ಆರ್‌ಸಿಬಿ ಸ್ಟಾರ್ ಕೃನಾಲ್‌ ಪಾಂಡ್ಯ ಟೀಮ್ ಇಂಡಿಯಾಗೆ ಆಯ್ಕೆ ಆಗ್ತಾರಾ? ದಿಗ್ಗಜರು ಹೇಳೋದೇನು?

Krunal Pandya: ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅವರು ತಮ್ಮ 36ನೇ ವಯಸ್ಸಿನಲ್ಲಿ ಮತ್ತೆ ಭಾರತೀಯ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ವಯಸ್ಸು ಕೇವಲ ಒಂದು ಸಂಖ್ಯೆ, ಪ್ರದರ್ಶನವೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೃನಾಲ್‌ ಪಾಂಡ್ ಅವರು ಕೂಡ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಚರ್ಚೆಗಳು ಶುರುವಾಗಿವೆ.

ಭುವಿ ಅವರ ಈ ಪುನರಾಗಮನದ ಬೆನ್ನಲ್ಲೇ ಐಪಿಎಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿಯ ಆಲ್‌ರೌಂಡರ್ ಕೃನಾಲ್ ಪಾಂಡ್ಯ (35) ಅವರಿಗೂ ಭಾರತ ತಂಡದಲ್ಲಿ ಮತ್ತೆ ಅವಕಾಶ ಸಿಗಬೇಕೇನ್ನುವ ಚರ್ಚೆಗಳು ಜೋರಾಗಿವೆ. ಹಾಗಾದ್ರೆ ಈ ವಿಚಾರದಲ್ಲಿ ಯಾರೆಲ್ಲಾ ಕೃನಾಲ್ ಪರ ಬ್ಯಾಟ್ ಬೀಸಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Sunil Gavaskar Murali Kartik Back Royal Challengers Bengaluru Star Krunal Pandya for India Comeback

ಕೃನಾಲ್‌ ಆಯ್ಕೆಗೆ ಗವಾಸ್ಕರ್, ಮುರಳಿ ಕಾರ್ತಿಕ್ ಬೆಂಬಲ

ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಹಾಗೂ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಅವರು ಕೃಮಾಲ್ ಪರ ಧ್ವನಿ ಎತ್ತಿದ್ದಾರೆ. ಸುನಿಲ್ ಗವಾಸ್ಕರ್ ಅವರು ಮಾತನಾಡಿ, 'ವಿಶ್ವಕಪ್‌ಗಳನ್ನು ಗೆಲ್ಲಬೇಕಾದರೆ ವಯಸ್ಸನ್ನು ನೋಡದೆ, ಪಂದ್ಯಗಳನ್ನು ಗೆಲ್ಲಿಸಿಕೊಡುವ ಆಟಗಾರರನ್ನು ಆಯ್ಕೆ ಮಾಡಬೇಕು. ಕೃನಾಲ್ ಐಪಿಎಲ್ ಮತ್ತು ದೇಶಿ ಕ್ರಿಕೆಟ್‌ನಲ್ಲಿ ಫಿಟ್ ಆಗಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಪ್ರಸ್ತುತ ಭಾರತದ ಅತ್ಯಂತ ಬುದ್ಧಿವಂತ ಕ್ರಿಕೆಟಿಗರಲ್ಲಿ ಒಬ್ಬರು,' ಎಂದು ಹೇಳಿದ್ದಾರೆ.

ಮುರಳಿ ಕಾರ್ತಿಕ್ ಹೇಳಿದ್ದೇನು?

ಮುರಳಿ ಕಾರ್ತಿಕ್ ಅವರು ಮಾತನಾಡಿ, 'ನಾವು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಿ ಪ್ರಸ್ತುತ ಕ್ಷಣವನ್ನು ಮರೆಯಬಾರದು. ಕೃನಾಲ್ ಪಾಂಡ್ಯ ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅದ್ಭುತವಾಗಿ ಆಡಿ ಪಂದ್ಯಪುರುಷ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಫಾರ್ಮ್‌ನಲ್ಲಿರುವ ಆಟಗಾರರನ್ನು ವಯಸ್ಸಿನ ಕಾರಣಕ್ಕೆ ಪಕ್ಕಕ್ಕಿಡುವುದು ಸರಿಯಲ್ಲ,' ಹೇಳಿ ಗಮನ ಸೆಳೆದಿದ್ದಾರೆ.

ಆರ್‌ಸಿಬಿಯಲ್ಲಿ ಉತ್ತಮ ಪ್ರದರ್ಶನ

ಕೃನಾಲ್ ಪಾಂಡ್ಯ ಐಪಿಎಲ್‌ನಲ್ಲಿ 158 ಪಂದ್ಯಗಳಿಂದ 107 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಪರ ಸ್ಪಿನ್ ವಿಭಾಗದಲ್ಲಿ 31 ಪಂದ್ಯಗಳಲ್ಲಿ 31 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ತಮ್ಮ ಬೌಲಿಂಗ್‌ನಲ್ಲಿ ಬೌನ್ಸರ್‌ಗಳು, ನಿಧಾನಗತಿಯ ಫ್ಲಾಟ್ ಎಸೆತಗಳು ಹಾಗೂ ಎಕಾನಮಿ ನಿಯಂತ್ರಣದ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುತ್ತಿದ್ದಾರೆ.

