IPL 2025: ಹೈದರಾಬಾದ್‌ನಿಂದ ಹೊರಹೋಗುವ ಬೆದರಿಕೆ ಹಾಕಿದ ಸನ್‌ರೈಸರ್ಸ್ ಹೈದಾರಾಬಾದ್ ತಂಡ!

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ಸನ್‌ರೈಸರ್ಸ್ ಹೈದರಾಬಾದ್ ತಂಡದ ತವರು ಅಂಗಳವಾಗಿದೆ. ಕಳೆದ ಆವೃತ್ತಿಯಿಂದ ಈ ಅಂಗಳದಲ್ಲಿ ಎಸ್‌ಆರ್ ಎಚ್‌ ರನ್ ಹೊಳೆಯನ್ನೇ ಹರಿಸುತ್ತಿದೆ. ಆದರೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಜೊತೆಗಿನ ಮನಸ್ತಾಪದಿಂದಾಗಿ ಇದೀಗ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯಗಳನ್ನು ಸ್ಥಳಾಂತರಿಸುವ ಎಚ್ಚರಿಕೆ ಕೊಟ್ಟಿದೆ.

ಉಚಿತ ಟಿಕೆಟ್‌ ಕುರಿತಂತೆ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಮತ್ತು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ. ಎಚ್‌ಸಿಎ ಉನ್ನತ ಅಧಿಕಾರಿಗಳ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲಿಂಗ್‌ನಿಂದ ಫ್ರಾಂಚೈಸಿ ಅಸಮಾಧಾನಗೊಂಡಿದೆ ಎಂದು ವರದಿಯಾಗಿದ್ದು, ಬೇರೆ ಕ್ರೀಡಾಂಗಣದಲ್ಲಿ ತಮ್ಮ ಉಳಿದ ತವರು ಪಂದ್ಯಗಳನ್ನು ಆಡುವ ಬಗ್ಗೆ ಚಿಂತನೆ ಮಾಡುವಂತಾಗಿದೆ ಎನ್ನಲಾಗಿದೆ.

Sunrisers hyderabad shifting home games hca feud

ಅಧಿಕಾರಿಗಳ ಬಗ್ಗೆ ಬೇಸರ

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್‌ನ ಜನರಲ್ ಮ್ಯಾನೇಜರ್ ಶ್ರೀನಾಥ್ ಟಿಬಿ, ಎಚ್‌ಸಿಎ ಖಜಾಂಚಿ ಸಿಜೆ ಶ್ರೀನಿವಾಸ್ ರಾವ್ ಅವರಿಗೆ ಪತ್ರ ಬರೆದಿದ್ದು ಎಚ್‌ಸಿಎ ನಡವಳಿಕೆಯ ಬಗ್ಗೆ ಫ್ರಾಂಚೈಸಿಯ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಎಚ್‌ಸಿಎ ಅಧ್ಯಕ್ಷರ ನಡವಳಿಕೆಗಳು ಸನ್‌ರೈಸರ್ಸ್ ನಿಮ್ಮ ಕ್ರೀಡಾಂಗಣದಲ್ಲಿ ಆಡುವುದನ್ನು ನೀವು ಬಯಸುವುದಿಲ್ಲ ಎನ್ನುವುದನ್ನು ಸೂಚಿಸುತ್ತವೆ. ಒಂದು ವೇಳೆ ಹಾಗೇನಾದರೂ ಇದ್ದರೆ ಲಿಖಿತವಾಗಿ ನನಗೆ ತಿಳಿಸಿ, ನಾವು ಬೇರೆ ಸ್ಥಳಕ್ಕೆ ಹೋಗಬೇಕೆಂದು ನೀವು ಬಯಸುತ್ತೀರಿ ಎಂದು ನಾವು ಬಿಸಿಸಿಐ, ತೆಲಂಗಾಣ ಸರ್ಕಾರ ಮತ್ತು ನಮ್ಮ ನಿರ್ವಹಣೆಗೆ ತಿಳಿಸಬಹುದು ಮತ್ತು ನಾವು ಸ್ಥಳಾಂತರಗೊಳ್ಳುತ್ತೇವೆ ಎಂದು ಶ್ರೀನಾಥ್ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ.

