• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಕೊಹ್ಲಿಯೇ T20i ವಿಶ್ವಕಪ್ ಆಕರ್ಷಣೆಯ ಕೇಂದ್ರ ಬಿಂದು: ಥ್ರಿಲ್ಲಾದ ಫ್ಯಾನ್ಸ್

|
Google Oneindia Kannada News

ಸುಮಾರು ಮೂರು ವರ್ಷ, 83 ಇನ್ನಿಂಗ್ಸ್ ಬಳಿಕ ಕೊನೆಗೂ ಕಿಂಗ್ ಕೊಹ್ಲಿ 100ರನ್ ಗಡಿ ದಾಟಿದ್ದೇ ದಾಟಿದ್ದು, ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಏಷ್ಯಾಕಪ್ ಈ ಇನ್ನಿಂಗ್ಸ್ ನಂತರ ನಡೆದ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20ಐ ಪಂದ್ಯಗಳ ಸರಣಿಯ ಕೊನೆ ಪಂದ್ಯದಲ್ಲಿ ಮತ್ತೊಮ್ಮೆ ಕೊಹ್ಲಿ ಆರ್ಭಟಿಸಿದ್ದು ಅಭಿಮಾನಿಗಳಿಗೆ ಹರ್ಷ ತಂದಿದೆ. ಇದರ ಬೆನ್ನಲ್ಲೇ ಟಿ20ಐ ವಿಶ್ವಕಪ್ ತಯಾರಿಯಲ್ಲಿರುವ ಆಸ್ಟ್ರೇಲಿಯಾಕ್ಕೆ ಈಗ ಪ್ರೇಕ್ಷಕರನ್ನು ಮೈದಾನದತ್ತ ಆಕರ್ಷಿಸಲು ಬಳಸಿರುವ ಪ್ರಚಾರ ಅಭಿಯಾನದಲ್ಲಿ ಕಿಂಗ್ ಕೊಹ್ಲಿಯೇ ಎದ್ದು ಕಾಣುತ್ತಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ಪೋಸ್ಟರ್, ಪ್ರಚಾರ ವಿಡಿಯೋ ನೋಡಿದ ಅಭಿಮಾನಿಗಳು ವಿಶ್ವ ಕ್ರಿಕೆಟ್ ಲೋಕದ ಏಕೈಕ ರಾಯಭಾರಿ Face of world cricket ಎಂದು ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ಸದ್ಯಕ್ಕೆ ಮೆಲ್ಬೋರ್ನ್ ಮೈದಾನದ ಮುಂದೆ ಎದ್ದು ಕಾಣುವ ಕೊಹ್ಲಿಯ ಬೃಹತ್ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.

ಈ ಮುಂಚೆ ಟಿ20 ವಿಶ್ವಕಪ್ ಪ್ರಚಾರಕ್ಕಾಗಿ ಟೀಂ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಇರುವ ವಿಡಿಯೋವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಬಳಸಿಕೊಂಡಿತ್ತು. ಈ ವಿಡಿಯೋ ಕೂಡಾ ಹಿಟ್ ಆಗಿತ್ತು. ಇಂದಿನ ಮಟ್ಟಿಗೆ ಕೊಹ್ಲಿ ಕಟೌಟ್, ಪೋಸ್ಟರ್ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ಸುದ್ದಿಯಾಗಿದೆ.

India squad for T20 World Cup : ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ಪ್ರಕಟIndia squad for T20 World Cup : ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ಪ್ರಕಟ

ಇನ್ನು ಕೊಹ್ಲಿ ಕಟೌಟ್, ಪೋಸ್ಟರ್ ವಿಷಯಕ್ಕೆ ಮರಳಿದರೆ, ಅಭಿಮಾನಿಗಳು ಟ್ವೀಟ್ ಮಾಡಿ ಸಂಭ್ರಮಪಟ್ಟಿದ್ದೇಕೆ ಎಂಬುದನ್ನು ನೋಡಿ