ಕಳೆದ ಎರಡು ಐಪಿಎಲ್ ಆವೃತ್ತಿಗಳಲ್ಲಿ ಅವರ ಎಕಾನಮಿ ರೇಟ್ 8.41 ಆಗಿದ್ದು, ಇದು ವರುಣ್ ಚಕ್ರವರ್ತಿ, ರಶೀದ್ ಖಾನ್ ಮತ್ತು ಕುಲದೀಪ್ ಯಾದವ್ ಅವರಿಗಿಂತ ಉತ್ತಮವಾಗಿದೆ. ಅಷ್ಟೇ ಅಲ್ಲದೆ, ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಕೃನಾಲ್ ಉತ್ತಮ ಕೊಡುಗೆ ನೀಡುತ್ತಿದ್ದು, ಕಳೆದ ಆವೃತ್ತಿಯಲ್ಲಿ 145.80 ಸ್ಟ್ರೈಕ್ ರೇಟ್‌ನಲ್ಲಿ 226 ರನ್ ಗಳಿಸಿದ್ದಾರೆ.

ಕೃನಾಲ್ ಕಮ್‌ಬ್ಯಾಕ್‌ಗೆ ತಡೆಯಾಗುತ್ತಿರುವುದೆಲ್ಲಿ?

ಕೃನಾಲ್ ಪಾಂಡ್ಯ ಅವರ ಕಮ್‌ಬ್ಯಾಕ್‌ ಮಾಡುವ ಹಾದಿಯಲ್ಲಿ ಅತಿ ದೊಡ್ಡ ಸವಾಲೆಂದರೆ ಭಾರತ ತಂಡದ ಮುಖ್ಯ ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್. ಅಕ್ಷರ್ ಪವರ್‌ಪ್ಲೇನಲ್ಲಿ ಉತ್ತಮ ಬೌಲಿಂಗ್ ಮಾಡುವುದರ ಜೊತೆಗೆ ವಿಕೆಟ್ ಕಬಳಿಸುವ ಹಾಗೂ ಕೆಳಕ್ರಮಾಂಕದಲ್ಲಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಪ್ರಸ್ತುತ ಭಾರತ ತಂಡದ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ.

ಜೊತೆಗೆ ವಾಷಿಂಗ್ಟನ್ ಸುಂದರ್ ಮತ್ತು ನಮನ್ ಧೀರ್ ಅವರಂತಹ ಆಫ್-ಸ್ಪಿನ್ ಆಲ್ರೌಂಡರ್‌ಗಳೂ ತಂಡದ ರೇಸ್‌ನಲ್ಲಿದ್ದಾರೆ. ಆದ್ದರಿಂದ ಅಕ್ಷರ್ ಪಟೇಲ್ ಇರುವಾಗ ಅವರದ್ದೇ ಶೈಲಿಯ ಮತ್ತೊಬ್ಬ ಎಡಗೈ ಆಲ್ರೌಂಡರ್ ಅನ್ನು ಆಯ್ಕೆ ಮಾಡುವುದು ಮ್ಯಾನೇಜ್‌ಮೆಂಟ್‌ಗೆ ಸವಾಲಿನ ಕೆಲಸವಾಗಿದೆ.

ಅಕ್ಷರ್ ಪಟೇಲ್ ತಂಡದಲ್ಲಿ ಪ್ರಬಲವಾಗಿ ನೆಲೆಯೂರಿದ್ದರೂ, ಕೃನಾಲ್ ಅವರ ಫಿಟ್‌ನೆಸ್, ತಂತ್ರಗಾರಿಕೆ ಮತ್ತು ಮೈದಾನದಲ್ಲಿ ತೋರುವ ಆಕ್ರಮಣಕಾರಿ ಪ್ರದರ್ಶನ ಅವರನ್ನು ಬಲವಾದ ಸ್ಪರ್ಧಿಯನ್ನಾಗಿ ಮಾಡಿದೆ. ಆಯ್ಕೆಗಾರರು ವಯಸ್ಸನ್ನು ಬದಿಗೊತ್ತಿ ಪ್ರಸ್ತುತ ಫಾರ್ಮ್‌ಗೆ ಆದ್ಯತೆ ನೀಡಿದರೆ, ಭುವನೇಶ್ವರ್ ಕುಮಾರ್ ಅವರಂತೆಯೇ ಕೃನಾಲ್ ಪಾಂಡ್ಯ ಕೂಡ ಶೀಘ್ರದಲ್ಲೇ ಭಾರತೀಯ ನೀಲಿ ಜರ್ಸಿಯಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+