ಕಳೆದ ಆವೃತ್ತಿಯಿಂದಲೂ ಎಚ್‌ಸಿಎ ಮತ್ತು ಫ್ರಾಂಚೈಸಿ ನಡುವೆ ಈ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ದಿನದಂದು ಎಚ್‌ಸಿಎ ಪ್ರತಿನಿಧಿಗಳು ಬಾಕ್ಸ್‌ಗಳನ್ನು ಲಾಕ್ ಮಾಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ಹಲವು ವರ್ಷಗಳಿಂದ ಎಚ್‌ಸಿಎಗೆ 3,900 ಉಚಿತ ಟಿಕೆಟ್‌ಗಳಲ್ಲಿ 50 ಉಚಿತ ಟಿಕೆಟ್‌ಗಳನ್ನು (F12A ಬಾಕ್ಸ್) ಹಂಚಿಕೆ ಮಾಡಲಾಗಿದೆ. ಆದರೆ ಈಗ ಬಾಕ್ಸ್ ಸಾಮರ್ಥ್ಯ ಕೇವಲ 30 ಎಂದು ಹೇಳಿಕೊಳ್ಳುತ್ತಿದ್ದೀರಿ ಮತ್ತು ಬೇರೆ ಬಾಕ್ಸ್‌ನಲ್ಲಿ ಹೆಚ್ಚುವರಿಯಾಗಿ 20 ಉಚಿತ ಟಿಕೆಟ್‌ಗಳನ್ನು ಕೇಳುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕ್ರೀಡಾಂಗಣಕ್ಕೆ ಸೂಕ್ತವಾದ ಬಾಡಿಗೆಯನ್ನು ಪಾವತಿಸುತ್ತೇವೆ ಮತ್ತು ಐಪಿಎಲ್ ಅವಧಿಯಲ್ಲಿ, ಕ್ರೀಡಾಂಗಣವು ನಮ್ಮ ಅಧಿಕಾರ ವ್ಯಾಪ್ತಿಯಲ್ಲಿದೆ. ಆದರೆ ಕೊನೆಯ ಪಂದ್ಯದಲ್ಲಿ, ನೀವು ಎಫ್‌3 ಬಾಕ್ಸ್ ಅನ್ನು ಲಾಕ್ ಮಾಡಿದ್ದೀರಿ, 20 ಹೆಚ್ಚುವರಿ ಉಚಿತ ಟಿಕೆಟ್ ಕೊಡದೇ ಇದ್ದರೆ ಬಾಕ್ಸ್‌ ತೆರೆಯಲ್ಲ ಎಂದು ಹೇಳಿದ್ದೀರಿ, ಇದು ವೃತ್ತಿಪರವಲ್ಲದ ನಡವಳಿಕೆ ಎಂದು ಹೇಳಿದ್ದಾರೆ.

ಕಳೆದ ವರ್ಷದಿಂದ ಸಮಸ್ಯೆ ಜಾಸ್ತಿಯಾಗುತ್ತಿದೆ. ಎಚ್‌ಸಿಎ ನಿರಂತರವಾಗಿ ಬೆದರಿಕೆ ಹಾಕುತ್ತಿದೆ, ಒಪ್ಪಂದದ ಪ್ರಕಾರ ಇರಬೇಕೆಂದು ನಾವು ಬಯಸುತ್ತೇವೆ. ಅದರ ಪ್ರಕಾರ ನಾವು ಪ್ರತಿ ಸ್ಟ್ಯಾಂಡ್‌ನಲ್ಲಿ 10 ಪ್ರತಿಶತದಷ್ಟು ಉಚಿತ ಟಿಕೆಟ್‌ಗಳನ್ನು ಹಂಚುತ್ತೇವೆ ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಚರ್ಚಿಸಲು ಮತ್ತು ಪರಿಹರಿಸಲು ಫ್ರಾಂಚೈಸಿ ಔಪಚಾರಿಕವಾಗಿ ಸುಪ್ರೀಂ ಕೌನ್ಸಿಲ್ ಸದಸ್ಯರೊಂದಿಗೆ ಸಭೆ ನಡೆಸುವಂತೆ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+