100 ಪಂದ್ಯಗಳ ಗಡಿ ದಾಟಿರುವ ಏಕೈಕ ಕ್ರಿಕೆಟರ್

100 ಪಂದ್ಯಗಳ ಗಡಿ ದಾಟಿರುವ ಏಕೈಕ ಕ್ರಿಕೆಟರ್

ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೂರು ಮಾದರಿಯಲ್ಲೂ 100 ಪಂದ್ಯಗಳ ಗಡಿ ದಾಟಿರುವ ಏಕೈಕ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೊಹ್ಲಿ, 71ನೇ ಅಂತಾರಾಷ್ಟ್ರೀಯ ಶತಕ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ. ರನ್ ಗಳಿಕೆಯಲ್ಲೂ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಕೊಹ್ಲಿ ಅಂಕಿ ಅಂಶ: 107 ಪಂದ್ಯ; 99 ಇನ್ನಿಂಗ್ಸ್; 27 ಬಾರಿ ನಾಟೌಟ್; 3660 ರನ್; ಅಜೇಯ 122 ಗರಿಷ್ಠ ರನ್; 50.83 ರನ್ ಸರಾಸರಿ; 138.06 ಸ್ಟ್ರೈಕ್ ರೇಟ್; 33 ಅರ್ಧಶತಕ; 324 ಬೌಂಡರಿ; 108 ಸಿಕ್ಸರ್

ಟಿ20ಐ ವಿಶ್ವಕಪ್ ಪಂದ್ಯಾವಳಿಗೆ ಅಭ್ಯಾಸ

ಟಿ20ಐ ವಿಶ್ವಕಪ್ ಪಂದ್ಯಾವಳಿಗೆ ಅಭ್ಯಾಸ

ಟಿ20ಐ ವಿಶ್ವಕಪ್ ಪಂದ್ಯಾವಳಿಗೆ ಅಭ್ಯಾಸ ಎಂಬಂತೆ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಆಡಲಿದ್ದು ನಂತರ ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 17 ಮತ್ತು ಅಕ್ಟೋಬರ್ 19ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಭಾರತ ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಕ್ರಿಕೆಟ್ ಬ್ಯಾಟ್ ಹಿಡಿಯದೆ ತಿಂಗಳು ಕಳೆದಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ಪಂದ್ಯಗಳಲ್ಲಿ ಪ್ರಮುಖವಾಗಿ ಪಾಕಿಸ್ತಾನ ವಿರುದ್ಧ ಎಂಆರ್‌ಎಫ್‌ ಗೋಲ್ಡ್ ವಿಝಾರ್ಡ್ ಗುಣಮಟ್ಟದ ವಿಶೇಷ ಬ್ಯಾಟ್ ಹಿಡಿದು ಕಣಕ್ಕಿಳಿದಿದ್ದರು. ಈಗ ಇದೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಕ್ಟೋಬರ್ 23ರಂದು ಮುಖಾಮುಖಿಯಾಗಲಿದ್ದು, ಕೊಹ್ಲಿ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣು ಸಹಜವಾಗಿ ನೆಟ್ಟಿರುತ್ತದೆ.

ಫೇಸ್ ಆಫ್ ವರ್ಲ್ಡ್ ಕ್ರಿಕೆಟ್

ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಒಟ್ಟು 16 ತಂಡಗಳು ಆಡುತ್ತಿವೆ. ಟೂರ್ನಿ ಶುರುವಾಗುವ ಮುನ್ನ ಈ 16 ತಂಡಗಳಿಗೆ ವಾರ್ಮಪ್ ಪಂದ್ಯಗಳನ್ನು ಐಸಿಸಿ ನಿಗದಿ ಮಾಡಿದೆ. ಅಭ್ಯಾಸ ಪಂದ್ಯಗಳು ಅಕ್ಟೋಬರ್ 10ರಿಂದ 19ವರೆಗೂ ನಡೆಯಲಿದೆ.

ಎಲ್ಲೆಡೆ ಕೊಹ್ಲಿ, ನಿಜಕ್ಕೂ ಫೇಸ್ ಆಫ್ ವರ್ಲ್ಡ್ ಕ್ರಿಕೆಟ್ ಎಂದ ಫ್ಯಾನ್

ವಿಶ್ವ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್

ಮೆಲ್ಬೋರ್ನ್ ಮೈದಾನದ ಮುಂದೆ ಕೊಹ್ಲಿ ಪೋಸ್ಟರ್, ವಿಶ್ವ ಕ್ರಿಕೆಟ್ ಲೋಕದ ಸೂಪರ್ ಸ್ಟಾರ್.

ವಿಶ್ವದೆಲ್ಲೆಡೆಯಿಂದ ಅರ್ಹತೆ ಪಡೆದ ನಾಲ್ಕು ತಂಡಗಳು ಹಾಗೂ ಕಳೆದ ಟಿ20 ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಿಂದ ನಿರ್ಗಮಿಸಿದ ನಾಲ್ಕು ತಂಡಗಳು ಹೀಗೆ ಎಂಟು ತಂಡಗಳು ಗ್ರೂಪ್ ಹಂತದಲ್ಲಿ ಸೆಣಸಲಿವೆ. ಈ ವೇಳೆ ಎರಡು ಗುಂಪುಗಳಾಗಿ ಮಾಡಲಾಗಿದೆ.3 ವರ್ಷಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ, ಮುಗಿಲು ಮುಟ್ಟಿದ ಹರ್ಷ

ಕೊಹ್ಲಿ ಕ್ರೇಜ್

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಹಾಗೂ ಕೊಹ್ಲಿ ಕ್ರೇಜ್- ನೋಡಿ ಎಂದ ಫ್ಯಾನ್ಸ್.

ಟಿ20 ವಿಶ್ವಕಪ್ 2022ಗಾಗಿ ಟೀಂ ಇಂಡಿಯಾ ರೋಹಿತ್ ಶರ್ಮ(ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷ್ ದೀಪ್ ಸಿಂಗ್.

ಕೇರಳದಲ್ಲಿ ಕೊಹ್ಲಿ ಬೃಹತ್ ಕಟೌಟ್

ಕೇರಳದಲ್ಲಿ ಕೊಹ್ಲಿ ಬೃಹತ್ ಕಟೌಟ್, ಆಸ್ಟ್ರೇಲಿಯಾದಲ್ಲಿ ಪೋಸ್ಟರ್.

ಕ್ರಿಕೆಟ್ ಬ್ಯಾಟ್ ಹಿಡಿಯದೆ ತಿಂಗಳು ಕಳೆದಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ಪಂದ್ಯಗಳಲ್ಲಿ ಪ್ರಮುಖವಾಗಿ ಪಾಕಿಸ್ತಾನ ವಿರುದ್ಧ ಎಂಆರ್‌ಎಫ್‌ ಗೋಲ್ಡ್ ವಿಝಾರ್ಡ್ ಗುಣಮಟ್ಟದ ವಿಶೇಷ ಬ್ಯಾಟ್ ಹಿಡಿದು ಕಣಕ್ಕಿಳಿದಿದ್ದರು. ಈಗ ಇದೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅಕ್ಟೋಬರ್ 23ರಂದು ಮುಖಾಮುಖಿಯಾಗಲಿದ್ದು, ಕೊಹ್ಲಿ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣು ಸಹಜವಾಗಿ ನೆಟ್ಟಿರುತ್ತದೆ.

ಸೂಪರ್-12 ಹಂತ

ಒಟ್ಟು 8 ತಂಡಗಳು ಈಗಾಗಲೇ ನೇರವಾಗಿ ಸೂಪರ್-12 ಹಂತದಲ್ಲಿವೆ. ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ, ಸೌತ್ ಆಫ್ರಿಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳ ಹಾಗೂ ಗ್ರೂಪ್ ಹಂತದಿಂದ ಬಂದ 4 ತಂಡಗಳು ಹೀಗೆ 12 ತಂಡಗಳು ಸೂಪರ್-12ನಲ್ಲಿ ಸೆಣಸಲಿವೆ.

ಕ್ರಿಕೆಟ್ ಪ್ರೇಮಿಗಳು ಎಲ್ಲೇ ಹೋದರೂ ಕೊಹ್ಲಿ ಸೆಳೆಯದೇ ಬಿಡುವುದಿಲ್ಲ
English summary
Virat Kohli's fandom knows no boundaries. Being one of the most senior players in the Indian team, he is the face of Team India, and thus it comes as no surprise that he will be part of the promotion campaign of the T20 World Cup 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X