟೋಬರ್ 11:
ನಮೀಬಿಯಾ ವರ್ಸಸ್ ಐರ್ಲೆಂಡ್
ಅಕ್ಟೋಬರ್ 12:
ವೆಸ್ಟ್ ಇಂಡೀಸ್ ವರ್ಸಸ್ ನೆದರ್‌ಲೆಂಡ್ಸ್

ಅಕ್ಟೋಬರ್ 13:
ಜಿಂಬಾಬ್ವೆ ವರ್ಸಸ್ ನಮೀಬಿಯಾ
ಶ್ರೀಲಂಕಾ ವರ್ಸಸ್ ಐರ್ಲೆಂಡ್
ಸ್ಕಾಟ್ಲೆಂಡ್ ವರ್ಸಸ್ ಯುಎಇ
ಅಕ್ಟೋಬರ್ 17:
ಆಸ್ಟ್ರೇಲಿಯಾ ವರ್ಸಸ್ ಭಾರತ
ಇಂಗ್ಲೆಂಡ್ ವರ್ಸಸ್ ಪಾಕಿಸ್ತಾನ
ನ್ಯೂಜಿಲೆಂಡ್ ವರ್ಸಸ್ ಸೌತ್ ಆಫ್ರಿಕಾ
ಅಫ್ಘಾನಿಸ್ತಾನ ವರ್ಸಸ್ ಬಾಂಗ್ಲಾದೇಶ
ಅಕ್ಟೋಬರ್ 19:
ಅಫ್ಘಾನಿಸ್ತಾನ ವರ್ಸಸ್ ಪಾಕಿಸ್ತಾನ,
ನ್ಯೂಜಿಲೆಂಡ್ ವರ್ಸಸ್ ಭಾರತ
ಬಾಂಗ್ಲಾದೇಶ ವರ್ಸಸ್ ಸೌತ್ ಆಫ್ರಿಕಾ
ಅಕ್ಟೋಬರ್ 17ರಂದು ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯ ಗಾಬಾ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು, ನ್ಯೂಜಿಲೆಂಡ್ ಮತ್ತು ಭಾರತದ ಪಂದ್ಯವೂ ಅದೇ ಗಾಬಾದಲ್ಲೇ ನಡೆಯಲಿದೆ.
ಈ ಅಭ್ಯಾಸ ಪಂದ್ಯಗಳನ್ನು ವೀಕ್ಷಿಸಲು ಸ್ಟೇಡಿಯಂಗೆ ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಇಲ್ಲ.
ವಿಶ್ವಕಪ್ ಪಂದ್ಯಾವಳಿ ಹೇಗೆ?
ಕಳೆದ ಬಾರಿಯ ವಿಶ್ವಕಪ್ ನಡೆದ ಮಾದರಿಯಲ್ಲೇ ಈ ಬಾರಿಯೂ ಟೂರ್ನಿ ನಡೆಯುತ್ತದೆ. ಮೊದಲಿಗೆ ವಿಶ್ವದೆಲ್ಲೆಡೆಯಿಂದ ಅರ್ಹತೆ ಪಡೆದ ನಾಲ್ಕು ತಂಡಗಳು ಹಾಗೂ ಕಳೆದ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಿಂದ ನಿರ್ಗಮಿಸಿದ ನಾಲ್ಕು ತಂಡಗಳು ಹೀಗೆ ಎಂಟು ತಂಡಗಳು ಗ್ರೂಪ್ ಹಂತದಲ್ಲಿ ಸೆಣಸಲಿವೆ.
ಈ ವೇಳೆ ಎರಡು ಗುಂಪುಗಳಾಗಿ ಮಾಡಲಾಗಿದೆ. ಎ ಗುಂಪಿನಲ್ಲಿ ಶ್ರೀಲಂಕಾ, ನೆದರ್‌ಲೆಂಡ್ಸ್, ನಮೀಬಿಯಾ ಮತ್ತು ಯುಎಇ ತಂಡಗಳಿವೆ. ಬಿ ಗುಂಪಿನಲ್ಲಿ ವೆಸ್ಟ್ ಇಂಡೀಸ್, ಜಿಂಬಾಬ್ವೆ, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ.
ಈ ಎರಡು ಗುಂಪುಗಳಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೇರುತ್ತವೆ. ಒಟ್ಟು 8 ತಂಡಗಳು ಈಗಾಗಲೇ ನೇರವಾಗಿ ಸೂಪರ್-12 ಹಂತದಲ್ಲಿವೆ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಸೌತ್ ಆಫ್ರಿಕಾ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳ ಹಾಗೂ ಗ್ರೂಪ್ ಹಂತದಿಂದ ಬಂದ 4 ತಂಡಗಳು ಹೀಗೆ 12 ತಂಡಗಳು ಸೂಪರ್-12ನಲ್ಲಿ ಸೆಣಸಲಿವೆ.
ಸೂಪರ್-12 ಹಂತದಲ್ಲಿ 12 ತಂಡಗಳನ್ನು ತಲಾ 6 ತಂಡಗಳಾಗಿ ಎರಡು ಗುಂಪು ಮಾಡಲಾಗಿದೆ. ಮೊದಲ ಗುಂಪಿನಲ್ಲಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳಿವೆ. ಎರಡನೇ ಗುಂಪಿನಲ್ಲಿ ಭಾರತ, ಸೌತ್ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳಿವೆ.
ಭಾರತಕ್ಕೆ ಪಾಕ್ ಮೊದಲ ಎದುರಾಳಿ:
ಕಳೆದ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದವು. ಮೊದಲ ಪಂದ್ಯವೂ ಅವುಗಳ ಮಧ್ಯೆಯೇ ಆಗಿದ್ದು. ಪಾಕಿಸ್ತಾನ ವಿರುದ್ಧ ಭಾರತ ಹೀನಾಯವಾಗಿ ಸೋತಿತ್ತು. ಪರಿಣಾಮವಾಗಿ ಆ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲಾಗದೇ ನಾಕೌಟ್ ತಲುಪಲು ಭಾರತ ವಿಫಲವಾಗಿತ್ತು. ಈ ಬಾರಿಯೂ ಕೂಡ ಭಾರತದ ಮೊದಲ ಪಂದ್ಯ ಪಾಕಿಸ್ತಾನ ವಿರುದ್ಧವೇ ಆಗುತ್ತಿದೆ. ಮೆಲ್ಬೋರ್ನ್‌ನಲ್ಲಿಇ ಅಕ್ಟೋಬರ್ 23ರಂದು ಈ ಪಂದ್ಯ ನಡೆಯಲಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications