Suryakumar Yadav: ಸೂರ್ಯಕುಮಾರ್ ಯಾದವ್ ವಿಡಿಯೋ ವೈರಲ್! ಏನಿದೆ ವಿಡಿಯೋದಲ್ಲಿ?
ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಹಾಗೇ ಟಿ20 ವಿಶ್ವಕಪ್ ಗೆದ್ದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ ನಮ್ಮ ಭಾರತ ತಂಡದ ಆಟಗಾರರು. ಅದರಲ್ಲೂ ಭಾರತಕ್ಕೆ ಕಪ್ ತಂದುಕೊಡುವಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದಿದ್ದ ಮಸ್ತ್ ಕ್ಯಾಚ್ ದೊಡ್ಡ ಸಹಾಯ ಮಾಡಿತ್ತು. ಹೀಗಿದ್ದಾಗಲೇ ಇದೇ ಸೂರ್ಯಕುಮಾರ್ ಯಾದವ್ ಅವರ ವಿಡಿಯೋ ಒಂದು ಫುಲ್ ವೈರಲ್ ಆಗುತ್ತಿದೆ!
ಭಾರತ ತಂಡ ದಕ್ಷಿಣ ಆಫ್ರಿಕಾ ಟೀಂ ವಿರುದ್ಧ, ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಇನ್ನೇನು ಕೊನೆಯ ಓವರ್ ಹಾಕುವಾಗ 16 ರನ್ ಮಾತ್ರ ಬೇಕಿತ್ತು. ಆಗ ಸಿಕ್ಸ್ ಹೋಗುತ್ತಿದ್ದ ಬಾಲ್‌ನ ಬೌಂಡರಿ ಲೈನ್ ಬಳಿ ತಡೆದಿದ್ದ ಸೂರ್ಯಕುಮಾರ್ ಯಾದವ್, ಅದನ್ನ ಕ್ಯಾಚ್ ಕೂಡ ಹಿಡಿದು ಹೀರೋ ಆಗಿಬಿಟ್ಟರು. ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಸಮೀಪ ಎಗರಿ ಕ್ಯಾಚ್ ಹಿಡಿದು ಭಾರತ ತಂಡದ ಗೆಲುವಿಗೆ ನೆರವಾಗಿ ನಿಂತರು. ಹೀಗಿದ್ದಾಗ ಭಾರತದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಇಡೀ ಶತಕೋಟಿ ಭಾರತೀಯರು ಸಜ್ಜಾಗಿ ನಿಂತಿರುವ ಸಮಯಕ್ಕೇ ಸೂರ್ಯಕುಮಾರ್ ಯಾದವ್ ವಿಡಿಯೋ ವೈರಲ್ ಆಗುತ್ತಿದೆ! ಆ ವಿಡಿಯೋ ಇಲ್ಲಿದೆ ಮುಂದೆ ನೋಡಿ.

ಸೂರ್ಯಕುಮಾರ್ ಯಾದವ್ ವಿಡಿಯೋ...
ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯ ಗೆದ್ದು ಹೊಸ ಇತಿಹಾಸವನ್ನ ನಿರ್ಮಿಸಿ ಭಾರತಕ್ಕೆ ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಬಂದು ಇಳಿದ ಭಾರತೀಯ ತಂಡಕ್ಕೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಹೀಗಿದ್ದಾಗ ಸೂರ್ಯಕುಮಾರ್ ಯಾದವ್ ಈ ಸಮಯದಲ್ಲೇ ರೋಡ್ ಶೋ ಶುರುವಾಗುವ ಮೊದಲು, ಭಾರತ ತಂಡದ ಆಟಗಾರರು ಉಳಿದುಕೊಂಡಿದ್ದ ಹೋಟೆಲ್ ಹೊರಗೆ ಡಾನ್ಸ್ ಮಾಡಿದ್ದಾರೆ. ಮಸ್ತ್ ಮಸ್ತ್ ಸ್ಟೆಪ್ ಹಾಕಿ ತಾವು ಎಷ್ಟು ಕೂಲ್ ಕೂಲ್ ಅನ್ನೋದನ್ನ ಸೂರ್ಯಕುಮಾರ್ ಯಾದವ್ ಈಗ ಸಾಬೀತು ಮಾಡಿದ್ದಾರೆ. ವಿಡಿಯೋ ಮುಂದೆ ಇದೆ ನೋಡಿ.
Suryakumar Yadav dances at Delhi’s ITC Maurya.#IndianCricketTeam #T20WorldCup pic.twitter.com/PnAuNZ6OWr
— Vani Mehrotra (@vani_mehrotra) July 4, 2024
ಸೂರ್ಯಕುಮಾರ್ ಯಾದವ್ ಆಸ್ತಿ ವಿವರ!
1990ರ ಸೆಪ್ಟೆಂಬರ್ 14 ರಂದು ಹುಟ್ಟಿದ ಸೂರ್ಯಕುಮಾರ್ ಯಾದವ್ ಅವರು 2008 ರಿಂದ ಕೂಡ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಅವರಿಗೆ ಈ ರೀತಿಯ ಖ್ಯಾತಿ ಬಂದಿದ್ದು 3-4 ವರ್ಷಗಳಿಂದ. ಭಾರತದ ಪರ ಒಟ್ಟು 68 ಟಿ20 ಪಂದ್ಯ ಸೇರಿ 37 ಏಕದಿನ ಪಂದ್ಯ, 1 ಟೆಸ್ಟ್ ಮ್ಯಾಚ್ ಆಡಿರುವ ಸೂರ್ಯಕುಮಾರ್ ಯಾದವ್ ಬಳಿ ಕೋಟಿ ಕೋಟಿ ಆಸ್ತಿ ಇದೆ. ಈಗಿನ ಮಾಹಿತಿಗಳ ಪ್ರಕಾರ ಒಟ್ಟಾರೆ 55 ಕೋಟಿ ರೂಪಾಯಿ ಆಸ್ತಿ ಒಡೆಯ ಸೂರ್ಯಕುಮಾರ್ ಯಾದವ್.












Click it and Unblock the Notifications